Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸುರಿನಾಮ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ರಾಷ್ಟ್ರಪತಿಗಳನ್ನು ಅಭಿನಂದಿಸಿದ‌ ಪ್ರಧಾನ ಮಂತ್ರಿಗಳು


ದಕ್ಷಿಣ ಅಮೆರಿಕದ ಸುರಿನಾಮ್ ದೇಶದ ಅತ್ಯುನ್ನತ ನಾಗರಿಕ ಗೌರವ ” ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್'” ಪ್ರಶಸ್ತಿಗೆ ಪಾತ್ರರಾದ ರಾಷ್ಟ್ರಪತಿಗಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,”ದಕ್ಷಿಣ ಅಮೆರಿಕದ ಸುರಿನಾಮ್ ದೇಶದ ಅತ್ಯುನ್ನತ ನಾಗರಿಕ ಗೌರವ ” ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್” ಪ್ರಶಸ್ತಿಗೆ ಪಾತ್ರರಾದ ರಾಷ್ಟ್ರಪತಿಗಳಿಗೆ ಅಭಿನಂದನೆಗಳು. ಸುರಿನಾಮ್ ದೇಶ ಹಾಗೂ ಜನತೆ ತೋರಿರುವ ಈ‌ ವಿಶೇಷ ಗೌರವವು ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಬಾಂದವ್ಯದ ಸಂಕೇತವೆನಿಸಿದೆ” ಎಂದು ಬಣ್ಣಿಸಿದ್ದಾರೆ.

***