Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರ ಸಂವಾದ

ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರ ಸಂವಾದ


ಪ್ರಧಾನಮಂತ್ರಿ: ಹಾಗಾದರೆ ನಿಮಗೆ ಮನೆ ಸಿಕ್ಕಿತೇ?

ಫಲಾನುಭವಿ: ಖಂಡಿತ ಸರ್, ಸಿಕ್ಕಿತು. ತಮ್ಮ ಋಣ ಎಂದೂ ತೀರಿಸಲಾಗದು. ಗುಡಿಸಲಲ್ಲಿ ಜೀವನ ನಡೆಸ್ತಿದ್ದ ನಮಗೆ ಅರಮನೆಯನ್ನೇ ಕೊಟ್ಟಿದ್ದೀರಿ. ಇಷ್ಟೊಂದು ದೊಡ್ಡ ಮನೆ ನಮಗೆ ಸಿಗುತ್ತೆ ಅಂತ ಕನಸು ಮನಸ್ಸಲ್ಲೂ ಇರಲಿಲ್ಲ. ಆದ್ರೆ ನೀವು ನಮ್ಮ ಕನಸನ್ನು ನನಸು ಮಾಡಿದ್ದೀರಿ… ಹೌದು ಸರ್.

ಪ್ರಧಾನಮಂತ್ರಿ: ಒಳ್ಳೇದು, ನಿಮಗೆಲ್ಲರಿಗೂ ಈ ಮನೆಗಳು ಸಿಕ್ಕಿರುವುದು ನನಗೂ ಸಂತೋಷ ತಂದಿದೆ. ನನಗೆ ಮನೆ ಇಲ್ಲ.

ಫಲಾನುಭವಿ: ಅಲ್ಲ ಸರ್, ನಾವೆಲ್ಲರೂ ನಿಮ್ಮ ಕುಟುಂಬದವರೇ.

ಪ್ರಧಾನಮಂತ್ರಿ: ಹೌದು, ಅದು ನಿಜ.

ಫಲಾನುಭವಿ: ಇದೆಲ್ಲ ನಿಮ್ಮಿಂದಲೇ ಸಾಧ್ಯವಾಯಿತು.

ಪ್ರಧಾನಮಂತ್ರಿ: ಹೌದಲ್ಲವೇ? ನಾವೆಲ್ಲರೂ ಸೇರಿ ಇದನ್ನ ಸಾಧ್ಯ ಮಾಡಿದ್ದೇವೆ.

ಫಲಾನುಭವಿ: ಹೌದು ಸರ್. ನಿಮ್ಮ ಕೀರ್ತಿ ಪತಾಕೆ ಹೀಗೆಯೇ ಎತ್ತರಕ್ಕೆ ಹಾರುತ್ತಿರಲಿ. ನೀವು ಯಾವಾಗಲೂ ಜಯಶಾಲಿಯಾಗಿರಲಿ.

ಪ್ರಧಾನಮಂತ್ರಿ: ನಮ್ಮ ಪತಾಕೆಯನ್ನು ಎತ್ತರದಲ್ಲಿ ಹಾರಿಸುವುದು ನಿಮ್ಮೆಲ್ಲರ ಕೈಯಲ್ಲಿದೆ.

ಫಲಾನುಭವಿ: ನಿಮ್ಮ ಕೃಪಾಕಟಾಕ್ಷ ನಮ್ಮ ಮೇಲೆ ಸದಾ ಇರಲಿ ಸರ್.

ಪ್ರಧಾನಮಂತ್ರಿ: ನನ್ನ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ ನನ್ನ ಮೇಲಿರಲಿ.

ಫಲಾನುಭವಿ: ಶ್ರೀರಾಮಚಂದ್ರನಿಗಾಗಿ ನಾವು ಎಷ್ಟೋ ವರ್ಷ ಕಾಯ್ದ ಹಾಗೆ ನಿಮಗಾಗಿಯೂ ಕಾಯುತ್ತಿದ್ದೆವು. ಕೊಳೆಗೇರಿಯಿಂದ ಈ ಸುಂದರ ಮನೆಗೆ ಬಂದಿರುವುದು ನಮಗೆ ಅತೀವ ಸಂತೋಷ ತಂದಿದೆ. ನೀವು ನಮಗೆ ಇಷ್ಟು ಹತ್ತಿರವಾಗಿರುವುದು ನಮ್ಮ ಪುಣ್ಯ.

ಪ್ರಧಾನಮಂತ್ರಿ: ಈ ದೇಶದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಸೇರಿ ಎಷ್ಟೆಲ್ಲಾ ಸಾಧಿಸಬಹುದು ಅಂತ ಎಲ್ಲರೂ ನಂಬಬೇಕು.

