Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಸುರಿನಾಮ್, ಟ್ರಿನಿಡಾಡ್ ಮತ್ತು ಟೊಬಾಗೋದ ಭಜನೆಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸುರಿನಾಮ್, ಟ್ರಿನಿಡಾಡ್ ಮತ್ತು ಟೊಬಾಗೋದ ಭಜನೆಗಳನ್ನು ಹಂಚಿಕೊಂಡಿದ್ದಾರೆ. ಈ ಭಜನೆಗಳು ರಾಮಾಯಣದ ಸನಾತನ ಸಂದೇಶವನ್ನು ಸಾರುತ್ತವೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಪ್ರಧಾನ ಮಂತ್ರಿಗಳು,

”ರಾಮಾಯಣದ ಸಂದೇಶವು ಪ್ರಪಂಚದಾದ್ಯಂತ ಜನರನ್ನು ಪ್ರೇರೇಪಿಸಿದೆ. ಸುರಿನಾಮ್, ಟ್ರಿನಿಡಾಡ್ ಮತ್ತು ಟೊಬಾಗೋದ ಕೆಲವು ಭಜನೆಗಳು ಇಲ್ಲಿವೆ:

ಶತಮಾನಗಳು ಕಳೆದಿರಬಹುದು, ಸಾಗರಗಳು ನಮ್ಮನ್ನು ಬೇರ್ಪಡಿಸಬಹುದು, ಆದರೆ ನಮ್ಮ ಸಂಪ್ರದಾಯಗಳ ಹೃದಯ ಬಡಿತವು ಪ್ರಪಂಚದ ಅನೇಕ ಭಾಗಗಳಲ್ಲಿ ಬಲವಾಗಿ ಮಿಡಿಯುತ್ತಿರುತ್ತದೆ. #ಶ್ರೀರಾಮಭಜನೆ” ಎಂದು ಬರೆದುಕೊಂಡಿದ್ದಾರೆ.

 

 

  

****