Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಚ್ಛ ಭಾರತ ಅಭಿಯಾನ-ನಗರ 2.0 ಮತ್ತು ಅಮೃತ್ 2.0ಕ್ಕೆ ಪ್ರಧಾನಮಂತ್ರಿ ಚಾಲನೆ

ಸ್ವಚ್ಛ ಭಾರತ ಅಭಿಯಾನ-ನಗರ 2.0 ಮತ್ತು ಅಮೃತ್ 2.0ಕ್ಕೆ ಪ್ರಧಾನಮಂತ್ರಿ ಚಾಲನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ವಚ್ಛ ಭಾರತ ಅಭಿಯಾನ-ನಗರ 2.0 ಮತ್ತು ಅಟಲ್ ಅಭಿಯಾನ ಫಾರ್ ಪುನಶ್ಚೇತನ ಮತ್ತು ನಗರ ಪರಿವರ್ತನೆ 2.0ಕ್ಕೆ ಚಾಲನೆ ನೀಡಿದರು. ಕೇಂದ್ರ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ, ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಶ್ರೀ ಕೌಶಲ್ ಕಿಶೋರ್, ಶ್ರೀ ಬಿಶ್ವೇಶ್ವರ್ ತುಡು, ರಾಜ್ಯಗಳ ಸಚಿವರು, ನಗರ ಸ್ಥಳೀಯ ಸಂಸ್ಥೆಗಳ ಮೇಯರುಗಳು ಮತ್ತು ಅಧ್ಯಕ್ಷರು ಹಾಗೂ ಪುರಸಭೆ, ಪಾಲಿಕೆಗಳ ಆಯುಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, 2014ರಲ್ಲಿ ದೇಶವಾಸಿಗಳು ಭಾರತವನ್ನು ಬಯಲು ಶೌಚ ಮುಕ್ತ – ಒಡಿಎಫ್ ಆಗಿ ಮಾಡುವ ಪ್ರತಿಜ್ಞೆ ಕೈಗೊಂಡರು ಮತ್ತು ಅವರು 10 ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣದೊಂದಿಗೆ ಈ ಪ್ರತಿಜ್ಞೆಯನ್ನು ಪೂರೈಸಿದರು. ಈಗ ‘ಸ್ವಚ್ಛ ಭಾರತ ಅಭಿಯಾನ-ಅರ್ಬನ್ 2.0’ರ ಗುರಿ ನಗರಗಳನ್ನು ಕಸ ಮುಕ್ತ, ಸಂಪೂರ್ಣವಾಗಿ ಕಸಮುಕ್ತಗೊಳಿಸುವುದಾಗಿದೆ ಎಂದು ಅವರು ಹೇಳಿದರು. ಅಮೃತ್ ಅಭಿಯಾನದ ಮುಂದಿನ ಹಂತದಲ್ಲಿ ದೇಶದ ಗುರಿಯ ವ್ಯಾಪ್ತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ‘ಒಳಚರಂಡಿ ಮತ್ತು ಮಲತ್ಯಾಜ್ಯ (ಸೆಪ್ಟಿಕ್) ನಿರ್ವಹಣೆಯನ್ನು ಸುಧಾರಿಸುವುದಾಗಿದೆ, ನಮ್ಮ ನಗರಗಳನ್ನು ಜಲ ಸುರಕ್ಷಿತ ಮಾಡುವುದು ಮತ್ತು ನಮ್ಮ ನದಿಗಳಲ್ಲಿ ಎಲ್ಲಿಯೂ ಒಳಚರಂಡಿ ನೀರು ಹರಿದು ಹೋಗುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು’ ಎಂದು ಒತ್ತಿ ಹೇಳಿದರು.

