ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಶ್ರೇಣಿಯ ಪರಾಮರ್ಶೆ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯದ ಅಭಿವೃದ್ಧಿ ಆಯುಕ್ತರ (ಎಂಎಸ್ಎಂಇ) ಕಚೇರಿಯಲ್ಲಿ ಹೊಸದಾಗಿ ‘ಭಾರತೀಯ ಉದ್ದಿಮೆ ಅಭಿವೃದ್ಧಿ ಸೇವೆ (ಇಐಡಿಎಸ್)’ ರಚನೆಗೆ ತನ್ನ ಒಪ್ಪಿಗೆ ಸೂಚಿಸಿದೆ. ಹೊಸ ಕೇಡರ್ ನ ಸೃಷ್ಟಿ ಮತ್ತು ಸ್ವರೂಪದಲ್ಲಿನ ಬದಲಾವಣೆ ಸಂಸ್ಥೆಯನ್ನು ಬಲಪಡಿಸುವುದಷ್ಟೇ ಅಲ್ಲ, ಇದು ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಮುನ್ನೋಟದ ಸಾಧನೆಗೂ ನೆರವಾಗಲಿದೆ.
ಈ ಕ್ರಮವು ಸಂಸ್ಥೆಯ ಸಾಮರ್ಥ್ಯ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಗಮನಹರಿಸುವ ಮತ್ತು ಸಮರ್ಪಿತ ಕೇಡರ್ ನ ತಾಂತ್ರಿಕ ಅಧಿಕಾರಿಗಳ ಮೂಲಕ ಎಂ.ಎಸ್.ಎಂ.ಇ. ವಲಯದ ಅಭಿವೃದ್ಧಿ ಸಾಧಿಸುವುದಕ್ಕೂ ನೆರವಾಗಲಿದೆ.
AD/SH