ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಹೋರಾಟಗಾರ ವಿ.ಓ. ಚಿದಂಬರಂ ಪಿಳ್ಳೈ ಅವರ ಜಯಂತಿಯಂದು ಅವರನ್ನು ಸ್ಮರಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ: “ವಿ.ಓ. ಚಿದಂಬರಂ ಪಿಳ್ಳೈ ಅವರ ಜಯಂತಿಯಂದು ಅವರನ್ನು ಸ್ಮರಿಸಲಾಗುತ್ತಿದೆ. ಅವರು ನಮ್ಮ ಸ್ವಾತಂತ್ರ್ಯ ಚಳವಳಿಯ ಪ್ರವರ್ತಕರಾಗಿ ಕೊಡುಗೆ ನೀಡಿದ್ದಾರೆ. ಅವರು ಸ್ವಾವಲಂಬಿ ಭಾರತವನ್ನು ಕಲ್ಪಿಸಿಕೊಂಡರು ಮತ್ತು ಈ ನಿಟ್ಟಿನಲ್ಲಿ ವಿಶೇಷವಾಗಿ ಬಂದರುಗಳು ಮತ್ತು ಹಡಗು ವಲಯಗಳಲ್ಲಿ ಪ್ರಮುಖ ಪ್ರಯತ್ನಗಳನ್ನು ಮಾಡಿದರು. ನಾವು ಅವರಿಂದ ಗಾಢವಾಗಿ ಪ್ರೇರಿತರಾಗಿದ್ದೇವೆ.”
***
Remembering the visionary V. O. Chidambaram Pillai on his Jayanti. He made pioneering contributions to our freedom movement. He also envisioned a self-reliant India and made key efforts towards it, especially in the ports and shipping sectors. We are deeply inspired by him.
— Narendra Modi (@narendramodi) September 5, 2021