ಫಲಾನುಭವಿ: ಖಂಡಿತ, ಅದು ಸತ್ಯ.

ಪ್ರಧಾನಮಂತ್ರಿ: ನೀವು ಗಟ್ಟಿ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ಈಗಿನ ಕಾಲದಲ್ಲಿ ಕೆಲವರು “ನಾನು ಕೊಳಚೆ ಪ್ರದೇಶದಲ್ಲಿ ಹುಟ್ಟಿದ್ದೇನೆ, ನಾನು ಜೀವನದಲ್ಲಿ ಏನು ಸಾಧಿಸಲಿಕ್ಕೆ ಸಾಧ್ಯ?” ಅಂತ ಭಾವಿಸುತ್ತಾರೆ. ಆದರೆ  ಅದನ್ನ ನೀವೇ ನೋಡಿದ್ದೀರಿ, ಮಕ್ಕಳು ಕೂಡ ನೋಡುತ್ತಿದ್ದಾರೆ – ಕ್ರೀಡೆಯಲ್ಲಿ ಮಿಂಚುತ್ತಿರುವವರು, ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿರುವವರು ಹೆಚ್ಚಾಗಿ ಇಂತಹ ಕಡುಬಡತನದ ಹಿನ್ನೆಲೆಯಿಂದ ಬಂದವರೇ. ಅವರಲ್ಲಿ ಹೆಚ್ಚಿನವರು ಸಣ್ಣ, ಬಡ ಕುಟುಂಬಗಳಿಂದ ಬಂದವರು.

ಪ್ರಧಾನಮಂತ್ರಿ: ಹಾಗಾದರೆ, ನಿಮ್ಮ ಹೊಸ ಮನೆಯಲ್ಲಿ ಏನು ಮಾಡುತ್ತೀರಿ?

ಫಲಾನುಭವಿ: ಸಾರ್, ನಾನು ಓದುತ್ತೇನೆ.

ಪ್ರಧಾನಮಂತ್ರಿ: ಹಾಗಾದರೆ ನೀವು ಅಧ್ಯಯನ ಮಾಡುತ್ತೀರಿ!

ಫಲಾನುಭವಿ: ಹೌದು.

ಪ್ರಧಾನಮಂತ್ರಿ: ಹಾಗಾದರೆ, ನೀವು ಮೊದಲು  ಓದುತ್ತಾ ಇರಲಿಲ್ಲವಾ?

ಫಲಾನುಭವಿ: ಇಲ್ಲ ಸಾರ್. ಆದರೆ ಇಲ್ಲಿಗೆ ಹೋದ ನಂತರ ಚೆನ್ನಾಗಿ ಓದುತ್ತೇನೆ.

ಪ್ರಧಾನಮಂತ್ರಿ: ನಿಜವಾಗಿಯೂ? ಹಾಗಾದರೆ, ನಿಮ್ಮ ಮನಸ್ಸಿನಲ್ಲಿ ಏನಿದೆ? ನೀವು ಏನಾಗಬೇಕೆಂದು ಬಯಸುತ್ತೀರಿ?

ಫಲಾನುಭವಿ: ಮೇಡಂ.

ಪ್ರಧಾನಮಂತ್ರಿ: ನೀವು “ಮೇಡಂ” ಆಗಲು ಬಯಸುವಿರಾ? ಅಂದರೆ ನೀವು ಶಿಕ್ಷಕರಾಗಲು ಬಯಸುತ್ತೀರಿ.

ಪ್ರಧಾನಮಂತ್ರಿ: ಮತ್ತು ನೀವು?

ಫಲಾನುಭವಿ: ನಾನು ಸೈನಿಕನಾಗುತ್ತೇನೆ.

ಪ್ರಧಾನಮಂತ್ರಿ: ಸೈನಿಕ?

ಫಲಾನುಭವಿ: ನಾವು ಭಾರತದ ಧೈರ್ಯಶಾಲಿ ಸೈನಿಕರು. ನಮ್ಮ ಹೆಮ್ಮೆ ಯಾವಾಗಲೂ ಉನ್ನತ ಮಟ್ಟದಲ್ಲಿರಲಿ! ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ. ನಾವು ತ್ರಿವರ್ಣಕ್ಕಾಗಿ ದೇಶಭಕ್ತಿಯ ಹಾಡುಗಳನ್ನು ಹಾಡುತ್ತೇವೆ ಮತ್ತು ಸೈನಿಕನ ಅಮರ ಮನೋಭಾವವನ್ನು ಗೌರವಿಸುತ್ತೇವೆ. ಅದಕ್ಕಾಗಿ ನಮ್ಮ ದೇಹ, ಮನಸ್ಸು ಮತ್ತು ಸಂಪತ್ತನ್ನು ತ್ಯಾಗ ಮಾಡಲು ನಾವು ಸಿದ್ಧರಿದ್ದೇವೆ. 

