Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಾತಂತ್ರ್ಯ ದಿನದಂದು ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಸಂಕ್ಷಿಪ್ತ ಮುಖ್ಯಾಂಶಗಳು

ಸ್ವಾತಂತ್ರ್ಯ ದಿನದಂದು ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಸಂಕ್ಷಿಪ್ತ ಮುಖ್ಯಾಂಶಗಳು

ಸ್ವಾತಂತ್ರ್ಯ ದಿನದಂದು ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಸಂಕ್ಷಿಪ್ತ ಮುಖ್ಯಾಂಶಗಳು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರುಇಂದು, 70ನೇ ಸ್ವಾತಂತ್ರ್ಯದಿನದ ಸಂದರ್ಭದಲ್ಲಿ ಕೆಂಪು ಕೋಟೆಯ ಮೇಲಿನಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ಆ ಭಾಷಣದ ಕಿರು ಮುಖ್ಯಾಂಶಗಳು ಈ ಕೆಳಗಿನಂತಿವೆ:

1. ಈ ವಿಶೇಷ ದಿನದಂದು, ನಾನು 125 ಕೋಟಿ ಭಾರತೀಯರು ಮತ್ತು ದೇಶದ ಹೊರಗೆ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಶುಭಾಶಯಗಳನ್ನು ತಿಳಿಸುತ್ತೇನೆ. ಮುಂಬರುವ ವರ್ಷಗಳಲ್ಲಿ ದೇಶ ಪ್ರಗತಿಯಲ್ಲಿ ಹೊಸ ಎತ್ತರಕ್ಕೆ ಏರಲು ಇದು ಮಾರ್ಗದರ್ಶಿ ಶಕ್ತಿಯಾಗಲಿ.

2. ನಾವು ಸ್ವರಾಜ್ಯ ಗಳಿಸಲು ತಮ್ಮ ಬದುಕನ್ನೇ ತ್ಯಾಗ ಮಾಡಿದ ಮಹಾತ್ಮಾಗಾಂಧಿ, ಸರ್ದಾರ್ ಪಟೇಲ್, ಪಂಡಿತ್ ನೆಹರೂ, ಅಸಂಖ್ಯಾತ ಜನರನ್ನು ಸ್ಮರಿಸುತ್ತೇವೆ.

3. ಭಾರತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದು ನಿಜ, ಆದರೆ ನಾವು ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನೂ ಹೊಂದಿದ್ದೇವೆ.

4. ಇಂದು ನಾವು ಸರ್ಕಾರದ ಕಾರ್ಯದ ಬದಲು, ಕಾರ್ಯ ಸಂಸ್ಕೃತಿಯ ಬಗ್ಗೆ ಮಾತನಾಡಬೇಕಾಗಿದೆ.

5. ಹಿಂದಿನ ಸರ್ಕಾರಗಳ ಸುತ್ತಾ ಅನುಮಾನದ ಹುತ್ತ ಇದ್ದ ಕಾಲ ಒಂದಿತ್ತು, ಈಗ ಅದು ಇಲ್ಲವಾಗಿದೆ. ಈಗ ಅದನ್ನು ನಿರೀಕ್ಷೆಗಳು ಸುತ್ತುವರಿದಿವೆ.”

6.ನಮ್ಮ ಸ್ವರಾಜ್ಯವನ್ನು ಸುರಾಜ್ಯವಾಗಿ ಪರಿವರ್ತಿಸುವ ಜವಾಬ್ದಾರಿ ಈಗ ನಮ್ಮ ಮೇಲಿದೆ. ಇದನ್ನು ತ್ಯಾಗ, ಶಿಸ್ತು ಮತ್ತು ದೃಢಸಂಕಲ್ಪವಿಲ್ಲದೆ ಸಾಧಿಸಲು ಸಾಧ್ಯವಿಲ್ಲ.

7. ನಾನು ಇಂದು ಕೇವಲ ನೀತಿಗಳ ಬಗ್ಗೆ ಮಾತ್ರವೇ ಮಾತನಾಡುವುದಿಲ್ಲ ಜೊತೆಗೆ ಮುನ್ನೋಟದ ಬಗ್ಗೆ, ಕಾರ್ಯದ ವೇಗದ ಬಗ್ಗೆ ಮಾತ್ರವಲ್ಲ ವಾಸ್ತವ ಪ್ರಗತಿಯ ಅನುಭವದ ಬಗ್ಗೆ ಮಾತನಾಡುತ್ತೇನೆ.

