Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಿಸ್ ಒಕ್ಕೂಟದ ಅಧ್ಯಕ್ಷರ ಭಾರತ ಪ್ರವಾಸದ ವೇಳೆ   ಪ್ರಧಾನ ಮಂತ್ರಿ ಯವರು ಮಾಧ್ಯಮಗಳಿಗೆ ನೀಡಿದ  ಹೇಳಿಕೆ.    ಆಗಸ್ಟ್  31, 2017 

ಸ್ವಿಸ್ ಒಕ್ಕೂಟದ ಅಧ್ಯಕ್ಷರ ಭಾರತ ಪ್ರವಾಸದ ವೇಳೆ   ಪ್ರಧಾನ ಮಂತ್ರಿ ಯವರು ಮಾಧ್ಯಮಗಳಿಗೆ ನೀಡಿದ  ಹೇಳಿಕೆ.    ಆಗಸ್ಟ್  31, 2017 


 
ಮಾನ್ಯ ಘನತೆವೆತ್ತ   ಮೇಡಂ ಅಧ್ಯಕ್ಷರೇ ಹಾಗೂ ವಿಶೇಷ ಗೌರವಾನ್ವಿತ ಅತಿಥಿಗಳೇ,
 
ಮಾಧ್ಯಮ ಪ್ರತಿನಿಧಿಗಳೇ,
 
ಭಾರತಕ್ಕೆ ಆಗಮಿಸಿರುವ ಮೇಡಂ  ಅಧ್ಯಕ್ಷರನ್ನು ಹಾಗೂ ಅವರ ನಿಯೋಗವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ..
 
ಮಾನ್ಯರೆ,  
 
ಭಾರತ ನಿಮಗೆ ಹೊಸ ಪರಿಚಯವೇನಲ್ಲ.  ಈ ಹಿಂದೆ ಹಲವು ಸಲ ನೀವು ಭಾರತಕ್ಕೆ ಭೇಟಿಕೊಟ್ಟಿದ್ದೀರಿ.  ಹೀಗಿದ್ದರೂ, ಸ್ವಾತಂತ್ರ್ಯೋತ್ಸವದ 70 ನೇ  ವರ್ಷಾಚರಣೆ ಸುಸಂದರ್ಭದಲ್ಲಿ ಅಧ್ಯಕ್ಷರಾಗಿ ನಿಮ್ಮ ಭಾರತ ಭೇಟಿ ವಿಶೇಷ ಎನ್ನಿಸಿಕೊಳ್ಳುತ್ತದೆ  ಹಾಗೂ  ಇದು ಭಾರತ ಹಾಗೂ ಸ್ವಿಸ್ ರಾಷ್ಟ್ರ  ಗಳ  ನಡುವಿನ ಸ್ನೇಹ ಸಂಬಂಧ ಏಳು ದಶಕಗಳನ್ನು ಪೂರ್ಣಗೊಳಿಸಿರುವಂತಹ ಸುಸಮಯ .  2016 ರಲ್ಲಿ ಸ್ವಿಟ್ಜರ್ಲ್ಯಾಂಡ್ ಭೇಟಿ ವೇಳೆ ನಮಗೆ ಸಿಕ್ಕಂತಹ ವಿಶೇಷ ಆದರ   ಆತಿಥ್ಯಗಳ ವಿಶೇಷ ಅನುಭವ ನಿಮಗೂ ಸಿಗಲಿದೆ ಎಂದೇ ನಾನು ಭಾವಿಸುತ್ತೇನೆ. ಇದಿಷ್ಟೆ ಅಲ್ಲದೇ, ಉಭಯ ರಾಷ್ಟ್ರಗಳು ಪ್ರತಿಯೊಂದು ಹಂತಗಳಲ್ಲೂ ಗಹನವಾದ ಸಂಬಂಧವನ್ನು ಪರಸ್ಪರ ಸಾಧಿಸುವುದನ್ನು ನಾನು ಉತ್ಸುಕನಾಗಿಯಷ್ಟೆ ಅಲ್ಲದೇ, ಸಂತೋಷದಿಂದ ಎದುರುನೋಡುತ್ತಿದ್ದೇನೆ.
 
