Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ಟೇಟ್ ಕೌನ್ಸಿಲರ್ ಮತ್ತು ಚೀನಾದ ರಕ್ಷಣಾ ಸಚಿವ ಜನರಲ್ ವೆಯಿ ಫೆಂಘೆ ಅವರಿಂದ ಪ್ರಧಾನಮಂತ್ರಿ ಭೇಟಿ.


ಸ್ಟೇಟ್ ಕೌನ್ಸಿಲರ್ ಮತ್ತು ಚೀನಾದ ರಕ್ಷಣಾ ಸಚಿವ ಜನರಲ್ ವೆಯಿ ಫೆಂಘೆ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ರಕ್ಷಣಾ ಮತ್ತು ಸೇನಾ ವಿನಿಮಯ ಸೇರಿದಂತೆ ಭಾರತ-ಚೀನಾ ನಡುವಣ ಎಲ್ಲ ವಲಯಗಳಲ್ಲಿ ಉನ್ನತ-ಹಂತದ ಸಂಪರ್ಕಗಳ ಗತಿ ವೃದ್ಧಿಗೊಳ್ಳುತ್ತಿರುವ ಬಗ್ಗೆ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಪ್ರಶಂಸಿಸಿದರು. ಭಾರತ ಮತ್ತು ಚೀನಾ ತಮ್ಮ ನಡುವಣ ವಿರೋಧಗಳನ್ನು ನಿಭಾಯಿಸುತ್ತಾ, ಕಲಹಗಳಿಗೆ ಆಸ್ಪದಮಾಡಿಕೊಡದೆ, ಗಡಿಪ್ರದೇಶದಲ್ಲಿ ನೆಮ್ಮದಿ ಮತ್ತು ಶಾಂತಿಯನ್ನು ಕಾಪಾಡಿಕೊಂಡಿರುವುದು ಸಂವೇದನಶೀಲತೆ ಮತ್ತು ಪ್ರಭುದ್ಧತೆಯ ಸೂಚಕವಾಗಿದೆ ಮತ್ತು ಭಾರತ-ಚೀನಾ ಬಾಂಧವ್ಯ ವಿಶ್ವದಲ್ಲಿ ಸ್ಥಿರತೆಯ ವಿಷಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು

ಇತ್ತೀಚೆಗೆ ವುಹಾನ್ , ಕ್ವಿಂಗ್ಡಾವ್ ಮತ್ತು ಜೋಹನ್ನೆಸ್ಬರ್ಗ್ ಗಳಲ್ಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾಗಿರುವುದನ್ನು ಪ್ರಧಾನಮಂತ್ರಿ ಮೋದಿ ಅವರು ಸಂತಸದಿಂದ ನೆನಪಿಸಿಕೊಂಡರು.

*****