8.ಸುರಾಜ್ಯ ಅಂದರೆ ಶ್ರೀಸಾಮಾನ್ಯನ ಪ್ರಗತಿ, ಶ್ರೀಸಾಮಾನ್ಯನ ನಿರೀಕ್ಷೆ ಮತ್ತು ಅಗತ್ಯಗಳಿಗೆ ಸ್ಪಂದಿಸುವ ಸರ್ಕಾರ ಎಂದರ್ಥ. ಹೊಣೆಗಾರಿಕೆ ಮತ್ತು ಜವಾಬ್ದಾರಿಗಳು ಅಂಥ ಸುರಾಜ್ಯದ ಬೇರುಗಳಾಗಿವೆ.”

9. ನಾವು ಆದಾಯ ತೆರಿಗೆ ಪ್ರಾಧಿಕಾರದ ಬಗ್ಗೆ ಜನ ಅದರಲ್ಲೂ ಮಧ್ಯಮ ವರ್ಗದ ಕುಟುಂಬದವರು ಭಯಭೀತರಾಗುವ ವಾತಾವರಣವನ್ನು ಬದಲಾವಣೆ ಮಾಡಲು ಇಚ್ಛಿಸುತ್ತೇವೆ.

10. ದೇಶದಲ್ಲಿ 2 ಕೋಟಿ ಜನರು ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುತ್ತಾರೆ. ಬಡ ಜನರೂ ಕೂಡ ಒಂದೆರೆಡು ವಾರದಲ್ಲಿ ಪಾಸ್ಪೋರ್ಟ್ ಪಡೆಯುತ್ತಾರೆ.

11.ಹಿಂದೆ ಯಾವುದೇ ವಾಣಿಜ್ಯೋದ್ಯಮಿ ದೇಶದಲ್ಲಿ ಹೂಡಿಕೆ ಮಾಡಲು ಇಚ್ಛಿಸಿದಲ್ಲಿ, ಅವರು ತನ್ನ ವ್ಯಾಪಾರವನ್ನು ನೋಂದಣಿ ಮಾಡಿಕೊಳ್ಳಲು ಆರು ತಿಂಗಳು ಕಳೆಯಬೇಕಿತ್ತು. ಆದಾಗ್ಯೂ ಈ ಸರ್ಕಾರದಲ್ಲಿ ನಾವು ಈ ಪ್ರಕ್ರಿಯೆ ಸರಳೀಕರಿಸಿದ್ದು, ಕಳೆದ ಜುಲೈ ಒಂದರಲ್ಲೇ 900 ಅಂಥ ನೋಂದಣಿಗಳು ನಡೆದಿವೆ.
12.ಸಿ ಮತ್ತು ಡಿ ವರ್ಗದ 9000ಕ್ಕೂ ಹೆಚ್ಚು ಹುದ್ದೆಗಳಿಗೆ ಸಂದರ್ಶನವನ್ನು ರದ್ದುಗೊಳಿಸಲಾಗಿದೆ.

13. ಕಳೆದ 70 ವರ್ಷಗಳಲ್ಲಿ ಜನರ ನಿರೀಕ್ಷೆಗಳು ಬದಲಾಗಿವೆ.ನೀತಿಗಳು ಮತ್ತು ಬಜೆಟ್ ಘೋಷಣೆಗಳು ಅವರನ್ನು ತೃಪ್ತಿಪಡಿಸುವುದಿಲ್ಲ. ನಾವು ನೈಜವಾಗಿ ಏನು ಸಾಧಿಸಿದ್ದೇವೆ ಎಂಬುದನ್ನು ತೋರಿಸಬೇಕಾಗಿದೆ.

14. ಈ ಹಿಂದೆ ದಿನಂಪ್ರತಿ 55-77 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಹಾಕಲಾಗುತ್ತಿತ್ತು. ಆದರೆ ಈಗ ಪ್ರತಿ ದಿನ 100 ಕಿ.ಮೀ ಗ್ರಾಮೀಣ ರಸ್ತೆ ಮಾಡಲಾಗುತ್ತಿದೆ.

15. ಒಂದು ರಾಷ್ಟ್ರ, ಒಂದು ಗ್ರಿಡ್ ಮತ್ತು ಒಂದೇ ದರ – ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.

