Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೇನಾ ದಿನದಂದು ಭಾರತೀಯ ಸೇನೆಯ ಅಚಲ ಧೈರ್ಯಕ್ಕೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ


ಸೇನಾ ದಿನವಾದ ಇಂದು ಭಾರತೀಯ ಸೇನೆಯ ಅಚಲ ಧೈರ್ಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. “ಭಾರತೀಯ ಸೇನೆಯು ದೃಢನಿಶ್ಚಯ, ವೃತ್ತಿಪರತೆ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. “ನಮ್ಮ ಸರ್ಕಾರವು ಸಶಸ್ತ್ರ ಪಡೆಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ, ನಾವು ಹಲವಾರು ಸುಧಾರಣೆಗಳನ್ನು ಪರಿಚಯಿಸಿದ್ದೇವೆ ಮತ್ತು ಆಧುನೀಕರಣದ ಮೇಲೆ ಕೇಂದ್ರೀಕರಿಸಿದ್ದೇವೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿಯವರು ‘ಎಕ್ಸ್’ ತಾಣದ ತಮ್ಮ ಸಂದೇಶದಲ್ಲಿ ಈ ರೀತಿ ಮಾಹಿತಿ ಹಂಚಿಕೊಂಡಿದ್ದಾರೆ;

“ಸೇನಾ ದಿನವಾದ ಇಂದು, ನಮ್ಮ ರಾಷ್ಟ್ರದ ಭದ್ರತೆಯ ಕಾವಲುಗಾರರಾಗಿ ನಿಂತಿರುವ ಭಾರತೀಯ ಸೇನೆಯ ಅಚಲ ಧೈರ್ಯಕ್ಕೆ ನಾವು ನಮಿಸುತ್ತೇವೆ. ಪ್ರತಿದಿನ ಕೋಟ್ಯಂತರ ಭಾರತೀಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಧೈರ್ಯಶಾಲಿಗಳು ಮಾಡಿದ ತ್ಯಾಗಗಳನ್ನು ಸಹ ನಾವು ಸ್ಮರಿಸುತ್ತೇವೆ.”

“ಭಾರತೀಯ ಸೇನೆಯು ದೃಢನಿಶ್ಚಯ, ವೃತ್ತಿಪರತೆ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತದೆ. ನಮ್ಮ ಗಡಿಗಳನ್ನು ರಕ್ಷಿಸುವುದರ ಜೊತೆಗೆ, ನಮ್ಮ ಸೇನೆಯು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮಾನವೀಯ ಸಹಾಯವನ್ನು ನೀಡುವಲ್ಲಿ ಒಂದು ವಿಶೇಷವಾದ ಛಾಪನ್ನು ಮೂಡಿಸಿದೆ.”

“ನಮ್ಮ ಸರ್ಕಾರ ಸಶಸ್ತ್ರ ಪಡೆಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ, ನಾವು ಹಲವಾರು ಸುಧಾರಣೆಗಳನ್ನು ಪರಿಚಯಿಸಿದ್ದೇವೆ ಮತ್ತು ಆಧುನೀಕರಣದತ್ತ ಗಮನಹರಿಸಿದ್ದೇವೆ. ಇದು ಮುಂಬರುವ ಸಮಯಗಳಲ್ಲಿಯೂ ಕೂಡಾ ಮುಂದುವರಿಯುತ್ತದೆ.”

 

*****