Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಚ್ಛ ಭಾರತ ದಿನ: ಸ್ವಚ್ಛತೆಯೇ ಸೇವೆ ಪಾಕ್ಷಿಕದ ಸಮಾರೋಪ ಮತ್ತು ಸ್ವಚ್ಛ ಭಾರತ ಅಭಿಯಾನದ 3ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಸ್ವಚ್ಛ ಭಾರತ ದಿವಸ : ಸ್ವಚ್ಛತೆಯೇ ಸೇವೆ ಪಾಕ್ಷಿಕದ ಸಮಾರೋಪ ಹಾಗೂ ಸ್ವಚ್ಛ ಭಾರತ ಅಭಿಯಾನದ 3ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದರು.

ಅಕ್ಟೋಬರ್ 2 ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜನ್ಮ ಜಯಂತಿ ದಿನವಾಗಿದೆ; ಇದು ಸ್ವಚ್ಛ ಭಾರತ್ ಗುರಿ ಸಾಧನೆಯ ನಿಟ್ಟಿನಲ್ಲಿ ನಾವು ಎಷ್ಟು ದೂರ ಕ್ರಮಿಸಿದ್ದೇವೆ ಎಂಬುದನ್ನು ಬಿಂಬಿಸುವ ಕ್ಷಣವೂ ಆಗಿದೆ ಎಂದು ಹೇಳಿದರು.

ಸ್ವಚ್ಛ ಭಾರತ ಅಭಿಯಾನವನ್ನು ಟೀಕೆಗಳ ನಡುವೆಯೂ ಮೂರು ವರ್ಷಗಳ ಹಿಂದೆ ಹೇಗೆ ಆರಂಭಿಸಲಾಯಿತು ಎಂಬುದನ್ನು ಅವರು ಸ್ಮರಿಸಿದರು. ಮಹಾತ್ಮಾ ಗಾಂಧಿ ಅವರು ತೋರಿದ ಮಾರ್ಗ ಎಂದಿಗೂ ತಪ್ಪಾಗಲು ಸಾಧ್ಯವಿಲ್ಲ ಎಂದು ತಾವು ಮನಗಂಡಿರುವುದಾಗಿ ಹೇಳಿದರು. ಏನಾದರೂ ಸವಾಲುಗಳು ಇದ್ದರೂ, ಅದರ ಅರ್ಥ ಯಾರೊಬ್ಬರೂ ಹೆದರಿ ಹಿಮ್ಮೆಟ್ಟಿದ್ದಾರೆ ಎಂದಲ್ಲ ಎಂದರು.

ಇಂದು ಜನರು, ಒಕ್ಕೊರಲಿನಿಂದ ತಮ್ಮ ಸ್ವಚ್ಛತೆಯ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಚ್ಛತೆಯನ್ನು ನಾಯಕರ, ಸರ್ಕಾರದ ಪ್ರಯತ್ನದಿಂದ ಸಾಧಿಸಲು ಸಾಧ್ಯವಿಲ್ಲ, ಆದರೆ, ಸಮಾಜದ ಪ್ರಯತ್ನದಿಂದ ಇದನ್ನು ಸಾಧಿಸಬಹುದು ಎಂದರು. ಜನರ ಪಾಲ್ಗೊಳ್ಳುವಿಕೆಯನ್ನು ಪ್ರಶಂಸಿಸಿದ ಪ್ರಧಾನಿ, ಇಂದು ಸ್ವಚ್ಛತೆಯ ಅಭಿಯಾನ ಸಾಮಾಜಿಕ ಚಳವಳಿಯಾಗಿದೆ ಎಂದರು. ಈ ದಿನದವರೆಗೆ ಮಾಡಿರುವ ಸಾಧನೆ, ಭಾರತದ ಸ್ವಚ್ಛಾಗ್ರಹಿಗಳ ಸಾಧನೆ ಎಂದು ಹೇಳಿದರು.

ಸ್ವರಾಜ್ಯವನ್ನು ಸತ್ಯಾಗ್ರಹಿಗಳ ಮೂಲಕ ಸಾಧಿಸಲಾಯಿತು, ಸ್ವಚ್ಛಾಗ್ರಹಿಗಳಿಂದ ಶ್ರೇಷ್ಠ ಭಾರತ ಸಾಧನೆ ಮಾಡಬಹುದಾಗಿದೆ ಎಂದು ಪ್ರಧಾನಿ ಹೇಳಿದರು.

ನಗರಗಳ ಸ್ವಚ್ಛತೆಯ ಶ್ರೇಣೀಕರಣವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದರಿಂದ ಸ್ಪರ್ಧಾತ್ಮಕ ಮತ್ತು ಧನಾತ್ಮಕ ವಾತಾವರಣ ನಿರ್ಮಾಣವಾಗಿದೆ ಎಂದರು. ಸ್ವಚ್ಛತೆಗೆ ಕ್ರಾಂತಿಕಾರಿ ಕಲ್ಪನೆಗಳೂ ಅಗತ್ಯ ಎಂದು ತಿಳಿಸಿದರು; ಸ್ಪರ್ಧೆ ಸ್ವಚ್ಛತೆಯ ವಿಷಯಕ್ಕೆ ಕಲ್ಪನೆಗಳ ವೇದಿಕೆಯನ್ನು ಒದಗಿಸುತ್ತದೆ ಎಂದರು.

ಸ್ವಚ್ಛತೆಯೇ ಸೇವೆ ಪಾಕ್ಷಿಕದ ವೇಳೆ ಕೊಡುಗೆ ನೀಡಿದ ಎಲ್ಲರನ್ನೂ ಪ್ರಧಾನಿ ಅಭಿನಂದಿಸಿದರು.; ಆದಾಗ್ಯೂ ಮಾಡಬೇಕಾದ್ದು ಬಹಳಷ್ಟಿದೆ ಎಂದು ಹೇಳಿದರು.

ರಾಷ್ಟ್ರೀಯ ಪ್ರಬಂಧ, ಚಿತ್ರಕಲೆ ಮತ್ತು ಕಿರುಚಿತ್ರ ನಿರ್ಮಾಣ ಸ್ಪರ್ಧೆಗಳ ಪ್ರಶಸ್ತಿಯನ್ನೂ ಪ್ರದಾನ ಮಾಡಿದರು, ಡಿಜಿಟಲ್ ಪ್ರದರ್ಶನ ಗ್ಯಾಲರಿಗೂ ಭೇಟಿ ನೀಡಿದರು.