16. ಪುನರ್ನವೀಕರಿಸಬಹುದಾದ ಇಂಧನ ನಮ್ಮ ಗಮನದ ಕ್ಷೇತ್ರವಾಗಿದೆ.

17. ಸೌರ ವಿದ್ಯುತ್ ಕ್ಷೇತ್ರದಲ್ಲಿ ನಾವು ಶೇ.116ರಷ್ಟು ಪ್ರಗತಿ ಕಂಡಿದ್ದೇವೆ. ಇದು ಅಭೂತಪೂರ್ವವಾದ್ದಾಗಿದೆ.

18. ಈ ಹಿಂದೆ30,000-35,000 ಕಿ.ಮೀ. ಸರಬರಾಜು ಮಾರ್ಗಗಳನ್ನು ಹಾಕಲಾಗುತ್ತಿತ್ತು. ಈಗ ಪ್ರತಿ ದಿನ ಕನಿಷ್ಠ 50000 ಕಿ. ಮೀ. ಮಾರ್ಗ ಹಾಕಲಾಗುತ್ತಿದೆ.

19. ಕಳೆದ 60 ವರ್ಷಗಳಲ್ಲಿ 14 ಕೋಟಿ ಜನರಿಗೆ ಅಡುಗೆ ಅನಿಲ ಲಭ್ಯವಾಗಿತ್ತು. ಈಗ ಕಳೆದ 7 ತಿಂಗಳುಗಳಲ್ಲೇ ನಾಲ್ಕು ಕೋಟಿ ಜನರು ಅಡುಗೆ ಅನಿಲ ಸಂಪರ್ಕ ಪಡೆದಿದ್ದಾರೆ.

20.ನಾವು ನಿರಾಶಾವಾದದ ಕಡೆಗಿನ ನಮ್ಮ ಪ್ರೇಮವನ್ನು ಬೇಧಿಸಬೇಕು. ನಾವು ಅದನ್ನು ಮಾಡಿದರೆ, ಅದು ನಮಗೆ ಶಕ್ತಿ ನೀಡುತ್ತದೆ. 21 ಕೋಟಿ ಜನರನ್ನು ಸಾಂಸ್ಥಿಕ ಸಾಲ ಜಾಲದಲ್ಲಿ ತರುವುದು ಅಂಥ ಒಂದು ವಿಷಯವಾಗಿತ್ತು, ಜನರು ಇದು ಅಸಾಧ್ಯ ಎಂದುಕೊಂಡಿದ್ದರು, ಆದರೆ ಅದು ಈಗ ಆಗಿದೆ.
21.ಹದಿನೆಂಟು ಸಾವಿರ ಗ್ರಾಮಗಳ ಪೈಕಿ 10 ಸಾವಿರಕ್ಕೂ ಹೆಚ್ಚು ಗ್ರಾಮಗಳ ವಿದ್ಯುದ್ದೀಕರಣ ಮಾಡಲಾಗಿದೆ ಮತ್ತು ಈಗ ಅವರು ನಮ್ಮೊಂದಿಗಿದ್ದಾರೆ, ನಮ್ಮ ಸ್ವಾತಂತ್ರ್ಯ ದಿನದ ಆಚರಣೆಯನ್ನು ವೀಕ್ಷಿಸುತ್ತಿದ್ದಾರೆ ಎಂದು ನಾನು ಕೇಳಲ್ಪಟ್ಟಿದ್ದೇನೆ.

22. ದೆಹಲಿಗೆ ಕೇವಲ 3 ಕಿಲೋ ಮೀಟರ್ ದೂರದಲ್ಲಿರುವ ಹತ್ರಸ್ ಎಂಬ ಗ್ರಾಮಕ್ಕೆ ವಿದ್ಯುತ್ ಬರಲು 70 ವರ್ಷ ಹಿಡಿಯಿತು.

23. ಸರ್ಕಾರ ಪ್ರತಿ ಎಲ್.ಇ.ಡಿ. ಬಲ್ಬ್ ಕೇವಲ 50 ರೂಪಾಯಿಗೆ ಲಭ್ಯವಾಗುವಂತೆ ಮಾಡಿದೆ ಎಂದು ಪ್ರಧಾನ ಹೇಳಿದರು.

