Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೂರತ್ ನಲ್ಲಿ ನಾಳೆ ಹಜೀರಾಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2019ರ ಜನವರಿ 19ರಂದು ಅಂದರೆ ನಾಳೆ ಸೂರತ್ ನಲ್ಲಿ ಹಜೀರಾಗೆ ಭೇಟಿ ನೀಡಲಿದ್ದಾರೆ.

ಹಜೀರಾದಲ್ಲಿ ಅವರು, ಎಲ್ ಅಂಡ್ ಟಿ ರಕ್ಷಾಕವಚ(Armoured) ವ್ಯವಸ್ಥೆಯ ಸಂಕೀರ್ಣಕ್ಕೆ ಭೇಟಿ ನೀಡಿ, ದೇಶಕ್ಕೆ ಅದನ್ನು ಸಮರ್ಪಿಸಲು ಫಲಕ ಅನಾವರಣ ಮಾಡಲಿದ್ದಾರೆ. ನೌಸಾರಿಯಲ್ಲಿ ಅವರು ನಿರಾಲಿ ಕ್ಯಾನ್ಸರ್ ಆಸ್ಪತ್ರೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ.

ಅತ್ಯಾಧುನಿಕವಾದ ನಿರಾಲಿ ಕ್ಯಾನ್ಸರ್ ಆಸ್ಪತ್ರೆ ನೌಸಾರಿಯ ಪ್ರಥಮ ಸಮಗ್ರ ಕ್ಯಾನ್ಸರ್ ಆಸ್ಪತ್ರೆಯಾಗಿದೆ. ಇದರಿಂದ ದಕ್ಷಿಣ ಗುಜರಾತ್ ಮತ್ತು ಸುತ್ತಮುತ್ತಲ ರಾಜ್ಯಗಳ ಕ್ಯಾನ್ಸರ್ ರೋಗಿಗಳಿಗೆ ಪ್ರಯೋಜನವಾಗಲಿದೆ.

ಪ್ರಧಾನಮಂತ್ರಿಯವರ ಮೂರು ದಿನಗಳ ಗುಜರಾತ್ ಭೇಟಿಯಲ್ಲಿ ನಾಳೆ ಕೊನೆಯ ದಿನವಾಗಿದೆ.

ತಮ್ಮ ಭೇಟಿಯ ಮೊದಲ ದಿನ ಮಂಗಳವಾರ ಅವರು ವೈಬ್ರೆಂಟ್ ಗುಜರಾತ್ ವಾಣಿಜ್ಯ ಪ್ರದರ್ಶನವನ್ನು ಗಾಂಧೀನಗರದಲ್ಲಿ ಉದ್ಘಾಟಿಸಿದ್ದರು. ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಅಹಮದಾಬಾದ್ ಶಾಪಿಂಗ್ ಉತ್ಸವವನ್ನು ಅಹಮದಾಬಾದ್ ನಲ್ಲಿ ಉದ್ಘಾಟಿಸಿದ್ದರು. ತರುವಾಯ ಇಂದು ಗಾಂಧೀನಗರದ ಮಹಾತ್ಮಾ ಮಂದಿರ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆ 2019ರ 9ನೇ ಅವೃತ್ತಿಯನ್ನು ಉದ್ಘಾಟಿಸಿದ್ದರು.