ಸ್ನೇಹಿತರೇ,
 
ದ್ವೀಪಕ್ಷೀಯ, ಪ್ರಾದೇಶಿಕ, ಹಾಗೂ ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆ ವಿಸ್ತೃತ ಹಾಗೂ ಅರ್ಥಭರಿತ ಚರ್ಚೆ ಯನ್ನು ಇವತ್ತು ನಾವು ನಡೆಸಿದ್ದೇವೆ. ಹಾಗೂ ನಮ್ಮ ಈ ದ್ವೀಪಕ್ಷೀಯ ಸಂಬಂಧ ಇವತ್ತಿನ  ಭೇಟಿಯಿಂದ ಮತ್ತಷ್ಟು ಬಲಿಷ್ಟ ಹಾಗೂ ಸಮೃದ್ಧಗೊಳ್ಳಲಿದೆ .
 
ನಿಶಸ್ತ್ರೀಕರಣ ಹಾಗೂ ಭೌಗೋಳಿಕ ವಿಸ್ತರಣೆಯಂತಹ ಸೂಕ್ಷ್ಮ ವಿಚಾರಗಳು ಸ್ವಿಟ್ಜರ್ಲ್ಯಾಂಡ್ ಮತ್ತು ಭಾರತ ಉಭಯ ರಾಷ್ಟ್ರಗಳಿಗೂ  ಬಹಳಷ್ಟು ಪ್ರಾಮುಖ್ಯತೆ ಪಡೆದಂತಹ ವಿಚಾರಗಳಾಗಿವೆ  ಹಾಗೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಎಂಟಿಸಿಆರ್ ಗೆ ಸೇರ್ಪಡೆ  ಹಾಗು  ಸ್ವಿಟ್ಜರ್ಲ್ಯಾಂಡ್ ನಮ್ಮ ಬೆಂಬಲಕ್ಕೆ ನಿಂತಿರುವುದಕ್ಕೆ ನಾವು ತುಂಬಾ  ಆಭಾರಿಯಾಗಿದ್ದೇವೆ.
 
ಭಾರತ ಹಾಗೂ ಯುರೋಪಿಯನ್ ಮುಕ್ತ ವ್ಯಾಪಾರ ಸಂಘಟನೆ  ನಡುವಿನ ವ್ಯಾಪಾರ ಹಾಗೂ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಸಂಬಂಧಿಸಿದಂತೆಯೂ ಪರಸ್ಪರ ಚರ್ಚಿಸಲಾಗಿದೆ. ಮತ್ತು ಈ ಒಪ್ಪಂದಗಳ ಮೇಲಿನ ಪ್ರತಿಫಲಗಳಿಗೆ ಕುರಿತಾದಂತಹ ಚರ್ಚೆಗಳನ್ನು  ಈಗಾಗಲೇ ಪ್ರಾರಂಭಿಸಲಾಗಿರುವುದು ಸ್ವಾಗತಾರ್ಹ ಹೆಜ್ಜೆ.   ಮೇಲಾಗಿ ಪರಸ್ಪರ ಎರಡೂ ಕಡೆಯಿಂದಲೂ ಈ ಒಡಂಬಡಿಕೆಯನ್ನೂ ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ಸೂಕ್ತ ಹಾಗೂ ಅಗತ್ಯವಾದಂತಹ ಬದ್ಧತೆ ಪ್ರದರ್ಶಿತವಾಗಿದೆ. ಆರ್ಥಿಕ ವಹಿವಾಟಿನಲ್ಲಿ ಪಾರದರ್ಶಕತೆಯನ್ನು ಕಂಡುಕೊಳ್ಳುವ ವಿಚಾರ,  ಇಡೀ ವಿಶ್ವವೂ ಗಂಭೀರವಾಗಿ ಪರಿಗಣಿಸುವಂತಹ ವಿಚಾರವಾಗಿದೆ.  ಅದು ಕಪ್ಪುಹಣ ಅಥವಾ ಕೆಟ್ಟಹಣವೇ ಆಗಿರಲಿ ಅಥವಾ ಅಕ್ರಮ ಹಣವರ್ಗಾವಣೆಯ ಹವಾಲಾ ಹಣವೇ ಆಗಿರಲಿ ಅಥವಾ ಶಸ್ತ್ರಾಸ್ತ್ರ ಹಾಗೂ ಮಾದಕ  ವಸ್ತುಗಳಿಗೆ ಸಂಬಂಧಿಸಿದ ಹಣಕಾಸೆ ಆಗಿರಲಿ . ಜಗತ್ತಿನ  ಈ ಶಾಪವನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಸ್ವಿಟ್ಜರ್ಲ್ಯಾಂಡ್ ಜೊತೆಗೆ ಭಾರತ ಕೈ ಜೋಡಿಸುತ್ತದೆ ಹಾಗೂ ಈ ನಿಟ್ಟಿನಲ್ಲಿ ಒಮ್ಮತದ ಒಪ್ಪಂದ ಸಾಧಿಸಲಾಗುತ್ತದೆ.
 
