Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೇಂಟ್ ಪೀಟರ್ಸ್ ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯ ಸಮಗ್ರ ಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ

ಸೇಂಟ್ ಪೀಟರ್ಸ್ ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯ ಸಮಗ್ರ ಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಸೇಂಟ್ ಪೀಟರ್ಸ್ ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ (ಎಸ್.ಪಿ.ಐ.ಇ.ಎಫ್.) ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ಅಧಿವೇಶನದ ಧ್ಯೇಯ –“ಜಾಗತಿಕ ವೇದಿಕೆಯಲ್ಲಿ ಹೊಸ ಸಮತೋಲನ ಸಾಧಿಸುವುದು’’ ಎಂಬುದಾಗಿತ್ತು.

ಎಸ್.ಪಿ.ಐ.ಇ.ಎಫ್.ನಲ್ಲಿ ಭಾರತವು ಈ ವರ್ಷ ‘ಅತಿಥಿ ರಾಷ್ಟ್ರ’ವಾಗಿತ್ತು ಮತ್ತು ಪ್ರಧಾನಿ ಮೋದಿ ಅವರು “ಗೌರವಾನ್ವಿತ ಅತಿಥಿಗಳಾಗಿದ್ದರು’’.

ತಮ್ಮ ಭಾಷಣದಲ್ಲಿ ಪ್ರಧಾನಿಯವರು, ಸುಂದರವಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಎಸ್.ಪಿ.ಐ.ಇ.ಎಫ್.ನಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಅರ್ಪಿಸಿದರು.

ಭಾರತ – ರಷ್ಯಾ ಬಾಂಧವ್ಯದ ಕುರಿತು ಮಾತನಾಡಿದ ಪ್ರಧಾನಿ, ಉತ್ತಮ ವೇಗದೊಂದಿಗೆ ಮುನ್ನಡೆಯುತ್ತಿರುವುದಾಗಿ ತಿಳಿಸಿದರು. ಪರಸ್ಪರ ವಿಶ್ವಾಸದ ನೆಲೆಯ ಕೆಲವೇ ಕೆಲವು ಬಾಂಧವ್ಯಗಳಿರುತ್ತವೆ ಎಂದು ಅವರು ತಿಳಿಸಿದರು. ಭಾರತ ಮತ್ತು ರಷ್ಯಾ ನಡುವಿನ 70 ವರ್ಷಗಳ ಬಾಂಧವ್ಯ ವಿಶ್ವಾಸದ ಆಧಾರದ ಮೇಲಿದೆ, ಬದಲಾಗುತ್ತಿರುವ ವಿಶ್ವದಲ್ಲೂ ಅದು ಬಲವಾಗಿದೆ ಎಂದು ಹೇಳಿದರು.

ಎಸ್.ಪಿ.ಐ.ಇ.ಎಫ್.ನಲ್ಲಿ ತಾವು 125 ಕೋಟಿ ಭಾರತೀಯರ ಪ್ರತಿನಿಧಿಯಾಗಿ ಬಂದಿರುವುದಾಗಿ ತಿಳಿಸಿದರು. ಇಡೀ ವಿಶ್ವ ಏಷ್ಯಾದತ್ತ ಗಮನ ಹರಿಸಿದೆ ಮತ್ತು ಹೀಗಾಗಿ ಸ್ವಾಭಾವಿಕವಾಗಿಯೇ ಭಾರತದ ಮೇಲೆ ಗಮನ ನೀಡಿದೆ ಎಂದರು. ಕಳೆದ ಮೂರು ವರ್ಷಗಳಲ್ಲಿ ಪ್ರಧಾನಮಂತ್ರಿಯಾಗಿ ಕೇಂದ್ರ ಸರ್ಕಾರದ ವತಿಯಿಂದ ಎಲ್ಲ ರಂಗಗಳಲ್ಲಿ ಪ್ರಗತಿಪರ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು. ಇಂದು ನಾವು ವಾರ್ಷಿಕ ಜಿಡಿಪಿ ದರ ಶೇ.7ನ್ನು ಸಾಧಿಸಿದ್ದೇವೆ ಎಂದೂ ತಿಳಿಸಿದರು.