ಪ್ರಧಾನಮಂತ್ರಿ: ಹಾಗಾದರೆ, ನಿಮ್ಮೆಲ್ಲಾ ಸ್ನೇಹಿತರು ಇಲ್ಲಿದ್ದಾರೆಯೇ? ನೀವು ಯಾರನ್ನಾದರೂ ಮಿಸ್ ಮಾಡಿಕೊಳ್ಳುತ್ತೀರಾ ಅಥವಾ ನಿಮ್ಮ ಹಳೆಯ ಸ್ನೇಹಿತರೊಂದಿಗೆ ಮತ್ತೆ ಸಂಪರ್ಕ ಸಾಧಿಸುತ್ತೀರಾ?

ಫಲಾನುಭವಿಗಳು: ಅವರೇ ಸರ್.

ಪ್ರಧಾನಮಂತ್ರಿ: ಆಹ್, ಇವರು ನಿಮ್ಮ ಹಳೆಯ ಸ್ನೇಹಿತರೇ?

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ಅವರು ಕೂಡ ಇಲ್ಲಿಗೆ ಬರುತ್ತಿದ್ದಾರೆಯೇ?

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ಈಗ ನಿಮಗೆ ಈ ಮನೆ ಸಿಕ್ಕಿರುವುದರಿಂದ ನಿಮಗೆ ಹೇಗನಿಸುತ್ತಿದೆ?

ಫಲಾನುಭವಿ: ತುಂಬಾ ಚೆನ್ನಾಗಿ ಅನಿಸುತ್ತಿದೆ ಸರ್. ನಾನು ಕೊಳೆಗೇರಿಯಿಂದ ಈ ಮನೆಗೆ ಬಂದಿದ್ದೇನೆ, ಮತ್ತು ಇದು ಅದ್ಭುತವಾಗಿದೆ.

ಪ್ರಧಾನಮಂತ್ರಿ: ಆದರೆ ಈಗ ಉತ್ತರ ಪ್ರದೇಶದಿಂದ ಅನೇಕ ಅತಿಥಿಗಳು ಬರುವುದಿಲ್ಲವೇ? ನಿಮ್ಮ ಖರ್ಚುಗಳು ಹೆಚ್ಚಾಗುವುದಿಲ್ಲವೇ?

ಫಲಾನುಭವಿ: ಅದು ಪರವಾಗಿಲ್ಲ ಸರ್.

ಪ್ರಧಾನಮಂತ್ರಿ: ನೀವು ಈ ಸ್ಥಳವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳುತ್ತೀರಾ?

ಫಲಾನುಭವಿ: ಹೌದು ಸರ್. ಇದನ್ನು ಚೆನ್ನಾಗಿ ನಿರ್ವಹಿಸಲಾಗುವುದು.

ಪ್ರಧಾನಮಂತ್ರಿ: ನಿಮಗೆ ಆಟದ ಮೈದಾನವೂ ಸಹ ಲಭ್ಯವಿರುತ್ತದೆ.

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ಮತ್ತು ಅಲ್ಲಿ ನೀವು ಏನು ಮಾಡುತ್ತೀರಿ?

ಫಲಾನುಭವಿ: ನಾನು ಆಡುತ್ತೇನೆ.

ಪ್ರಧಾನಮಂತ್ರಿ: ನೀವು ಆಡುತ್ತೀರಾ? ಹಾಗಾದರೆ, ಯಾರು ಓದುತ್ತಾರೆ?

ಫಲಾನುಭವಿ: ನಾನು ಓದುವುದನ್ನೂ ಮಾಡುತ್ತೇನೆ ಸರ್.

ಪ್ರಧಾನಮಂತ್ರಿ: ನಿಮ್ಮಲ್ಲಿ ಎಷ್ಟು ಜನ ಉತ್ತರ ಪ್ರದೇಶದವರು? ಎಷ್ಟು ಜನ ಬಿಹಾರದವರು? ನೀವು ಎಲ್ಲಿಂದ ಬಂದವರು?

ಫಲಾನುಭವಿ: ನಾನು ಬಿಹಾರದ ಕಡೆಯಿಂದ ಬಂದವನು ಸರ್.

ಪ್ರಧಾನಮಂತ್ರಿ: ಅರ್ಥವಾಯಿತು. ಕೊಳೆಗೇರಿಗಳಲ್ಲಿ ವಾಸಿಸುವ ಜನರು ಯಾವ ರೀತಿಯ ಕೆಲಸ ಮಾಡುತ್ತೀರಿ?

