Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ- ಆರ್ ಕೆ ವಿ ವೈ) ಮತ್ತು ಸ್ವಾವಲಂಬನೆಗಾಗಿ ಆಹಾರ ಭದ್ರತೆಯನ್ನು ಸಾಧಿಸಲು ಕೃಷೋನ್ನತಿ ಯೋಜನೆ (ಕೆವೈ) ಗೆ ಸಂಪುಟ ಅನುಮೋದನೆ ನೀಡಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಕೃಷಿ ಮತ್ತು ರೈತರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು (ಸಿ ಎಸ್ ಎಸ್) ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ- ಆರ್ ಕೆ ವಿ ವೈ) ಮತ್ತು ಕೃಷೋನ್ನತಿ ಯೋಜನೆ (ಕೆವೈ) ಎಂಬ ಎರಡು ಸಮೂಹ ಯೋಜನೆಗಳಾಗಿ ತರ್ಕಬದ್ಧಗೊಳಿಸುವ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ (ಡಿಎ ಮತ್ತು ಎಫ್ ಡಬ್ಲ್ಯು) ಪ್ರಸ್ತಾವನೆಯನ್ನು ಅನುಮೋದಿಸಿತು. ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ- ಆರ್ ಕೆ ವಿ ವೈ) ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತದೆ, ಕೃಷೋನ್ನತಿ ಯೋಜನೆಯು ಆಹಾರ ಭದ್ರತೆ ಮತ್ತು ಕೃಷಿ ಸ್ವಾವಲಂಬನೆಯನ್ನು ಸಾಧಿಸುತ್ತದೆ. ವಿವಿಧ ಘಟಕಗಳ ದಕ್ಷ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಘಟಕಗಳು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ.

ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ- ಆರ್ ಕೆ ವಿ ವೈ) ಮತ್ತು ಕೃಷೋನ್ನತಿ ಯೋಜನೆ (ಕೆವೈ) ಗಳನ್ನು ಒಟ್ಟು 1,01,321.61 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಗಳನ್ನು ರಾಜ್ಯ ಸರ್ಕಾರಗಳ ಮೂಲಕ ಜಾರಿಗೊಳಿಸಲಾಗುತ್ತದೆ.

ಈ ಕ್ರಮವು ಅಸ್ತಿತ್ವದಲ್ಲಿರುವ ಎಲ್ಲಾ ಯೋಜನೆಗಳ ಮುಂದುವರಿಕೆಯನ್ನು ಖಚಿತಪಡಿಸುತ್ತದೆ. ರೈತರ ಕಲ್ಯಾಣಕ್ಕಾಗಿ ಅಗತ್ಯವೆಂದು ಪರಿಗಣಿಸಲಾದ ಯಾವುದೇ ಪ್ರದೇಶದಲ್ಲಿ ಯೋಜನೆಯನ್ನು ಮಿಷನ್ ಮೋಡ್ ನಲ್ಲಿ ತೆಗೆದುಕೊಳ್ಳಲಾಗುವುದು, ಉದಾಹರಣೆಗೆ ಖಾದ್ಯ ತೈಲ-ಎಣ್ಣೆ ಪಾಮ್ [NMEO-OP] ರಾಷ್ಟ್ರೀಯ ಮಿಷನ್, ಕ್ಲೀನ್ ಪ್ಲಾಂಟ್ ಪ್ರೋಗ್ರಾಂ, ಡಿಜಿಟಲ್ ಅಗ್ರಿಕಲ್ಚರ್ ಮತ್ತು ಖಾದ್ಯ ತೈಲ-ಎಣ್ಣೆ ಬೀಜಗಳಿಗಾಗಿ ರಾಷ್ಟ್ರೀಯ ಮಿಷನ್ ( ಎನ್ ಎಂ ಇ ಒ).