” ಕನಿಷ್ಠ ಸಿಬ್ಬಂದಿ, ಗರಿಷ್ಠ ಆಡಳಿತ” ಮತ್ತು “ಕೆಂಪು ಹಾಸಿನ ಬದಲಾಗಿ ಕೆಂಪು ಟೇಪು”ಭಾರತದಲ್ಲ ಸರ್ಕಾರ ಮಾಡಿರುವ ಮೂಲಭೂತ ಸುಧಾರಣೆ ಎಂದು ಮೋದಿ ತಿಳಿಸಿದರು. ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ಹಾಗೂ ಸ್ಪಷ್ಟ ನಿಲುವು ಅಗತ್ಯ ಎಂದು ಪ್ರತಿಪಾದಿಸಿದರು. ಆಡಳಿತಶಾಹಿ ಕೂಡ ಚಲನಶೀಲವಾಗಿದ್ದು, ನಾಯಕತ್ವದೊಂದಿಗೆ ಹೊಂದಿಕೊಳ್ಳಬೇಕೆಂದರು.
ವೈವಿಧ್ಯತೆಯೇ ಭಾರತದ ಶಕ್ತಿ ಎಂದ ಪ್ರಧಾನಮಂತ್ರಿಯವರು, ಜುಲೈ 1ರಿಂದ ಜಾರಿಗೆ ಬರುತ್ತಿರುವ ಸರಕು ಮತ್ತು ಸೇವೆಗಳ ತೆರಿಗೆ ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆಯನ್ನು ತರಲಿದೆ ಎಂದು ಹೇಳಿದರು.

ತಂತ್ರಜ್ಞಾನ ಪ್ರಮುಖಪಾತ್ರವಹಿಸುತ್ತದೆ ಎಂದು ತಮಗಿಂತ ಮೊದಲು ಮಾತನಾಡಿದ ಅಧ್ಯಕ್ಷ ಪುಟಿನ್ ಅವರು ಹೇಳಿದ ಮಾತುಗಳಿಗೆ ಒಪ್ಪಿಗೆ ಸೂಚಿಸಿದ ಪ್ರಧಾನಮಂತ್ರಿ, ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಪ್ರಸ್ತಾಪಿಸಿದರು. ಡಿಜಿಟಲ್ ಅಸಮಾನತೆ ಸಮಾಜದಲ್ಲಿ ಬೇರೂರಲು ಬಿಡುವುದಿಲ್ಲ ಎಂದು ಅವರು ಹೇಳಿದರು.

ಹಣಪೂರಣಕ್ಕೆ ಸಂಬಂಧಿಸಿದಂತೆ, ಪ್ರಧಾನಿ ಜನ್ ಧನ್, ಆಧಾರ್, ಮೊಬೈಲ್ (ಜಾಮ್) ತ್ರಿವಳಿಗಳ ವಿಷಯದ ಪ್ರಸ್ತಾಪ ಮಾಡಿದರು. ಕೇಂದ್ರ ಸರ್ಕಾರ 1200 ಅನಗತ್ಯ ಕಾನೂನುಗಳನ್ನು ರದ್ದುಮಾಡಿದೆ ಎಂದು ತಿಳಿಸಿದರು.
ಭಾರತದಲ್ಲಿ ಸುಲಭವಾಗಿ ವಹಿವಾಟು ನಡೆಸಲು ಅನುವಾಗುವಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ 7 ಸಾವಿರ ಸುಧಾರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸ್ಪರ್ಧಾತ್ಮಕತೆ ಮತ್ತು ಎಫ್.ಡಿ.ಐ.ಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನೂ ಪ್ರಧಾನಿ ಪ್ರಸ್ತಾಪಿಸಿ, ಅಂತಾರಾಷ್ಟ್ರೀಯ ಶ್ರೇಣೀಕರಣ ಮಾಡುವ ಸಂಸ್ಥೆಗಳು ಭಾರತವನ್ನು ಮೊದಲ ಮೂರು ನೆಚ್ಚಿನ ತಾಣಗಳಲ್ಲಿ ಒಂದೆಂದು ಗುರುತಿಸಿವೆ ಎಂದರು.
ಹೂಡಿಕೆದಾರರ ಸುರಕ್ಷತೆಯ ಮಹತ್ವಕ್ಕೆ ಸಂಬಂಧಿಸಿದಂತೆ, ಭಾರತ ಚೈತನ್ಯಶೀಲ ಆರ್ಥಿಕತೆ ಮತ್ತು ಆಂಗ್ಲ ಭಾಷೆಯ ಬಳಕೆ ಹೊಂದಿದ್ದು, ಸುರಕ್ಷತೆಯ ಖಾತ್ರಿಯಲ್ಲಿ ಬಹುದೂರ ಸಾಗಿದೆ ಎಂದರು.