ಫಲಾನುಭವಿ: ಸರ್, ನಮ್ಮಲ್ಲಿ ಹೆಚ್ಚಿನವರು ಕೂಲಿ ಕೆಲಸ ಮಾಡುತ್ತೇವೆ.

ಪ್ರಧಾನಮಂತ್ರಿ: ಕೂಲಿ ಕೆಲಸ, ಆಟೋ ರಿಕ್ಷಾ ಚಾಲಕರೇ?

ಫಲಾನುಭವಿ: ಹೌದು ಸರ್. ನಮ್ಮಲ್ಲಿ ಕೆಲವರು ರಾತ್ರಿ ಮಂಡಿಗಳಲ್ಲಿಯೂ ಕೆಲಸ ಮಾಡುತ್ತಾರೆ.

ಪ್ರಧಾನಮಂತ್ರಿ: ಈಗ ಯಮುನಾ ನದಿಯ ಸ್ಥಿತಿಯನ್ನು ನೋಡಿದರೆ, ಮಂಡಿಗಳಲ್ಲಿ ಕೆಲಸ ಮಾಡುವವರು ಛತ್ ಪೂಜೆಯ ಸಮಯದಲ್ಲಿ ಏನು ಮಾಡುತ್ತೀರಿ?

ಫಲಾನುಭವಿ: ನಾವು ಅದನ್ನು ಇಲ್ಲಿಯೇ ಮಾಡುತ್ತೇವೆ ಸರ್.

ಪ್ರಧಾನಮಂತ್ರಿ: ಹಾಗಾದರೆ, ನೀವು ಇಲ್ಲಿಯೇ ಮಾಡಬೇಕಾ? ಓಹ್! ನೀವು ಯಮುನಾ ನದಿಯಿಂದ ಪ್ರಯೋಜನ ಪಡೆಯುತ್ತಿಲ್ಲ, ಅಲ್ಲವೇ?

ಫಲಾನುಭವಿ: ಇಲ್ಲ ಸರ್.

ಪ್ರಧಾನಮಂತ್ರಿ: ಹಾಗಾದರೆ, ನೀವು ಇಲ್ಲಿ ಏನು ಮಾಡುತ್ತೀರಿ? ನೀವೆಲ್ಲರೂ ಒಟ್ಟಿಗೆ ಹಬ್ಬಗಳನ್ನು ಆಚರಿಸುತ್ತೀರಾ?

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ನೀವು ಇಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೀರಾ?

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ಜನರು ಬಂದು ವಾಸ್ತವದಲ್ಲಿ ಈ ಸ್ವಾಭಿಮಾನ್ (ಆತ್ಮಗೌರವ) ಗೆ ಸಾಕ್ಷಿಯಾಗುವಂತೆ ಮಾಡಲು ನೀವು ಏನು ಮಾಡುತ್ತೀರಿ?

ಫಲಾನುಭವಿ: ನಾವು ಯಾವಾಗಲೂ ಎಲ್ಲರನ್ನೂ ಮುಕ್ತ ಹೃದಯದಿಂದ ಸ್ವಾಗತಿಸುತ್ತೇವೆ. ಆತಿಥ್ಯದಲ್ಲಿ ಯಾವುದೇ ಕೊರತೆ ಇರುವುದಿಲ್ಲ. ನಾವು ಯಾರ ಬಗ್ಗೆಯೂ ದ್ವೇಷವನ್ನು ಹೊಂದಿರುವುದಿಲ್ಲ ಮತ್ತು ಎಲ್ಲರೊಂದಿಗೆ ಪ್ರೀತಿ ಮತ್ತು ವಾತ್ಸಲ್ಯದಿಂದ ಬದುಕುತ್ತೇವೆ.

ಪ್ರಧಾನಮಂತ್ರಿ: ನಾವು ಒಟ್ಟಿಗೆ ಹಬ್ಬಗಳನ್ನು ಆಚರಿಸುತ್ತಲೇ ಇರಬೇಕು. ನೋಡಿ, ಮೋದೀಜಿ ಬಂದು ಇನ್ನೂ ಮನೆಗಳಿಗಾಗಿ ಕಾಯುತ್ತಿರುವವರಿಗೂ ಮನೆ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ನೀವು ಎಲ್ಲರಿಗೂ ಹೇಳಬೇಕು. ಈ ದೇಶದಲ್ಲಿರುವ ಅತ್ಯಂತ ಬಡವರಿಗೂ ಸಹ ಗಟ್ಟಿಯಾದ ಮನೆ ಇರಬೇಕು ಎಂದು ನಾವು ಸಂಕಲ್ಪ ಮಾಡಿದ್ದೇವೆ.

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಭಾವಾನುವಾದವಾಗಿದೆ.ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

 

*****