24.ಚಹಾಬರ್ ಬಂದರು ವಿಚಾರದಲ್ಲಿ ಭಾರತ, ಇರಾನ್ ಮತ್ತು ಆಫ್ಘಾನಿಸ್ತಾನ ಒಟ್ಟಿಗೆ ಸೇರಿವೆ. ಹೀಗಾಗಿ ಅಸಾಧ್ಯ ಎಂಬುದೂ ಸಾಧ್ಯವಾಗುತ್ತಿರುವುದನ್ನು ಈಗ ಕಾಣಬಹುದಾಗಿದೆ.

25. ನಾವು ಹಣದುಬ್ಬರ ಶೇಕಡ 6ನ್ನು ಮೀರಿ ಹೋಗಲು ಅವಕಾಶ ನೀಡಿಲ್ಲ. ದೇಶದಲ್ಲಿ ಸತತ ಎರಡು ವರ್ಷಗಳ ಕಾಲ ಬರಗಾಲವಿತ್ತು. ಧಾನ್ಯಗಳ ಉತ್ಪಾದನೆ ಕಾಳಜಿಯ ವಿಷಯವಾಗಿತ್ತು, ಆದರೆ, ಈ ಎಲ್ಲದರ ನಡುವೆಯೂ ನಾವು ಪರಿಸ್ಥಿತಿಯನ್ನು ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸಿದ್ದೇವೆ ಮತ್ತು ಕಳೆದ ಸರ್ಕಾರಗಳಿಗೆ ಹೋಲಿಸಿದರೆ ನಾನು ಮತ್ತು ನನ್ನ ಸರ್ಕಾರ ಬಡವರ ತಟ್ಟೆ ಕೈಗೆಟುಕದಂತೆ ಆಗಲು ಬಿಡಲಿಲ್ಲ.
26. ನಾವು ಗುರು ಗೋವಿಂದ ಸಿಂಗ್ ಜೀ ಅವರ 350ನೇ ಜಯಂತ್ಯುತ್ಸವವನ್ನು ಆಚರಿಸಿದೆವು. ಅವರು ಏನು ಹೇಳಿದ್ದರು ಎಂಬುದು ನನಗೆ ನೆನಪಿದೆ: “ಅವರು ತಾವು ಇತರರ ಸೇವೆ ಮಾಡಲಿಲ್ಲ, ಆದರೂ ತಮ್ಮ ಕೈಗಳು ಹೇಗೆ ಪವಿತ್ರ ಎಂದು ಪರಿಗಣಿತವಾಯಿತು?” ನಾನು ಹೇಳುತ್ತೇನೆ ನಮ್ಮ ರೈತರು ಅಂಥ ಕಾರ್ಯ ಮಾಡಿದ್ದಾರೆ ಮತ್ತು ಸತತ ಬರದ ನಿರುತ್ಸಾಹದ ನಡುವೆಯೂ ಒಂದೂವರೆ ಪಟ್ಟು ಹೆಚ್ಚು ದ್ವಿದಳಧಾನ್ಯ ಬಿತ್ತಿದ್ದಾರೆ.
27. ನಮ್ಮ ವಿಜ್ಞಾನಿಗಳು 171 ಬಗೆಯ ಹೆಚ್ಚು ಇಳುವರಿ ಬರುವ ತಳಿಗಳನ್ನು ಸೃಷ್ಟಿಸಿದ್ದಾರೆ, ಹೀಗಾಗಿ ಗರಿಷ್ಠ ಉತ್ಪನ್ನ ಬರುತ್ತಿದೆ. ನಾನು ಅವರನ್ನು ಅಭಿನಂದಿಸುತ್ತೇನೆ. ಹಿಂದೆ ರಸಗೊಬ್ಬರದ ಕೊರತೆ ಎಂಬುದು ಒಂದು ಕೆಟ್ಟ ಕನಸಾಗಿ ಹೋಗಿತ್ತು. ಈಗ ಕೊರತೆ ಎಂಬುದು ಇತಿಹಾಸವಾಗಿದೆ.

