ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ 2025-26ರ ವರೆಗೆ ಸ್ವಚ್ಛ ಭಾರತ ಮಿಷನ್(ನಗರ) ಮುಂದುವರಿಕೆಗೆ ಅನುಮೋದನೆ ನೀಡಿದೆ. ಇದರಡಿ 2021ರ ಜನಗಣತಿ ಪ್ರಕಾರ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಎಲ್ಲ ನಗರಗಳಲ್ಲಿ(ಅಟಲ್ ನಗರ ನವೀಕರಣ ಮತ್ತು ನಗರ ಪರಿವರ್ತನೆ ಯೋಜನೆ(ಅಮೃತ್) ಅಡಿ ಸೇರದ) ತ್ಯಾಜ್ಯ ನೀರು ನಿರ್ವಹಣೆ ಮಾಡುವುದು ಮತ್ತು ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಸಾಧಿಸುವುದು, ಬಯಲು ಶೌಚ ಮುಕ್ತ(ಒಡಿಎಫ್) ಫಲಿತಾಂಶದಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುವುದು.
ಎಸ್ ಬಿಎಂ–ನಗರ 2.0 ಅಡಿಯಲ್ಲಿ ಒಟ್ಟು ಹಣಕಾಸು ವೆಚ್ಚ:
ಎಸ್ ಬಿಎಂ–ಯು 2.0ಗೆ ಒಟ್ಟು 1,41,600 ಕೋಟಿ ರೂ. ಆರ್ಥಿಕ ವೆಚ್ಚವಾಗಲಿದೆ ಎಂದು ಅಂತಿಮಗೊಳಿಸಲಾಗಿದೆ. ಇದರಲ್ಲಿ 2021-22ರಿಂದ 2025-26ರ ವರೆಗೆ ಕೇಂದ್ರ ಸರ್ಕಾರದ ಒಟ್ಟು ಪಾಲು 36,465 ಕೋಟಿ ರೂ. ಇದು ಮೊದಲ ಹಂತದ ಮಿಷನ್ನಲ್ಲಿ 62,009 ಕೋಟಿ ರೂ.ಗೆ ಹೋಲಿಸಿದರೆ 2.5ಪಟ್ಟು ಅಧಿಕ ವೆಚ್ಚ ನಿಗದಿಪಡಿಸಲಾಗಿದೆ.
ಸ್ವಚ್ಛ ಭಾರತ್ ಮಿಷನ್ – ನಗರ 2.0 ಅಡಿ ನಿರೀಕ್ಷಿತ ಫಲಿತಾಂಶಗಳು
ನಿರ್ಮಲೀಕರಣ:
ಘನತ್ಯಾಜ್ಯ ನಿರ್ವಹಣೆ
ಸ್ವಚ್ಛ ಭಾರತ್ ಮಿಷನ್ – ನಗರ 2.0: ಪ್ರಮುಖ ಮುಖ್ಯಾಂಶಗಳು
ಮುಂದಿನ ಐದು ವರ್ಷಗಳಲ್ಲಿ ಎಸ್ ಬಿಎಂ–ಯು 2.0ಗೆ ಗೌರವಾನ್ವಿತ ಪ್ರಧಾನಮಂತ್ರಿ ಅವರು 2021ರ ಅಕ್ಟೋಬರ್ 1ರಂದು ಚಾಲನೆ ನೀಡಿ, ಅದರ ಉದ್ದೇಶ ಸುಸ್ಥಿರ ನಿರ್ಮಲೀಕರಣ ಮತ್ತು ಘನ ತ್ಯಾಜ್ಯ ನಿರ್ವಹಣಾ ಫಲಿತಾಂಶಗಳನ್ನು ಸಾಧಿಸಲು ಒತ್ತು ನೀಡುವುದು ಮತ್ತು ನಗರ ಭಾರತವನ್ನು ‘ತ್ಯಾಜ್ಯ ಮುಕ್ತ’ಗೊಳಿಸುವ ಗುರಿ ಸಾಧನೆ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಚುರುಕುಗೊಳಿಸುವುದು.
