Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೆಪಕ್ ಟಕ್ರಾ ವಿಶ್ವಕಪ್ 2025ರಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದ ಪುರುಷರ ರೆಗು ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೆಪಕ್ ಟಕ್ರಾ ವಿಶ್ವಕಪ್ 2025ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಸೆಪಕ್ ಟಕ್ರಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಭಾರತಕ್ಕೆ ಮೊದಲ ಚಿನ್ನವನ್ನು ತಂದಿದ್ದಕ್ಕಾಗಿ ಅವರು ತಂಡವನ್ನು ಶ್ಲಾಘಿಸಿದರು.

ಈ ಸಂಬಂಧ ಎಕ್ಸ್ ಖಾತೆಯಲ್ಲಿನ ಪೋಸ್ಟ್ ನಲ್ಲಿ, ಅವರು ಹೇಳಿದರು:

“ಸೆಪಕ್ ಟಕ್ರಾ ವಿಶ್ವಕಪ್ 2025ರಲ್ಲಿ ಅದ್ಭುತ ಕ್ರೀಡಾ ಶ್ರೇಷ್ಠತೆಯನ್ನು ಪ್ರದರ್ಶಿಸಿದ ನಮ್ಮ ತಂಡಕ್ಕೆ ಅಭಿನಂದನೆಗಳು! ತಂಡವು 7 ಪದಕಗಳನ್ನು ತವರಿಗೆ ತರುತ್ತಿದೆ. ಪುರುಷರ ರೆಗು ತಂಡವು ಭಾರತಕ್ಕೆ ಮೊದಲ ಚಿನ್ನವನ್ನು ತಂದು ಇತಿಹಾಸ ನಿರ್ಮಿಸಿದೆ.

ಈ ಅದ್ಭುತ ಪ್ರದರ್ಶನವು ಜಾಗತಿಕ ಸೆಪಕ್ ಟಕ್ರಾ ರಂಗದಲ್ಲಿ ಭಾರತಕ್ಕೆ ಭರವಸೆಯ ಭವಿಷ್ಯವನ್ನು ಸೂಚಿಸುತ್ತದೆ,’’ಎಂದು ಹೇಳಿದ್ದಾರೆ.

*****