Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೆಪ್ಟೆಂಬರ್ 11ರಂದು ಲಕ್ಷಗಟ್ಟಲೆ ಆಶಾ (ASHA), ಅನಮ್ (ANM) ಮತ್ತು ಅಂಗನವಾಡಿ (Anganwadi) ಕಾರ್ಯಕರ್ತೆಯರೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ


“ಪೋಷಣ್ ಮಾಹ್” ( ಪೋಷಣಾ ಮಾಸ) ನ ಅಂಗವಾಗಿ ಲಕ್ಷಾಂತರ ಆಶಾ (ASHA),ಅನಮ್ (ANM),ಅಂಗನವಾಡಿ (Anganwadi) ಕಾರ್ಯಕರ್ತೆಯರು ಮತ್ತು ಆರೋಗ್ಯ ಫಲಾನುಭವಿಗಳೊಂದಿಗೆ ಸೆಪ್ಟೆಂಬರ್ 11, 2018 ರಂದು ಬೆಳಿಗ್ಗೆ 10: 30ಕ್ಕೆ ವಿಡಿಯೊ ಸಂವಾದ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಾದ ನಡೆಸಲಿದ್ದಾರೆ.

ದೇಶದಾದ್ಯಂತ ಸೆಪ್ಟೆಂಬರ್ 2018ರನ್ನು “ಪೋಷಣ್ ಮಾಹ್” (ಪೌಷ್ಟಿಕಾಂಶಗಳಿಗಾಗಿ ಸಮರ್ಪಿತ ತಿಂಗಳು) ಆಗಿ ಆಚರಿಸಲಾಗುವುದು. ಅತ್ಯುತ್ತಮ ಪೋಷಕಾಂಶದ ಮಹತ್ವದ ಕುರಿತು ದೇಶದಾದ್ಯಂತ ಪ್ರತಿಯೊಂದೂ ಕುಟುಂಬಕ್ಕೂ ಸಂದೇಶ ರವಾನಿಸುವ ಗುರಿ ಹೊಂದಲಾಗಿದೆ.

ಕೇಂದ್ರ ಸರಕಾರ 2017 ರಲ್ಲಿ ಪ್ರಾರಂಭಿಸಿದ ಪೋಷಣಾ ಅಭಿಯಾನ ( ರಾಷ್ಟ್ರೀಯ ಪೌಷ್ಟಕಾಂಶ ಮಿಷನ್ )ಯ ಧ್ಯೇಯೋದ್ಧೇಶಗಳ ಮುಂದುವರಿದ ಹೆಜ್ಜೆ ಇದಾಗಿದೆ. ಮಗುವಿನ ಕುಗ್ಗಿದ ಶರೀರದ, ಅಪೌಷ್ಟಿಕತೆ ( ಪೌಷ್ಟಿಕತೆಯ ಕೊರತೆ ) , ರಕ್ತದಕೊರತೆ ( ಅನೇಮಿಯಾ) ಮತ್ತು ಕಡಿಮೆ ಭಾರದಲ್ಲಿ ಹುಟ್ಟಿದ ಹಸುಳೆಗಳು ಮುಂತಾದವುಗಳನ್ನು ಕಡಿಮೆಗೊಳಿಸುವ ಉದ್ಧೇಶವನ್ನು ಮಿಷನ್ ಹೊಂದಿದೆ.

ಪೋಷಣಾ ಅಭಿಯಾನದ ಅಡಿಯಲ್ಲಿ ಮಗುವಿನ ಕುಗ್ಗಿದ ಶರೀರ, ಅಪೌಷ್ಟಿಕತೆ, ರಕ್ತದಕೊರತೆ (ಯುವಮಕ್ಕಳು , ಮಹಿಳೆಯರು ಮತ್ತು ಪ್ರಾಪ್ತ ಹೆಣ್ಣುಮಕ್ಕಳಲ್ಲಿ) ಮತ್ತು ಹಸುಳೆಗಳು ಕಡಿಮೆ ಭಾರದಲ್ಲಿ ಹುಟ್ಟುವುದನ್ನು ವಾರ್ಷಿಕವಾಗಿ ಪ್ರತಿ ವರ್ಷವೂ 2%, 2%, 3% ಮತ್ತು 2% ಕಡಿಮೆಗೊಳಿಸಲು ಗುರಿಯನ್ನು ಕೇಂದ್ರ ಸರಕಾರ ಸಿದ್ದಪಡಿಸಿದೆ.

ಕೊನೆಯಲ್ಲಿ, ಪ್ರಧಾನಮಂತ್ರಿ ಅವರ ಮಾತುಕತೆ ವಿವಿಧ ರೀತಿಯಲ್ಲಿ ಈ ಮಿಷನ್ ನಲ್ಲಿ ಅಂಗವಾಗಿರುವವರನ್ನು ಒಟ್ಟಾಗಿಸುತ್ತದೆ. ಪೌಷ್ಟಿಕಾಂಶದ ಕ್ಷೇತ್ರದಲ್ಲಿನ ಯಶೋಗಾಥೆಗಳನ್ನು ಹಂಚಿಕೊಳ್ಳುವ ಮತ್ತು ವಿನಿಮಯ ಮಾಡುವ ವೇದಿಕೆ ಇದಾಗಲಿದೆ.