 
ಕಳೆದ ವರ್ಷ ನಾವು ತೆರಿಗೆಗೆ   ಸಂಬಂಧಿಸಿದ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ ಜಂಟಿಹೇಳಿಕೆ ಕುರಿತಾಗಿ ಪರಸ್ಪರ ಸಹಿ ಹಾಕಿದ್ದೆವು  ಹಾಗೂ ಈ ಮಹತ್ವದ ಒಪ್ಪಂದ ದ ಪ್ರಕಾರ ಸ್ವಿಟ್ಜರ್ಲ್ಯಾಂಡ್ ಆಂತರಿಕ ಕಾರ್ಯವಿಧಾನಗಳು ಸಂಪೂರ್ಣಗೊಂಡ ನಂತರ ಸ್ವಯಂಚಾಲಿತವಾಗಿ ಮಾಹಿತಿ ಪರಸ್ಪರ ವಿನಿಮಯವಾಗಲಿದೆ. ಇನ್ನು ನಮ್ಮ ಆರ್ಥಿಕತೆಗೆ ಸಂಬಂಧಿಸಿದಂತೆ ವಿದೇಶಿ ನೇರ ಹೂಡಿಕೆ ಬಹುಮುಖ್ಯ ಅಗತ್ಯವಾಗಿದೆ ಮತ್ತು ಭಾರತ ವಿಶೇಷ ಹಾಗೂ ನಿರ್ದಿಷ್ಟವಾಗಿ ಈ ನಿಟ್ಟಿನಲ್ಲಿ ಸ್ವಿಟ್ಜರ್ಲ್ಯಾಂಡ್ ದೇಶದ ಹೂಡಿಕೆದಾರರನ್ನು ಸ್ವಾಗತಿಸುತ್ತದೆ  ಹಾಗೂ ಈ ನಿಟ್ಟಿನಲ್ಲಿ ನೂತನ ದ್ವೀಪಕ್ಷೀಯ ಒಪ್ಪಂದದ ಅವಶ್ಯಕತೆಗಳಿಗೆ ಸಂಬಂಧಿಸಿದ ಚರ್ಚೆಗಳನ್ನು ಮುಂದುವರಿಸಲು ಪರಸ್ಪರ ಸಮ್ಮತಿಸಿದ್ದೇವೆ. ಭಾರತದ ಸಮೃದ್ಧಿ ಹಾಗು ಅಭಿವೃದ್ಧಿಯ ಪಯಣದಲ್ಲಿ ಭಾಗಿಯಾಗುವಂತಹ ವಿಶೇಷ ಹಾಗೂ ಸಮೃದ್ಧ ಅವಕಾಶಗಳು ಸ್ವಿಸ್ ಕಂಪನಿಗಳಿಗೆ ಲಭಿಸಿದೆ.
 