ಮಿಷನ್ನ ಜಾರಿ ಅಂಶಗಳನ್ನು ವ್ಯವಸ್ಥಿತ ರೀತಿಯಲ್ಲಿ ಮತ್ತು ಕಾಲಮಿತಿಯಲ್ಲಿ ಮಾಡಲಾಗುವುದು, ಅಗತ್ಯ ಮೂಲಸೌಕರ್ಯವನ್ನು ಸಮಗ್ರ ಅಂತರ ವಿಶ್ಲೇಷಣೆ ಮೂಲಕ ಒದಗಿಸಲಾಗುವುದು, 5 ವರ್ಷಗಳ ಸಮಗ್ರ ಕ್ರಿಯಾ ಯೋಜನೆ ಮತ್ತು ಕಾಲಮಿತಿಯ ವಾರ್ಷಿಕ ಕ್ರಿಯಾ ಯೋಜನೆಗಳು ಒಳಗೊಂಡಿವೆ. ಈ ಮಿಷನ್ ಸಂಪೂರ್ಣ ಕಾಗದರಹಿತ, ಡಿಜಿಟಲ್ ಆಗಿರಲಿದ್ದು, ಸಂಪೂರ್ಣ ಪಾರದರ್ಶಕತೆಗೆ ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುವುದು. ಜಿಐಎಸ್ ಆಧಾರಿತ ತ್ಯಾಜ್ಯ ನಿರ್ವಹಣಾ ಮೂಲಸೌಕರ್ಯದ ಮೂಲಕ ಉತ್ತರದಾಯಿತ್ವ, ಉತ್ಕೃಷ್ಟ ಬಳಕೆದಾರರ ಮುಖಾಮುಖಿ ವ್ಯವಸ್ಥೆ, ಆನ್ ಲೈನ್ ಕುಂದುಕೊರತೆ ಪರಿಹಾರ ವ್ಯವಸ್ಥೆ, ಮೊದಲಿನಿಂದ ಕೊನೆಯವರೆಗೆ ಅಂದರೆ ಯೋಜನೆ ರೂಪಿಸುವುದರಿಂದ ಹಿಡಿದು ನಿಧಿ ಬಿಡುಗಡೆವರೆಗೆ ಆನ್ ಲೈನ್ ನಿಗಾ ವ್ಯವಸ್ಥೆ ಮತ್ತು ಜಿಐಎಸ್ ಆಧರಿತ ವೇದಿಕೆಯಿಂದ ಸಮಗ್ರ ಯೋಜನಾ ಪ್ರಗತಿ ಮೇಲ್ವಿಚಾರಣೆ ನಡೆಸಲಾಗುವುದು.
ಪ್ರಗತಿ ಆಧರಿಸಿ ಹಣ ಬಿಡುಗಡೆ, ಸಣ್ಣ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಆರ್ಥಿಕ ನೆರವು ಮತ್ತು ಹೆಚ್ಚುವರಿ ಆರ್ಥಿಕ ಬೆಂಬಲಕ್ಕೆ 15ನೇ ಹಣಕಾಸು ಆಯೋಗದ ಅನುದಾನದ ಸಂಯೋಜನೆ, ಪ್ರತಿಯೊಂದು ಅಂಶದ ವ್ಯವಸ್ಥಿತ ಜಾರಿ ಯೋಜನೆ , ಉತ್ಕೃಷ್ಟ ಸಾಮರ್ಥ್ಯ ವೃದ್ಧಿ, ಸಂವಹನ ಮತ್ತು ಸುಸ್ಥಿರ ನಡವಳಿಕೆ ಬದಲಾವಣೆಗೆ ಪ್ರತಿಪಾದಿಸುವುದು, ಖಾಸಗಿ ವಲಯದ ಸಹಭಾಗಿತ್ವಕ್ಕೆ ತೀವ್ರ ಒತ್ತು ನೀಡುವುದು ಮತ್ತು ವ್ಯಾಪಕ ಕೈಗಾರಿಕಾ ಸಹಭಾಗಿತ್ವದಿಂದ ಮಿಷನ್ನ ಉದ್ದೇಶಗಳನ್ನು ನಿಗದಿತ ಕಾಲಮಿತಿಯೊಳಗೆ ಸಾಧಿಸಲು ನೆರವು ನೀಡುವುದು.
ಸ್ವಚ್ಛ ಭಾರತ್ ಮಿಷನ್–ನಗರ 2.0 ಅಡಿ ಪ್ರಮುಖಾಂಶಗಳು
ಸ್ವಚ್ಛ ಭಾರತ್ ಮಿಷನ್–ನಗರ 2.0 ಜಾರಿಗೆ ಈ ಕೆಳಗಿನ ಪ್ರಮುಖಾಂಶಗಳನ್ನು ಪಾಲಿಸಬೇಕಿದೆ.
ಸುಸ್ಥಿರ ನಿರ್ಮಲೀಕರಣ
ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆ:
ಈ ಮೇಲಿನ ಅಂಶಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಎಲ್ಲ ಸಂಬಂಧಿಸಿದ ಪಾಲುದಾರರ ಉತ್ಕೃಷ್ಟ ಸಾಮರ್ಥ್ಯವೃದ್ಧಿ ಮೂಲಕ ಸಾಧಿಸಲಾಗುವುದು ಮತ್ತು ಜನಾಂದೋಲನವನ್ನು ಮತ್ತಷ್ಟು ತೀವ್ರಗೊಳಿಸಲು ಸಂವಹನ ಮತ್ತು ವಕಾಲತ್ತಿನ ಮೂಲಕ ಹೆಚ್ಚಿನ ಜನರು ಭಾಗಿಯಾಗುವಂತೆ ಮಾಡುವುದಕ್ಕೆ ಹೆಚ್ಚಿನ ಗಮನಹರಿಸುವಂತೆ ಮಾಡುವುದು.
