ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ಸೇಂಟ್ ಪೀಟರ್ಸ್ ಬರ್ಗ್ ನ ಬೌದ್ಧ ದೇವಾಲಯ ದತ್ಸನ್ ಗುಂಜೇಚೋನೈ ಮುಖ್ಯ ಆರಾಧಕ, ಬುಧ ಬ್ಲಜೇವಿಕ್ ಬಡ್ಮಯೇವ್, ಜಂಪಾ ಡೋನರ್ ಅವರಿಗೆ 100 ಸಂಪುಟಗಳ ಉರ್ಗಾ ಕಂಜೂರ್ ಸಮರ್ಪಿಸಿದರು.
ಪ್ರೊ. ರಘು ವೀರ ಅವರು ಗ್ರಂಥಸೂಚಿಯನ್ನೊಳಗೊಂಡು ಒಂದು ಸಂಪುಟ ಸೇರಿದಂತೆ 104 ಸಂಪುಟಗಳನ್ನು ಭಾರತಕ್ಕೆ ತರುವವರೆಗೆ ಅಂದರೆ 1955ರವರೆಗೆ ಟಿಬೇಟಿಯನ್ ಕಂಜೂರ್ ನ ಉರ್ಗಾ ಸಂಪುಟವು ಅಪರಿಚಿತವಾಗಿತ್ತು. ಅದನ್ನು ಅವರಿಗೆ ಮಂಗೋಲಿಯಾದ ಪ್ರಜಾ ಗಣರಾಜ್ಯದ ಪ್ರಧಾನಮಂತ್ರಿ ಅವರು, ವಿಶಿಷ್ಠ ವಿರಳ ಗ್ರಂಥಸೂಚಿಯಾಗಿ ನೀಡಿದ್ದರು.
ಈ ಕಂಜೂರ್ ಅನ್ನು ಮಂಗೋಲಿಯಾದ ಕೊನೆಯ ಜಿಬ್ಕುಂಡಂಪದರ ಆಶ್ರಯದಲ್ಲಿ 1908ರಿಂದ 1920ರ ಅವಧಿಯಲ್ಲಿ ಪರಿಷ್ಕರಿಸಿ, ಸಂಪಾದಿಸಿ ಮತ್ತು ದಾರು ಮುದ್ರಣ ಮಾಡಲಾಗಿತ್ತು (xylographed). ಇದನ್ನು ಡಿರ್ಗೆ ಮತ್ತು ಚೀನಿಯ ಎರಡು ಆವೃತ್ತಿಗಳಲ್ಲಿ (ರಗ್ಯ –ಪಾರ್-ಮಾಗ್ ಉಯಿಸ್ – Rgya-par-mag Uis) ಸಂಗ್ರಹಿಸಲಾಗಿತ್ತು. ಇದು ಹಳೆಯ ಗ್ರಂಥಸೂಚಿ ಹಪ್ಹಾನ್ –ಥನ್-ಮಾ ಆಧರಿಸಿದ ತ್ಸಹಲ್ – ಪರ ಕಂಜೂರ್ ವ್ಯವಸ್ಥೆಯನ್ನು ಉಳಿಸಿಕೊಂಡಿತ್ತು, ಇದರ ಅಳತೆ (35×25ಸೆಂ.ಮೀ.)ಯದಾಗಿದ್ದು, ಹೆಸರಾಂತ ಕ್ಸೈಲೋಗ್ರಾಫ್ಡ್ ಆವೃತ್ತಿಗಳಿಗಿಂತಲೂ ಚಿಕ್ಕದಾಗಿತ್ತು.
*****
AKT/AK
PM presents Urga Kanjur to Jampa Donor, Buda Balzheivich Badmayev, Head Priest, Datsan Gunzechoinei Buddhist Temple, St Petersburg. pic.twitter.com/TINSiWKCDH
— PMO India (@PMOIndia) June 2, 2017