28. ಸರ್ಕಾರದ ಬೊಕ್ಕಸ ಖಾಲಿ ಆಗುವುದು ಹಿಂದಿನ ಸರ್ಕಾರಗಳ ಸಂಪ್ರದಾಯವಾಗಿ ಹೋಗಿತ್ತು, ನಾನು ಅಂತಹ ಒಂದು ಪ್ರಲೋಬನೆಯಿಂದ ದೂರ ಉಳಿಯಲು ಯತ್ನಿಸಿದ್ದೇನೆ. ನನಗೆ ವಿಶ್ವ ಸರ್ಕಾರದ ಬಗ್ಗೆ ಏನು ತಿಳಿದುಕೊಳ್ಳುತ್ತದೆ ಎನ್ನುವುದಕ್ಕಿಂತ ದೇಶದ ಪ್ರತಿಷ್ಠೆ ಮುಖ್ಯವಾಗಿದೆ. ಸಂಕೇತಕ್ಕಿಂತ ವಾಸ್ತವವೇ ಮೇಲು, ಅರ್ಹತೆಗಿಂತ ಸಬಲೀಕರಣ ಮೇಲು, ಪಕ್ಷಕ್ಕಿಂತ ದೇಶವೇ ಮಿಗಿಲು.
29. ಸರ್ಕಾರಕ್ಕೆ ನಿರಂತರತೆ ಇದೆ ಮತ್ತು ಅವರು ಮಾಡಿದ ಕೆಲಸದಲ್ಲಿ ಉತ್ತಮ ಅಂಶಗಳಿದ್ದರೆ, ನಾವು ತಲೆ ಬಾಗಿ ಆ ಕಾರ್ಯವನ್ನು ಮುಂದುವರಿಸಬೇಕು. ನಾನು ಪ್ರಗತಿ ವ್ಯವಸ್ಥೆಯಲ್ಲಿ ಸಭೆಗಳನ್ನು ನಡೆಸುತ್ತಿದ್ದೇನೆ, ಅದರಲ್ಲಿ ನಾವು ಹಿಂದಿನ ಸರ್ಕಾರಗಳ ಅಂತ 118 ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಿದ್ದೇವೆ ಆದರೆ ಅವು ಸ್ಥಗಿತಗೊಂಡಿವೆ. 10 ಸಾವಿರ ಕೋಟಿ ರೂಪಾಯಿ ಮೌಲ್ಯದ 270 ಯೋಜನೆಗಳು ನಿಂತು ಹೋಗಿವೆ. ಇದು ಕ್ರಿಮಿನಲ್ ನಿರ್ಲಕ್ಷ್ಯ ಮತ್ತು ನಾವು ಅದನ್ನು ಮುಂದುವರಿಸಲು ಪ್ರಯತ್ನಿಸಿದ್ದೇವೆ.
30. ನೀತಿಯಲ್ಲಿ ಸ್ಪಷ್ಟತೆ ಇದ್ದರೆ, ಆಸಕ್ತಿಯಲ್ಲಿ ಸ್ಪಷ್ಟತೆ ಇದ್ದರೆ, ನಿರ್ಧಾರಗಳಿಗೆ ಹಿಂಜರಿಕೆ ಇರುವುದಿಲ್ಲ. ಪ್ರತಿ ವರ್ಷ, ಉತ್ತರ ಪ್ರದೇಶದ ವಿಚಾರಕ್ಕೆ ಬಂದಾಗ, ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿಯ ವಿಚಾರ ಸಾಮಾನ್ಯವಾಗಿ ಬರುತ್ತದೆ. ಇಂದು, ನಾನು ಹೇಳುತ್ತೇನೆ ಶೇ.95ರಷ್ಟು ಬಾಕಿ ಪಾವತಿ ಆಗಿದೆ. ನಮ್ಮಲ್ಲಿ 50 ಲಕ್ಷ ಕುಟುಂಬಗಳ ಅಡುಗೆ ಮನೆಗಳು ಹೊಗೆಯಿಂದ ತುಂಬಿವೆ. ಇದಕ್ಕೆ ಉಜ್ವಲ ಯೋಜನೆ ಪರಿಹಾರವಾಗಿದೆ.
31. ನಾವು ಜಾಗತಿಕ ಮಟ್ಟಕ್ಕೆ ಬಂದಾಗ ಮಾತ್ರವೇ ನಾವು ಪ್ರಸಕ್ತವಾಗಿ ಉಳಿದು ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸಬಹುದಾಗಿದೆ. ಶ್ರೇಣೀಕರಣ ಸಂಸ್ಥೆಗಳು ನಮ್ಮ ಸುಲಭವಾಗಿ ವ್ಯಾಪಾರ ನಡೆಸುವ ಕ್ರಮವನ್ನು ಹೇಗೆ ಹೊಗಳಿವೆ ಎಂಬುದನ್ನು ಕಳೆದ ಕೆಲವು ದಿನಗಳಲ್ಲಿ ನೀವು ನೋಡಿರಬಹುದು.

