ಸೌದಿ ಅರೇಬಿಯಾದ ಪಟ್ಟದ ರಾಜಕುಮಾರ ಗೌರವಾನ್ವಿತ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಟೆಲಿಫೋನ್ ಸಂವಾದ ನಡೆಸಿದರು. ಕೋವಿಡ್ 19 ಸರ್ವವ್ಯಾಪಿ ವ್ಯಾಧಿಯ ಕುರಿತಾದ ಜಾಗತಿಕ ಪರಿಸ್ಥಿತಿಯ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
ಕೇವಲ ಸಾವಿರಾರು ಜನರ ನೆಮ್ಮದಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ವಿಶ್ವದ ಹಲವು ಭಾಗಗಳಲ್ಲಿ ಆರ್ಥಿಕತೆಯ ಮೇಲೂ ಅಡ್ಡ ಪರಿಣಾಮ ಬೀರಿರುವ ಈ ಜಾಗತಿಕ ಸವಾಲನ್ನು ಎದುರಿಸಲು ಸಂಘಟಿತ ಪ್ರಯತ್ನದ ಅವಶ್ಯಕತೆ ಕುರಿತು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು.
ಈ ನಿಟ್ಟಿನಲ್ಲಿ ಸಾರ್ಕ್ ರಾಷ್ಟ್ರಗಳ ವಿಡಿಯೋ ಕಾನ್ಫೆರೆನ್ಸ್ ಆಯೋಜನೆಗೆ ಭಾರತದ ಉಪಕ್ರಮದ ಕುರಿತು ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು.
20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿರುವ ಸೌದಿ ಅರೇಬಿಯಾ ಆಶ್ರಯದಲ್ಲಿ ಜಿ 20 ನಾಯಕರ ಮಟ್ಟದಲ್ಲಿ ಇಂಥದೇ ಕಾರ್ಯಕ್ರಮ ಕೈಗೊಳ್ಳುವುದು ಜಾಗತಿಕ ಮಟ್ಟದಲ್ಲಿ ವ್ಯಾಪಿಸಿದ ಕೋವಿಡ್ – 19 ರಿಂದಾಗ ಎದುರಾಗಿರುವ ಸವಾಲುಗಳನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಮತ್ತು ಜಾಗತಿಕವಾಗಿ ಜನಸಮುದಾಯದಲ್ಲಿ ಆತ್ಮ ವಿಶ್ವಾಸವನ್ನು ತುಂಬಲು ಜಾಗತಿಕ ಮಟ್ಟದಲ್ಲಿ ಲಾಭದಾಯಕವಾಗಿರಲಿದೆ ಎಂಬುದಕ್ಕೆ ಉಭಯ ನಾಯಕರು ಸಮ್ಮತಿ ಸೂಚಿಸಿದರು.
ಈ ನಿಟ್ಟಿನಲ್ಲಿ ಉಭಯ ನಾಯಕರ ಸಿಬ್ಬಂದಿ ನಿಕಟ ಸಂಪರ್ಕದಲ್ಲಿರಲಿವೆ ಎಂದು ಪ್ರಧಾನ ಮಂತ್ರಿಗಳು ಮತ್ತು ಪಟ್ಟದ ರಾಜಕುಮಾರ ನಿರ್ಧರಿಸಿದ್ದಾರೆ.