Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಿಸ್ ಮತ್ತು ಭಾರತೀಯ ಪ್ರಜೆಗಳನ್ನು ಗುರುತಿಸಿ ಮತ್ತು ಮರಳಿಸಲು ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ನಡುವೆ ದ್ವಿಪಕ್ಷೀಯ ತಾಂತ್ರಿಕ ಒಪ್ಪಂದಕ್ಕೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸ್ವಿಸ್ ಮತ್ತು ಭಾರತೀಯ ಪ್ರಜೆಗಳನ್ನು ಗುರುತಿಸಿ ಮತ್ತು ಅವರನ್ನು ಮರಳಿಸಲು ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ನಡುವೆ ದ್ವಿಪಕ್ಷೀಯ ತಾಂತ್ರಿಕ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಜಾರಿಗೊಳಿಸಲು ತನ್ನ ಅನುಮೋದನೆ ನೀಡಿದೆ.

ದ್ವಿಪಕ್ಷೀಯ ತಾಂತ್ರಿಕ ಒಪ್ಪಂದ (ಬಿ.ಟಿ.ಎ.) ತೀರ್ಮಾನವು ಪ್ಯಾಕೇಜ್ ಡೀಲ್ ಸ್ವರೂಪದಲ್ಲಿ ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ ಒಪ್ಪಂದವನ್ನೂ ಒಳಗೊಂಡಿರುತ್ತದೆ.

ಬಿಟಿಎ ಮೂಲಭೂತವಾಗಿ ಯಾವುದೇ ಹೆಚ್ಚುವರಿ ಜವಾಬ್ದಾರಿಗಳನ್ನು ಪರಿಚಯಿಸುವ ಅಥವಾ ನಿಖರವಾದ ಕಾಲಮಿತಿ ಇಲ್ಲದೆ ಎರಡು ದೇಶಗಳ ನಡುವಿನ ಅನಿಯಮಿತ ವಲಸಿಗರು ದೇಶಕ್ಕೆ ಮರಳಲು ಅಸ್ತಿತ್ವದಲ್ಲಿರುವ ವಿಧಾನವನ್ನು ಅಧಿಕೃತಗೊಳಿಸಲು ಸಹಕಾರ ನೀಡುವ ಗುರಿ ಹೊಂದಿದೆ. ಭಾರತದವರೆಂದು ಹೇಳಲಾಗಿರುವ ಸ್ವಿಟ್ಜರ್ಲ್ಯಾಂಡ್ ನಲ್ಲಿರುವ ಅನಿಯಮಿತ ವಲಸಿಗರ ಸಂಖ್ಯೆ ಅಂದಾಜು ಮಾಡಿರುವಂತೆ 100ಕ್ಕಿಂತ ಕಡಿಮೆ ಇದೆ. ಈಗ ಪ್ರಸ್ತಾಪಿಸಿರುವ ರೀತಿಯಲ್ಲಿ ಸ್ವಿಟ್ಜರ್ಲ್ಯಾಂಡ್ ನೊಂದಿಗೆ ಬಿಟಿಎ ಅನುಮೋದನೆ ಆದರೆ, ಪದೇ ಪದೇ ಈ ವಿಷಯವನ್ನು ನಮ್ಮೊಂದಿಗೆ ಪ್ರಸ್ತಾಪಿಸುತ್ತಿರುವ ಐರೋಪ್ಯ ರಾಷ್ಟ್ರಗಳೊಂದಿಗೆ ಇದನ್ನು ಮಾದರಿಯಾಗಿ ಬಳಕೆ ಮಾಡುವ ಅವಕಾಶವನ್ನೂ ಒದಗಿಸುತ್ತದೆ. ಇದು ಕಾನೂನುಬದ್ಧ ಭಾರತೀಯ ಪ್ರವಾಸಿಗರಿಗೆ ವೀಸಾ ಮತ್ತು ಕೆಲಸದ ಅನುಮತಿ ಆಡಳಿತದ ಉದಾರೀಕರಣಕ್ಕಾಗಿ ನಿಯಂತ್ರಣ ಮತ್ತು ಪುನರ್ಸೇರ್ಪಡೆ ಒಪ್ಪಂದಕ್ಕೂ ಅವಕಾಶ ಮಾಡಿಕೊಡಲು ನೆರವಾಗುತ್ತದೆ. ಇದು ಇತ್ತೀಚೆಗೆ ಸಮಾರೋಪಗೊಂಡ ಭಾರತ-ಇಯು ನಡುವಿನ ವಲಸೆ ಮತ್ತು ಸಂಚಾರ ಕುರಿತ ಸಮಾನ ಕಾರ್ಯಕ್ರಮಪಟ್ಟಿಯ ಸಭೆಯ(ಸಿ.ಎ.ಎಂ.ಎಂ.) ಗುರಿಯ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ.

*****

AKT/VBA/AK –