32. ರಾಮಾನುಜಾಚಾರ್ಯರು ಹೇಳುತ್ತಿದ್ದರು ನಾವು ಎಲ್ಲರನ್ನೂ ಏಕಪ್ರಕಾರವಾಗಿ ನೋಡಬೇಕು, ಯಾರೊಬ್ಬರಿಗೂ ಯಾವತ್ತೂ ಅವಮಾನಿಸಬಾರದು. ಇದನ್ನೇ ಅಂಬೇಡ್ಕರ್, ಗಾಂಧೀ ಕೂಡ ಹೇಳಿದ್ದಾರೆ. ಸಮಾಜ ಇದನ್ನು ತಾರತಮ್ಯವನ್ನು ಮಾಡಿದರೆ ಅದು ಸಮಾಜವನ್ನು ಒಡೆಯುತ್ತದೆ. ತಾರತಮ್ಯವು ಬೇರೂರಿದರೆ, ಅದರ ವಿರುದ್ಧದ ನಮ್ಮ ಹೋರಾಟದ ನಿರ್ಧಾರ ಮತ್ತು ಅದರ ವಿರುದ್ಧದ ಹೋರಾಟದ ನಮ್ಮ ಸಂವೇದನೆ ಹಿರಿದಾಗುತ್ತದೆ. ಆರ್ಥಿಕ ಪ್ರಗತಿಯಷ್ಟೇ ಸಾಲದು, ಸಾಮಾಜಿಕ ಸಮಾನತೆ ಕೂಡ ಅಷ್ಟೇ ಮುಖ್ಯ. ನಾವು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಬೇಕು.
33. ಜಿಎಸ್ಟಿ ನಮ್ಮ ಆರ್ಥಿಕತೆಗೆ ಬಲ ನೀಡುತ್ತದೆ ಮತ್ತು ಅದರ ಅನುಮೋದನೆಗೆ ಎಲ್ಲ ಪಕ್ಷಗಳಿಗೂ ಧನ್ಯವಾದ ಸಲ್ಲಲೇಬೇಕು.

34. ಈ ಸರ್ಕಾರವು ಸಂಗತಿಗಳನ್ನು ಮುಂದಕ್ಕೆ ಹಾಕುತ್ತಾ ಸಾಗುವುದರಲ್ಲಿ ನಂಬಿಕೆ ಇಟ್ಟಿಲ್ಲ. ನಾವು ಸಮಾನ ಶ್ರೇಣಿ ಸಮಾನ ಪಿಂಚಣಿಯ ಭರವಸೆ ಈಡೇರಿಸಿದ್ದೇವೆ. ನಾವು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರಿಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಬಹಿರಂಗ ಮಾಡಿದ್ದೇವೆ. ಅದು ನಾವು ನೀಡಿದ್ದ ಮತ್ತೊಂದು ಆಶ್ವಾಸನೆಯಾಗಿತ್ತು.
35. ವೈವಿಧ್ಯತೆಯಲ್ಲಿ ಏಕತೆ ನಮ್ಮ ಬಲವಾಗಿದೆ. ಇತರರಿಗೆ ಗೌರವ ನೀಡುವ ನಮ್ಮ ಸಾಂಸ್ಕೃತಿಕ ಪರಂಪರೆ, ಮತ್ತು ಹೊಂದಾಣಿಕೆ ನಮ್ಮ ನಾಗರಿಕತೆ ನಿರಂತರವಾಗಿ ಸಾಗಲು ಕಾರಣಗಳಾಗಿವೆ.

36. ಹಿಂಸಾಚಾರಕ್ಕೆ ನಮ್ಮ ದೇಶದಲ್ಲಿ ಸ್ಥಾನವಿಲ್ಲ. ನಮ್ಮ ದೇಶ ಮಾವೋವಾದ ಮತ್ತು ಭಯೋತ್ಪಾದನೆಯನ್ನು ಸಹಿಸುವುದಿಲ್ಲ.