ನಗರ ಪುನರುತ್ಥಾನ ಮತ್ತು ಸ್ವಚ್ಛತೆಯ ಪರಿವರ್ತನೆಯ ಯಶಸ್ಸನ್ನು ಪ್ರಧಾನಮಂತ್ರಿಯವರು ಮಹಾತ್ಮಾ ಗಾಂಧಿ ಅವರಿಗೆ ಸಮರ್ಪಿಸಿದರು. ಈ ಕಾರ್ಯಾಚರಣೆಗಳು ಮಹಾತ್ಮಾ ಗಾಂಧಿಯವರ ಸ್ಫೂರ್ತಿಯ ಫಲಿತಾಂಶವಾಗಿದೆ ಮತ್ತು ಅವರ ಆದರ್ಶಗಳ ಮೂಲಕ ಮಾತ್ರ ಸಾಕಾರಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ಶೌಚಾಲಯ ನಿರ್ಮಾಣದಿಂದಾಗಿ ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ ಎಂದು ಅವರು ಪ್ರಿತಿಪಾದಿಸಿದರು.

ರಾಷ್ಟ್ರದ ಸ್ಫೂರ್ತಿಗೆ ವಂದಿಸಿದ ಪ್ರಧಾನಮಂತ್ರಿಯವರು, ಸ್ವಚ್ಛ ಭಾರತ ಅಭಿಯಾನ ಮತ್ತು ಅಮೃತ್ ಅಭಿಯಾನದ ಪಯಣವು ಪ್ರತಿಯೊಬ್ಬ ದೇಶವಾಸಿಗೂ ಹೆಮ್ಮೆ ತರುತ್ತದೆ ಎಂದು ಹೇಳಿದರು. “ಇದರಲ್ಲಿ ಒಂದು ಮಹೋದ್ದೇಶವಿದೆ, ಗೌರವವಿದೆ, ಘನತೆ ಇದೆ, ಒಂದು ದೇಶದ ಮಹತ್ವಾಕಾಂಕ್ಷೆಯೂ ಇದೆ ಮತ್ತು ಮಾತೃಭೂಮಿಯ ಬಗ್ಗೆ ಎಣೆಯಿಲ್ಲದ ಪ್ರೀತಿಯೂ ಇದೆ” ಎಂದು ಅವರು ಹೇಳಿದಾಗ ಅವರಲ್ಲಿ ಈ ಭಾವನೆ ಆವರಿಸಿತ್ತು.

ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಇಂದಿನ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಬಾಬಾ ಸಾಹೇಬ್ ಅವರು ನಗರ ಅಭಿವೃದ್ಧಿ ಅಸಮಾನತೆಯನ್ನು ನಿವಾರಿಸುವ ದೊಡ್ಡ ಸಾಧನವೆಂದು ನಂಬಿದ್ದರು ಎಂದು ಹೇಳಿದರು. ಹಳ್ಳಿಗಳಿಂದ ಅನೇಕ ಜನರು ಉತ್ತಮ ಜೀವನದ ಆಕಾಂಕ್ಷೆಯೊಂದಿಗೆ ನಗರಗಳಿಗೆ ಬರುತ್ತಾರೆ. ಅವರು ಉದ್ಯೋಗವನ್ನೂ ಪಡೆಯುತ್ತಾರೆ ಆದರೂ ಅವರ ಜೀವನ ಮಟ್ಟವು ಹಳ್ಳಿಗಳಲ್ಲಿನ ಅವರ ಜೀವನಕ್ಕೆ ಹೋಲಿಸಿದರೆ ಅದಕ್ಕಿಂತ ಕಠಿಣ ಪರಿಸ್ಥಿತಿಯಲ್ಲಿರುತ್ತದೆ ಎಂದು ಅವರು ಹೇಳಿದರು. ಇದು ಮನೆಯಿಂದ ದೂರ ಉಳಿಯುವುದರ ಜೊತೆಗೆ ಅಂತಹ ಕಠಿಣ ಪರಿಸ್ಥಿತಿಯಲ್ಲಿ ಇರುವುದು ಎರಡು ಸಂಕಷ್ಟ ಎಂದರು.  ಈ ಅಸಮಾನತೆಯನ್ನು ತೊಡೆದುಹಾಕುವುದು ಮುಖ್ಯ. ಹಾಗು ಈ ಪರಿಸ್ಥಿತಿಯನ್ನು ಬದಲಾಯಿಸಲು ಮತ್ತು ಅಸಮಾನತೆಯನ್ನು ಹೋಗಲಾಡಿಸುವುದಕ್ಕೆ  ಬಾಬಾ ಸಾಹೇಬ್ ಅವರ ಒತ್ತಾಸೆಯೂ ಇದೆ ಎಂದು ಅವರು ಹೇಳಿದರು. ಸ್ವಚ್ಛ ಭಾರತ ಅಭಿಯಾನ ಮತ್ತು ಅಮೃತ್ ಅಭಿಯಾನದ ಮುಂದಿನ ಹಂತವು ಬಾಬಾ ಸಾಹೇಬ್ ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಅದರೊಂದಿಗೆ ಎಲ್ಲರ ಪ್ರಯತ್ನ ಸ್ವಚ್ಛತೆಯ ಅಭಿಯಾನಕ್ಕೆ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಮಟ್ಟದ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಸ್ವಚ್ಛತಾ ಅಭಿಯಾನವನ್ನು ಬಲಪಡಿಸಲು ಪ್ರಸ್ತುತ ಪೀಳಿಗೆಯು ಮುತುವರ್ಜಿ ವಹಿಸಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಟಾಫಿ ಮೇಲ್ಪದರಗಳನ್ನು ಇನ್ನು ಮುಂದೆ ನೆಲದ ಮೇಲೆ ಎಸೆಯದೆ ಮಕ್ಕಳು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಸಣ್ಣ ಮಕ್ಕಳು ಈಗ ಗೊಂದಲವನ್ನು ತಪ್ಪಿಸುವಂತೆ ಹಿರಿಯರಿಗೆ ಕೇಳುತ್ತಾರೆ. “ಸ್ವಚ್ಛತೆ ಕೇವಲ ಒಂದು ದಿನ, ಹದಿನೈದು ದಿನಕ್ಕೆ, ಒಂದು ವರ್ಷ ಅಥವಾ ಕೆಲವೇ ಜನರಿಗೆ ಸೀಮಿತವಾದ ಕೆಲಸವಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಸ್ವಚ್ಛತೆ ಪ್ರತಿಯೊಬ್ಬರಿಗೂ, ಪ್ರತಿದಿನ, ಪ್ರತಿ ಹದಿನೈದು ದಿನಗಳಿಗೊಮ್ಮೆ, ಪ್ರತಿ ವರ್ಷ, ಪೀಳಿಗೆಯಿಂದ ಪೀಳಿಗೆಗೆ ಉತ್ತಮ ಅಭಿಯಾನವಾಗಿದೆ. ಸ್ವಚ್ಛತೆ ಒಂದು ಜೀವನಶೈಲಿ, ಸ್ವಚ್ಛತೆ ಜೀವನ ಮಂತ್ರ’ ಎಂದು ಪ್ರಧಾನಮಂತ್ರಿ ಹೇಳಿದರು. ಗುಜರಾತಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸಲು ಗುಜರಾತ್ ಮುಖ್ಯಮಂತ್ರಿಯಾಗಿ ತಾವು ಮಾಡಿದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಸ್ಮರಿಸಿದರು, ಅಲ್ಲಿ ಅವರು ಸ್ವಚ್ಛತೆಯ ಅನ್ವೇಷಣೆಯನ್ನು ನಿರ್ಮಲ್ ಗುಜರಾತ್ ಕಾರ್ಯಕ್ರಮದ ಮೂಲಕ ಜನಾಂದೋಲನವನ್ನಾಗಿ ಪರಿವರ್ತಿಸಿದ್ದರು.