ಪರಸ್ಪರ ಲಾಭದಾಯಕ ದೃಷ್ಟಿಕೋನದ ನಿಟ್ಟಿನಲ್ಲಿ ವಾಣಿಜ್ಯ ವಹಿವಾಟವನ್ನೂ  ವ್ಯಾಪಾರ ಸಹಯೋಗದತ್ತ ನಿರಂತರವಾಗಿ ವೃದ್ಧಿಗೊಳಿಸುವಂತಹ ಮಹತ್ವಾಕಾಂಕ್ಷೆ ಉಭಯ ರಾಷ್ಟ್ರಗಳ ಉದ್ಯಮಿಗಳು ಹೊಂದಿರುವುದು ಅವರುಗಳ ಜೊತೆಗೆ ನಾವು ಇವತ್ತು ನಡೆಸಿದ ಚರ್ಚೆಯಲ್ಲಿ ನಮ್ಮ ಅನುಭವಕ್ಕೆ ಸಾಕ್ಷಿಯಾಗಿದೆ.
 
ಭಾರತೀಯ ಸಾಂಪ್ರದಾಯಿಕ ಔಷಧಿಗಳು ಅದರಲ್ಲೂ ನಿರ್ದಿಷ್ಟ ವಾಗಿ   ಆರ್ಯುವೇದ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದೆ ಹಾಗೂ ಈ ನಿಟ್ಟಿನಲ್ಲಿ ಆರ್ಯುವೇದದ ಮಹತ್ವನ್ನು ಸ್ವಿಟ್ಜರ್ಲ್ಯಾಂಡ್ ಗುರುತಿಸಿದ್ದಷ್ಟೆ ಅಲ್ಲದೇ ಪ್ರಾಮಖ್ಯತೆ ಉಳ್ಳಂತಹ  ಈ ವಿಚಾರದಲ್ಲಿ ಹೆಚ್ಚು ಸಹಕಾರವನ್ನು ಸಾಧಿಸುವ ಕುರಿತಾಗಿ ಉತ್ಸುಕತೆಯನ್ನ ಪ್ರದರ್ಶಿಸಿರುವುದು    ನನಗೆ ಅತೀವ ಸಂತಸ ಮೂಡಿಸಿದೆ.
 
 
ವೃತ್ತಿಪರ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸ್ವಿಟ್ಜರ್ಲ್ಯಾಂಡ್ ನಿಂದ ಪ್ರಯೋಜನಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕ್ರಮವಾಗಿ ಉಭಯ ರಾಷ್ಟ್ರಗಳು ನೈಪುಣ್ಯತೆಯ ರೂಪದಲ್ಲಿ ಜಂಟಿ ಕ್ರಮವನ್ನು ಕೈಗೊಂಡಿದೆ ಹಾಗೂ ಈ ಕ್ರಮದಿಂದಾಗಿ ಐದು ಸಾವಿರಕ್ಕೂ ಅಧಿಕ ಭಾರತೀಯ ನಾಗರಿಕರು ಪ್ರಯೋಜನಕಾರಿ ಲಾಭಗಳನ್ನು ಪಡೆಯಲಿದ್ದಾರೆ. ಇನ್ನೂ ಈ ನಿಟ್ಟಿನಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಉತ್ಸುಕರಾಗಿದ್ದೇವೆ.
 