ಪೌರಕಾರ್ಮಿಕರು ಮತ್ತು ಅಸಂಘಟಿತ ತ್ಯಾಜ್ಯ ನಿರ್ವಹಣೆ ಕೆಲಸಗಾರರ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡುವುದು, ಅವರಿಗೆ ವೈಯಕ್ತಿಕ ರಕ್ಷಣಾ ಸಾಧನಗಳು ಮತ್ತು ಸುರಕ್ಷತಾ ಕಿಟ್ ಗಳನ್ನು ಒದಗಿಸುವುದು ಮತ್ತು ಅವರ ಸಾಮರ್ಥ್ಯವೃದ್ಧಿ ಜೊತೆಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಸಂಯೋಜಿಸುವುದು.
ಸ್ವಚ್ಛ ಭಾರತ್ ಮಿಷನ್–ನಗರ 2.0 ಉದ್ದೇಶಗಳು
ಪ್ರಧಾನಮಂತ್ರಿಯವರ ದೂರದರ್ಶಿ ನಾಯಕತ್ವದಡಿ 2014ರಲ್ಲಿ ಭಾರತ ನಗರ ಯೋಜನೆಗೆ ಸಮಗ್ರ ದೃಷ್ಟಿಕೋನವನ್ನು ಅಳವಡಿಸಿಕೊಂಡಿತು ಮತ್ತು ನೀರು ಮತ್ತು ನೈರ್ಮಲ್ಯ ವಲಯದಲ್ಲಿ ಪರಿವರ್ತನೆಯ ಪಯಣವನ್ನು ಆರಂಭಿಸಿತು. ಪ್ರಧಾನಮಂತ್ರಿ ಅವರು 2014ರ ಆಗಸ್ಟ್ 15ರಂದು ಎಸ್ ಬಿಎಂ ಯೋಜನೆಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದರು ಮತ್ತು ಅಧಿಕೃತವಾಗಿ ಯೋಜನೆ 2014ರ ಅಕ್ಟೋಬರ್ 2ರಂದು ಈ ಕೆಳಗಿನ ಉದ್ದೇಶಗಳೊಂದಿಗೆ ಆರಂಭವಾಯಿತು.
ಸ್ವಚ್ಛ ಭಾರತ್ ಮಿಷನ್–ನಗರದ ಸಾಧನೆಗಳು
ಕಳೆದ 7 ವರ್ಷಗಳಲ್ಲಿ, ಮಿಷನ್ ದೇಶದ ಮೂಲೆ ಮೂಲೆಗಳನ್ನು ತಲುಪಿದೆ ಮತ್ತು ‘ಜನ ಮೊದಲು’ ಎಂಬುದಕ್ಕೆ ಒತ್ತು ನೀಡಿ ಅಸಂಖ್ಯಾತ ನಾಗರಿಕರ ಬದುಕುಗಳನ್ನು ಬದಲಾಯಿಸಿದೆ. ಎಸ್ ಬಿಎಂ–ನಗರದಡಿ ಸಾಧಿಸರುವ ಪ್ರಮುಖ ಮೈಲಿಗಲ್ಲುಗಳು, ಸಾಧನೆಗಳು ಮತ್ತು ಪರಿಣಾಮಗಳು ಈ ಕೆಳಗಿನಂತಿವೆ.
***
[1] 2018ರಲ್ಲಿ ಎಂಒಎಚ್ ಯುಎ ಬಿಡುಗಡೆ ಮಾಡಿದ ODF+ ಶಿಷ್ಟಾಚಾರದಲ್ಲಿ ಸ್ವಚ್ಛತೆಗೆ ಒತ್ತು ಮತ್ತು ಸಮುದಾಯ ಹಾಗೂ ಸಾರ್ವಜನಿಕ ಶೌಚಾಲಯಗಳ ಕಾರ್ಯನಿರ್ವಹಣೆಗೆ ಒತ್ತು ನೀಡಲಾಗಿದೆ.
[2] 2018ರಲ್ಲಿ ಎಂಒಎಚ್ ಯುಎ ODF++ ಶಿಷ್ಟಾಚಾರದಲ್ಲಿ ಸಂಪೂರ್ಣ ಮಲ ತ್ಯಾಜ್ಯ ಮತ್ತು ಸೆಪ್ಟೇಜ್ ನಿರ್ವಹಣೆಗೆ ಕೇಂದ್ರೀಕರಿಸಲಾಗಿದೆ.
[3] 2019ರಲ್ಲಿ ಎಂಒಎಚ್ ಯುಎ ಜಾರಿಗೊಳಿಸಿದ Water+ ಶಿಷ್ಟಾಚಾರದಡಿ ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಅದರ ಗರಿಷ್ಠ ಮರುಬಳಕೆಗೆ ಒತ್ತು ನೀಡಲಾಗಿದೆ.
***