ಸ್ವಚ್ಛತೆಯ ಅಭಿಯಾನವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಕೈಗೊಂಡ ಕ್ರಮಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ಇಂದು ಭಾರತವು ಪ್ರತಿದಿನ ಸುಮಾರು ಒಂದು ಲಕ್ಷ ಟನ್ ತ್ಯಾಜ್ಯವನ್ನು ಸಂಸ್ಕರಿಸುತ್ತಿದೆ. “2014ರಲ್ಲಿ ದೇಶವು ಅಭಿಯಾನವನ್ನು ಪ್ರಾರಂಭಿಸಿದಾಗ, ದೇಶದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯದ ಶೇಕಡಾ 20ಕ್ಕಿಂತ ಕಡಿಮೆ ಭಾಗವನ್ನು ಸಂಸ್ಕರಿಸಲಾಗುತ್ತಿತ್ತು. ಇಂದು ನಾವು ದೈನಂದಿನ ತ್ಯಾಜ್ಯದ ಶೇಕಡಾ 7೦ ರಷ್ಟನ್ನು ಸಂಸ್ಕರಿಸುತ್ತಿದ್ದೇವೆ. ಈಗ ನಾವು ಅದನ್ನು ಶೇ.100ಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ’ ಎಂದ ಪ್ರಧಾನಮಂತ್ರಿಯವರು, ನಗರಾಭಿವೃದ್ಧಿ ಸಚಿವಾಲಯಕ್ಕೆ ಹೆಚ್ಚಿನ ಹಂಚಿಕೆ ಮಾಡಿರುವ ಬಗ್ಗೆಯೂ ಮಾತನಾಡಿದರು. 2014ಕ್ಕೆ ಮುಂಚೆ 7 ವರ್ಷಗಳಲ್ಲಿ ಸಚಿವಾಲಯಕ್ಕೆ ಸುಮಾರು 1.25 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು, 2014ರಿಂದ 7 ವರ್ಷಗಳಲ್ಲಿ ಸಚಿವಾಲಯಕ್ಕೆ ಸುಮಾರು 4 ಲಕ್ಷ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ದೇಶದ ನಗರಗಳ ಅಭಿವೃದ್ಧಿಗೆ ಆಧುನಿಕ ತಂತ್ರಜ್ಞಾನದ ಬಳಕೆಯೂ ನಿರಂತರವಾಗಿ ಹೆಚ್ಚುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಾರಂಭಿಸಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಹೊಸ ಸ್ಕ್ರ್ಯಾಪಿಂಗ್ ನೀತಿಯು ತ್ಯಾಜ್ಯದಿಂದ ಸಂಪತ್ತಿನ ಅಭಿಯಾನ ಮತ್ತು ವರ್ತುಲ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದರು.

ನಗರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳು ಯಾವುದೇ ನಗರದ ಪ್ರಮುಖ ಪಾಲುದಾರರಲ್ಲಿ ಒಬ್ಬರು ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ ಈ ಜನರಿಗೆ ಹೊಸ ಆಶಾಕಿರಣವಾಗಿ ಬಂದಿದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. 46ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಸ್ವಾನಿಧಿ ಯೋಜನೆಯಡಿ ಸೌಲಭ್ಯ ಪಡೆದಿದ್ದು, 25 ಲಕ್ಷ ಜನರು 2.5 ಸಾವಿರ ಕೋಟಿ ರೂಪಾಯಿ ಪಡೆದಿದ್ದಾರೆ. ಈ ಮಾರಾಟಗಾರರು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತಿದ್ದಾರೆ ಮತ್ತು ತಮ್ಮ ಸಾಲಗಳನ್ನು ಮರುಪಾವತಿಸುವ ಉತ್ತಮ ದಾಖಲೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ದೊಡ್ಡ ರಾಜ್ಯಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಮುಂದಾಳತ್ವ ವಹಿಸಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

 

 

***