ಸ್ನೇಹಿತರೇ,
 
ಹವಾಮಾನದಲ್ಲಿನ ಬದಲಾವಣೆ ವಿಶ್ವದ ಪ್ರತಿಯೊಂದು ರಾಷ್ಟ್ರಗಳು ಎದುರಿಸುತ್ತಿರುವಂತಹ ಅತಿದೊಡ್ಡ ಸವಾಲಾಗಿದೆ. ಮತ್ತು ಈ ನಿಟ್ಟಿನಲ್ಲಿ ವಿಭಿನ್ನ ಜವಬ್ದಾರಿಗಳನ್ನು ನಿರ್ವಹಿಸುವ ಹೊರತಾಗಿಯು ಸಾಮಾನ್ಯ ತತ್ವಗಳ ತಳಹದಿಯಲ್ಲಿ ಪ್ಯಾರಿಸ್ ಒಪ್ಪಂದವನ್ನು ಅನುಷ್ಠಾನಗೊಳಿಸುವ ಕುರಿತಾಗಿ ನಾವು ಸಮ್ಮತಿಸಿದ್ದೇವೆ ಮತ್ತು ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸೂಕ್ತ ಹಾಗೂ ಪರಿಪೂರ್ಣ ಹಾದಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಸಮ್ಮತಹೊಂದಿದ್ದೇವೆ. ಅಣುಪೂರೈಕೆ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸದಸ್ಯತ್ವ ಪಡೆದುಕೊಂಡ ಹಿನ್ನೆಲೆಯಲ್ಲಿ ವೃದ್ಧಿಸಿರುವ  ಸ್ವಚ್ಛ ಇಂಧನಗಳ ಅಗತ್ಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಭಾರತ ಸಹಕಾರವನ್ನ ಪಡೆದುಕೊಂಡಿತ್ತು. ಈ ನಿಟ್ಟಿನಲ್ಲಿ ಎನ್ಎಸ್ ಜಿ ಯ ಸದಸ್ಯತ್ವನ್ನು ಪಡೆದುಕೊಳ್ಳುವ ಕುರಿತಾಗಿ ಸ್ವಿಟ್ಜರ್ಲ್ಯಾಂಡ್ ನ ನಿರಂತರ ಬೆಂಬಲವನ್ನು ಭಾರತ ಸ್ಮರಿಸುತ್ತದೆ ಹಾಗೂ ಧನ್ಯವಾದವನ್ನು ಸಲ್ಲಿಸುತ್ತದೆ.
 
ಅಂತಾರಾಷ್ಟ್ರೀಯ  ಸೌರ ಒಕ್ಕೂಟಗಳಂತಹ ಮಹತ್ವದ ಒಪ್ಪಂದಗಳು ಹಾಗೂ ನಮ್ಮ ಪರಿಶ್ರಮ, ಭಾರತದ ಸ್ವಚ್ಛ ಇಂಧನ ಹಾಗೂ ಹಸಿರು ಭವಿಷ್ಯವನ್ನು ಪ್ರತಿಫಲಿಸುವಂತಹ   175 ಗಿಗಾವ್ಯಾಟ್ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲವನ್ನು 2022 ರೊಳಗೆ ಸಾಧಿಸುವ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
 
ಘನತೆವೆತ್ತವರೇ ,
 ನಮ್ಮ  ಸಂಬಂಧವನ್ನು ನೂತನ ಸ್ತರಕ್ಕೆ ಕೊಂಡೊಯ್ಯುವ ಸಲುವಾಗಿ ನಿಮ್ಮ ಭಾರತದ ಭೇಟಿ ಅತ್ಯಂತ ಸಹಕಾರಿಯಾಗಲಿದೆ ಎನ್ನುವ ಸಂಪೂರ್ಣ ವಿಶ್ವಾಸ ನಮಗಿದೆ ಹಾಗೂ ಮುಂಬರುವ ದಿನಗಳಲ್ಲಿ ಜಂಟಿಯಾಗಿ ನಿಮ್ಮೊಂದಿಗೆ ಕಾರ್ಯನಿರ್ವಹಿಸಲು ಅತ್ಯಂತ ಉತ್ಸುಕನಾಗಿದ್ದೇನೆ 
 
ಇವತ್ತಿನ ಅರ್ಥಪೂರ್ಣ ಚರ್ಚೆಗೆ ಸಂಬಂಧಿಸಿದಂತೆ   ,  ಮೇಡಂ  ಅಧ್ಯಕ್ಷರೇ ,   ನಿಮಗೆ ಧನ್ಯವಾದವನ್ನು ಅರ್ಪಿಸುತ್ತಿದ್ದೇನೆ. ಹಾಗೂ ಮತ್ತೊಮ್ಮೆ ನಿಮ್ಮನ್ನ ಭಾರತಕ್ಕೆ ಹೃದಯಪೂರ್ವಕವಾಗಿ ಸ್ವಾಗತಿಸುವುದರ ಜೊತೆಯಲ್ಲಿಯೇ ನಿಮ್ಮ ಈ ಭೇಟಿ ವಿಶೇಷ ಹಾಗೂ ಅರ್ಥಪೂರ್ಣವಾಗಿರಲಿ ಎಂದು ಆಶಿಸುತ್ತೇನೆ ಹಾರೈಸುತ್ತೇನೆ.
 
ಧನ್ಯವಾದಗಳು.