37. ಪೇಶಾವರದ ಶಾಲೆಯಲ್ಲಿ ಮುಗ್ಧ ಮಕ್ಕಳ ನರಮೇಧ ನಡೆದುದನ್ನು ಮಾನವೀಯತೆಯ ತಕ್ಕಡಿಯಲ್ಲಿ ತೂಗಿ ಎಂದು ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಟ್ಟವರಿಗೆ ನಾನು ಹೇಳುತ್ತೇನೆ. ಭಾರತದಲ್ಲಿ, ಎಲ್ಲ ಶಾಲೆಗಳಲ್ಲೂ ಕಣ್ಣೀರು ಹರಿದಿತ್ತು, ಪ್ರತಿಯೊಬ್ಬ ಸಂಸದೀಯ ಪಟುವಿನ ಕಣ್ಣಲ್ಲೂ ನೀರಿನ ಹನಿ ಮೂಡಿತ್ತು. ಇದು ನಮ್ಮ ಮಾನವೀಯ ಮೌಲ್ಯದ ಪ್ರತಿಫಲನವಾಗಿದೆ, ಆದರೆ, ಆ ಕಡೆ ನೋಡಿ ಅಲ್ಲಿ ಭಯೋತ್ಪಾದನೆಯನ್ನೇ ವೈಭವೀಕರಿಸಲಾಗುತ್ತಿದೆ.
38.ನಾನು ನಮ್ಮ ನೆರೆಹೊರೆಯವರಿಗೆ ಹೇಳುತ್ತೇನೆ, ಬಡತನದ ವಿರುದ್ಧ ಹೋರಾಡೋಣ, ನಾವು ನಮ್ಮ ಸ್ವಂತ ಜನರೊಂದಿಗೆ ಹೋರಾಡಿದರೆ ನಾವು ನಮ್ಮನಮ್ಮಲ್ಲೇ ನಾಶವಾಗುತ್ತೇವೆ, ಒಗ್ಗೂಡಿ ನಾವು ಬಡತನದ ವಿರುದ್ಧ ಹೋರಾಡಿದರೆ ಪ್ರಗತಿ ಸಾಧಿಸುತ್ತೇವೆ.

39. ಕಳೆದ ಕೆಲವು ದಿನಗಳಲ್ಲಿ ಬಲೂಚಿಸ್ತಾನ, ಗಿಲ್ಗಿಟ್ ನ ಜನರು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರು ನನಗೆ ಹೇಗೆ ಧನ್ಯವಾದ ಹೇಳಿದ್ದಾರೆ ಎಂದರೆ ಅದು ಭಾರತದ 125 ಕೋಟಿ ಜನರಿಗೆ ಗೌರವವಾಗಿದೆ. ನಾನು ಬಲೂಚಿಸ್ತಾನ, ಗಿಲ್ಗಿಟ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಆ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ.
40. ನಾವು ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನು ಶೇಕಡ 20ರಷ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ.

41. ನಾವು ಸ್ವಾತಂತ್ರ್ಯ ಯೋಧರ ಬಗ್ಗೆ ಮಾತನಾಡುವಾಗ, ಇತರರಿಗಿಂತ ಹೆಚ್ಚಾಗಿ ಕೆಲವರನ್ನು ಮಾತ್ರವೇ ಪ್ರಸ್ತಾಪಿಸುತ್ತೇವೆ. ನಮ್ಮ ಆದಿವಾಸಿ ಸೋದರರುಶೌರ್ಯದಿಂದ ಹೋರಾಡಿದ್ದಾರೆ. ನೀವು ಬಿರ್ಸಾ ಮುಂಡಾ ಮತ್ತಿತರರ ಬಗ್ಗೆ ಕೇಳಿರಬಹುದು. ಮುಂದಿನ ಕೆಲವು ದಿನಗಳಲ್ಲಿ, ಅಂಥ ಆದಿವಾಸಿ ಹೋರಾಟಗಾರರ ಬಗ್ಗೆ ಇತಿಹಾಸದಲ್ಲಿ ದಾಖಲಿಸುವ, ಅವರ ಮೂಲವನ್ನು ವಸ್ತು ಸಂಗ್ರಹಾಲಯದಲ್ಲಿ ದಾಖಲಿಸುವ ಇರಾದೆ ನಮಗಿದೆ.
42. ಒಂದು ಸಮಾಜ, ಒಂದು ಅಭಿಯಾನ, ಒಂದು ಗುರಿ.

43. ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಮತ್ತು ‘ಜೈ ಹಿಂದ್.’

***