ನವ ಭಾರತದ ದೃಷ್ಟಿಕೋನದೊಂದಿಗೆ ಕೌಶಲ ಅಭಿವೃದ್ಧಿಗೆ ಪ್ರಥಮ ಆಧ್ಯತೆ ನೀಡಲಾಗಿದ್ದು, 800 ದಶಲಕ್ಷ ಗಟ್ಟಿ ಹಾಗೂ ಪ್ರತಿಭಾವಂತ ಯುವಜನರ ಶಕ್ತಿಯನ್ನು ಭಾರತ ಹೊಂದಿದೆ ಎಂದು ಪ್ರಧಾನಿ ತಿಳಿಸಿದರು. ಈ ನಿಟ್ಟಿನಲ್ಲಿ ಪ್ರಥಮ ಪ್ರಯತ್ನದಲ್ಲೇ ಭಾರತದ ಮಂಗಳಯಾನದ ಯಶಸ್ಸನ್ನು ಪ್ರಧಾನಿ ಪ್ರಸ್ತಾಪಿಸಿದರು. ನವ ಭಾರತದಲ್ಲಿ ಯುವಜನರು ಉದ್ಯೋಗ ಕೇಳುವವರಾಗಿರುವುದಿಲ್ಲ, ಬದಲಾಗಿ ಉದ್ಯೋಗ ಸೃಷ್ಟಿಸುವವರಾಗಿರುತ್ತಾರೆ; ಮತ್ತು ಜಾಗತಿಕವಾದ ಕೌಶಲ ಮಾನವ ಸಂಪನ್ಮೂಲದ ಅಗತ್ಯ ಪೂರೈಸಬಲ್ಲವರಾಗಿರುತ್ತಾರೆ ಎಂದರು.

ಭಾರತದಲ್ಲಿ ಹೆಚ್ಚುತ್ತಿರುವ ನಗರೀಕರಣಕ್ಕೆ ಮೆಟ್ರೋ ರೈಲು ಜಾಲ ಸೇರಿದಂತೆ ಅತ್ಯಾಧುನಿಕ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆಯ ಇತ್ಯಾದಿಯ ಅಗತ್ಯವಿದೆ ಎಂದರು. ರೈಲ್ವೆ ಜಾಲವನ್ನು ವಿಸ್ತರಿಸುವ ಮತ್ತು ಆಧುನೀಕರಿಸುವ ಬಗ್ಗೆಯೂ ಮಾತನಾಡಿದರು. ಗಂಗಾಶುದ್ಧೀಕರಣ ಉಪಕ್ರಮದ ಬಗ್ಗೆಯೂ ಅವರು ಮಾತನಾಡಿದರು. ಈ ಎಲ್ಲವೂ ಹೂಡಿಕೆಯ ದೊಡ್ಡ ಅವಕಾಶಗಳನ್ನು ಪ್ರತಿನಿಧಿಸುತ್ತವೆ ಎಂದು ಪ್ರಧಾನಿ ಹೇಳಿದರು.

