Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೂರತ್ ನಲ್ಲಿ ವಜ್ರ ಉತ್ಪಾದನೆ ಘಟಕ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ

ಸೂರತ್ ನಲ್ಲಿ ವಜ್ರ ಉತ್ಪಾದನೆ ಘಟಕ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು, ಸೂರತ್ ನಲ್ಲಿ ಕಿರಣ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆ. ಹರೆಕೃಷ್ಣ ಎಕ್ಸ್ ಪೋರ್ಟ್ಸ್ ಪ್ರೈ. ಲಿ.ನ ವಜ್ರ ಉತ್ಪಾದನೆ ಘಟಕವನ್ನು ಉದ್ಘಾಟಿಸಿದರು.

ಈ ಆಸ್ಪತ್ರೆಯ ನಿರ್ಮಾಣದಲ್ಲಿನ ಸಮರ್ಪಣಾ ಪ್ರಯತ್ನಗಳನ್ನು ಅವರು “ಶ್ಲಾಘನೀಯ” ಎಂದು ಬಣ್ಣಿಸಿದರು, ಮತ್ತು ಈ ಸುಸಜ್ಜಿತ ಆಸ್ಪತ್ರೆಯಿಂದ ನಾಗರಿಕರಿಗೆ ಅನುಕೂಲವಾಗಲಿದೆ ಎಂದರು. ಬಡವರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ದೊರಕಬೇಕು ಎಂದು ಪ್ರಧಾನಿ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಸ್ಟೆಂಟ್ಸ್ ಗಳು, ಔಷಧಗಳು ಮತ್ತು ಇತ್ಯಾದಿ ದರವನ್ನು ಇಳಿಸುವಲ್ಲಿ ಕೇಂದ್ರ ಸರ್ಕಾರದ ಉಪಕ್ರಮಗಳ ಬಗ್ಗೆ ಅವರು ಮಾತನಾಡಿದರು. ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸಲು ಬದ್ಧವಾಗಿರುವುದಾಗಿ ಪ್ರಧಾನಮಂತ್ರಿಯವರು ಹೇಳಿದರು. ರೋಗ ತಡೆಗಟ್ಟುವ ಆರೋಗ್ಯ ಆರೈಕೆಯ ಬಗ್ಗೆ ಗಮನ ಹರಿಸುವಂತೆ ಕರೆ ನೀಡಿದ ಪ್ರಧಾನಿ, ಸ್ವಚ್ಛ ಭಾರತ ಅಭಿಯಾನವನ್ನು ಆರೋಗ್ಯಪೂರ್ಣ ಭಾರತದ ಪ್ರಯತ್ನಗಳಿಗೆ ಜೋಡಿಸುವುದಾಗಿ ತಿಳಿಸಿದರು.

ಸೂರತ್ ವಜ್ರ ಕೈಗಾರಿಕೆಯಲ್ಲಿ ಗುರುತಿಸಿಕೊಂಡಿದೆ ಎಂದ ಪ್ರಧಾನಿ, ಈಗ ಸಂಪೂರ್ಣ ರತ್ನಾಭರಣ ವಲಯದತ್ತ ನೋಡುವ ಅಗತ್ಯವಿದೆ ಎಂದರು. ರತ್ನ ಮತ್ತು ಹರಳು ವಲಯಕ್ಕೆ ಸಂಬಂಧಿಸಿದಂತೆ ನಮ್ಮ ಗುರಿ ಕೇವಲ ಮೇಕ್ ಇನ್ ಇಂಡಿಯಾ ಮಾತ್ರ ಆಗಿರಬಾರದು, ಜೊತೆಗೆ ಭಾರತದಲ್ಲಿ ವಿನ್ಯಾಸಗೊಳಿಸುವುದೂ ಆಗಬೇಕು ಎಂದರು.

AKT/HS