ಕೃಷೋನ್ನತಿ (ಕೆವೈ) ಯೋಜನೆ ಅಡಿಯಲ್ಲಿನ ಘಟಕವಾದ ಈಶಾನ್ಯ ಪ್ರದೇಶಕ್ಕಾಗಿ ಸಾವಯವ ಮೌಲ್ಯ ಸರಪಳಿ ಅಭಿವೃದ್ಧಿ ಮಿಷನ್ (MOVCDNER) ಗೆ ವಿವರವಾದ ಯೋಜನಾ ವರದಿ (MOVCDNER-DPR) ಎಂಬ ಹೆಚ್ಚುವರಿ ಘಟಕವನ್ನು ಸೇರಿಸುವ ಮೂಲಕ (MOVCDNER) ಯೋಜನೆ ಅನ್ನು ಮಾರ್ಪಡಿಸಲಾಗುತ್ತಿದೆ. 

ಯೋಜನೆಗಳನ್ನು ತರ್ಕಬದ್ಧಗೊಳಿಸುವ ಮೂಲಕ, ರಾಜ್ಯದ ಕೃಷಿ ವಲಯದ ಸಮಗ್ರವಾದ ಕಾರ್ಯತಂತ್ರದ ದಾಖಲೆಯನ್ನು ತಯಾರಿಸಲು ರಾಜ್ಯಗಳಿಗೆ ಅವಕಾಶವನ್ನು ನೀಡಲಾಗುತ್ತದೆ. ಕಾರ್ಯತಂತ್ರದ ದಾಖಲೆಯು ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯ ಮೇಲೆ ಕೇಂದ್ರೀಕರಿಸುತ್ತದೆ, ಹಾಗೆಯೇ ಹವಾಮಾನ ತಾಳಿಕೆಯ ಕೃಷಿ ಮತ್ತು ಕೃಷಿ ಸರಕುಗಳಿಗೆ ಮೌಲ್ಯ ಸರಪಳಿಯ ವಿಧಾನದ ಅಭಿವೃದ್ಧಿಯ ಹೊಸ ಸಮಸ್ಯೆಗಳನ್ನು ಪರಿಹರಿಸುತ್ತದೆ. ಈ ಯೋಜನೆಗಳನ್ನು ಒಟ್ಟಾರೆ ಕಾರ್ಯತಂತ್ರ ಮತ್ತು ಯೋಜನೆಗಳು/ಕಾರ್ಯಕ್ರಮಗಳನ್ನು ರೂಪಿಸಲು ವಿನ್ಯಾಸಗೊಳಿಸಲಾಗಿದೆ, ಇವುಗಳು ಕಾರ್ಯತಂತ್ರದ ಚೌಕಟ್ಟಿನಿಂದ ಹೊರಹೊಮ್ಮುವ ಉದ್ದೇಶಗಳಿಗೆ ಸಂಬಂಧಿಸಿರುತ್ತವೆ.

ವಿವಿಧ ಯೋಜನೆಗಳ ತರ್ಕಬದ್ಧಗೊಳಿಸುವಿಕೆಯನ್ನು ಈ ಕೆಳಗಿನ ಉದ್ದೇಶಗಳಿಗಾಗಿ ಮಾಡಲಾಗಿದೆ:

•   ನಕಲು ತಪ್ಪಿಸಲು, ಸಂಯೋಜನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಜ್ಯಗಳಿಗೆ ನಮ್ಯತೆಯನ್ನು ಒದಗಿಸಲು.

•  ಕೃಷಿಯ ಉದಯೋನ್ಮುಖ ಸವಾಲುಗಳ ಮೇಲೆ ಕೇಂದ್ರೀಕರಿಸಿ – ಪೌಷ್ಟಿಕಾಂಶ ಭದ್ರತೆ, ಸುಸ್ಥಿರತೆ, ಹವಾಮಾನ ಸ್ಥಿತಿಸ್ಥಾಪಕತ್ವ, ಮೌಲ್ಯ ಸರಪಳಿ ಅಭಿವೃದ್ಧಿ ಮತ್ತು ಖಾಸಗಿ ವಲಯದ ಭಾಗವಹಿಸುವಿಕೆ.

• ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ತಮ್ಮ ಅವಶ್ಯಕತೆಗಳಿಗೆ ಸೂಕ್ತವಾದ ಸಮಗ್ರ ಕಾರ್ಯತಂತ್ರದ ಯೋಜನೆಯನ್ನು ರೂಪಿಸಲು ಸಾಧ್ಯವಾಗುತ್ತದೆ.

• ರಾಜ್ಯಗಳ ವಾರ್ಷಿಕ ಕ್ರಿಯಾ ಯೋಜನೆ (ಎಎಪಿ) ಯನ್ನು ವೈಯಕ್ತಿಕ ಯೋಜನೆ ಪ್ರಕಾರ ಅನುಮೋದಿಸುವ ಬದಲು ಒಮ್ಮೆಗೆ ಅನುಮೋದಿಸಬಹುದು.

ಒಂದು ಪ್ರಮುಖ ಬದಲಾವಣೆಯೆಂದರೆ, ಪಿಎಂ- ಆರ್ ಕೆ ವಿ ವೈ ನಲ್ಲಿ, ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ನಿರ್ದಿಷ್ಟ ಅವಶ್ಯಕತೆಗಳ ಆಧಾರದ ಮೇಲೆ ಒಂದು ಘಟಕದಿಂದ ಇನ್ನೊಂದಕ್ಕೆ ಹಣವನ್ನು ಮರು-ಹಂಚಿಕೆ ಮಾಡಲು ಅವಕಾಶವನ್ನು ನೀಡುವುದು.

ಒಟ್ಟು ಪ್ರಸ್ತಾವಿತ ವೆಚ್ಚ 1,01,321.61 ಕೋಟಿ ರೂ.ಗಳಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಗೆ ಕೇಂದ್ರ ಸರ್ಕಾರದ ಪಾಲು 69,088.98 ಕೋಟಿ ಮತ್ತು ರಾಜ್ಯ ಸರ್ಕಾರದ ಪಾಲು 32,232.63 ಕೋಟಿ ರೂ. ಇದರಲ್ಲಿ ಆರ್ ಕೆ ವಿ ವೈಗೆ 57,074.72 ಕೋಟಿ ರೂ.ಮತ್ತು ಕೆವೈಗೆ 44,246.89 ಕೋಟಿ ರೂಪಾಯಿಗಳು.

ಪಿಎಂ-ಆರ್ ಕೆ ವಿ ವೈ ಕೆಳಗಿನ ಯೋಜನೆಗಳನ್ನು ಒಳಗೊಂಡಿದೆ:

i. ಮಣ್ಣಿನ ಆರೋಗ್ಯ ನಿರ್ವಹಣೆ
ii ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ
iii ಕೃಷಿ ಅರಣ್ಯ 
iv. ಸಾಂಪ್ರದಾಯಿಕ ಕೃಷಿ ಅಭಿವೃದ್ಧಿ ಯೋಜನೆ
v. ಬೆಳೆ ತ್ಯಾಜ್ಯ ನಿರ್ವಹಣೆ ಸೇರಿದಂತೆ ಕೃಷಿ ಯಾಂತ್ರೀಕರಣ
vi. ಪ್ರತಿ ಹನಿ ಹೆಚ್ಚು ಬೆಳೆ
vii. ಬೆಳೆ ವೈವಿಧ್ಯೀಕರಣ ಕಾರ್ಯಕ್ರಮ
viii. ಆರ್ ಕೆ ವಿ ವೈ ಡಿಪಿಆರ್ ಘಟಕಗಳು
ix. ಅಗ್ರಿ ಸ್ಟಾರ್ಟ್ಅಪ್ ಗಳಿಗೆ ವೇಗವರ್ಧಕ ನಿಧಿ

 

*****