ಕೃಷಿ ಕ್ಷೇತ್ರದಲ್ಲಿನ ಉಪಕ್ರಮಗಳನ್ನು ಒತ್ತಿ ಹೇಳಿದ ಪ್ರಧಾನಿ, ಸಾವಯವ ಕೃಷಿ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರಗಳ ಹೂಡಿಕೆಯ ಪ್ರಸ್ತಾಪ ಮಾಡಿದರು. ಉತ್ಪಾದನಾ ಕ್ಷೇತ್ರದಲ್ಲಿ ವೈದ್ಯಕೀಯ ಉಪಕರಣಗಳ ಮತ್ತು ರಕ್ಷಣಾ ಸಾಧನಗಳ ಉತ್ಪಾದನೆ ಕ್ಷೇತ್ರ ವಿದೇಶೀ ಹೂಡಿಕೆಗೆ ಪ್ರಮುಖವಾದ ಕ್ಷೇತ್ರವಾಗಿದೆ ಎಂದರು.

ಸೇವಾ ಕ್ಷೇತ್ರದ ವಿಷಯದಲ್ಲಿ ಪ್ರಧಾನಿ, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರ ಉನ್ನತ ಆದ್ಯತೆ ಪಡೆಯುತ್ತದೆ ಎಂದರು.
ನಾಲ್ಕು ವೇದಗಳಲ್ಲಿ ಒಂದಾದ ಅಥರ್ವವೇದವನ್ನು 5000 ವರ್ಷಗಳ ಹಿಂದೆಯೇ ಪ್ರಕೃತಿಗೆ ಸಮರ್ಪಣೆ ಮಾಡಲಾಗಿದೆ ಎಂದ ಪ್ರಧಾನಮಂತ್ರಿಗಳು, ಭಾರತೀಯ ಆರ್ಥಿಕ ಪ್ರಗತಿಯು ಪ್ರಕೃತಿಯ ಶೋಷಣೆಯಿಂದ ಕೂಡಿರಲಿಲ್ಲ,- ಅದು ಅಪರಾಧ-, ಪ್ರಕೃತಿಯ ಬಳಕೆಯ ಮತ್ತು ಸಂರಕ್ಷಣೆ ಮತ್ತು ಅದನ್ನು ಗೌರವಿಸುವುದರಲ್ಲಿದೆ ಎಂದರು. ಭಾರತವು 2022ರ ವೇಳೆಗೆ 175 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನಿ, ಭಾರತವು ಶಾಖೋತ್ಪನ್ನ ವಿದ್ಯುತ್ ಗೆ ಬದಲಾಗಿ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಸಾಮರ್ಥ್ಯ ಹೆಚ್ಚಳಕ್ಕೆ ಘಟಕ ಸ್ಥಾಪಿಸುತ್ತಿದೆ ಎಂದರು. ಹವಾಮಾನಕ್ಕೆ ಸಂಬಂಧಿಸಿದಂತೆ ಭಾರತವು ಹೆಚ್ಚು ಜವಾಬ್ದಾರಿಯಿಂದ ಕೂಡಿದ ರಾಷ್ಟ್ರ ಎಂದು ಪ್ರತಿಪಾದಿಸಿದ ಪ್ರಧಾನಿ, ಪರಿಸರಕ್ಕೆ ಪ್ರತೀಕೂಲ ಪರಿಣಾಮ ಬೀರದಂಥ ಶೂನ್ಯ ನ್ಯೂನತೆ, ಶೂನ್ಯ ಪರಿಣಾಮದ ಉತ್ಪಾದನೆಗಾಗಿ ಕೆಲಸ ಮಾಡುತ್ತಿದೆ ಎಂದರು. ಎಲ್.ಇ.ಡಿ. ಬಲ್ಬ್ ವಿತರಣೆಯಂಥ ಕಾರ್ಯಕ್ರಮ ಈಗಾಗಲೇ ದೊಡ್ಡ ಪ್ರಮಾಣದ ವಿದ್ಯುತ್ ಉಳಿತಾಯಕ್ಕೆ ಕಾರಣವಾಗಿದೆ ಎಂದರು.
ಭಾರತದಲ್ಲಿ ಹೂಡಿಕೆಗೆ ದಿಗಂತವೇ ಮಿತಿ ಎಂದ ಪ್ರಧಾನಿ, ಜಾಗತಿಕ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆಗೆ ಮನವಿ ಮಾಡಿದರು

*****

AKT/SH