ಝೆಡ್-ಮೋರ್ಹ್ ಸುರಂಗಮಾರ್ಗ ಉದ್ಘಾಟನೆಗಾಗಿ ಜಮ್ಮು ಮತ್ತು ಕಾಶ್ಮೀರದ ಸೋನ್ಮಾರ್ಗ್ ಗೆ ಭೇಟಿ ನೀಡಲು ಕಾತರದಿಂದ ನಿರೀಕ್ಷಿಸುತ್ತಿರುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಈ ಸುರಂಗಮಾರ್ಗದ ಉದ್ಘಾಟನೆಗಾಗಿ ನಡೆದಿರುವ ಸಿದ್ಧತೆಯ ಕುರಿತಾದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಶ್ರೀ ಒಮರ್ ಅಬ್ದುಲ್ಲಾ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:
“ಸುರಂಗಮಾರ್ಗದ ಉದ್ಘಾಟನೆಗಾಗಿ ಜಮ್ಮು ಮತ್ತು ಕಾಶ್ಮೀರದ ಸೋನ್ಮಾರ್ಗ್ ಭೇಟಿಯನ್ನು ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ. ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಇದರ ಅನುಕೂಲಗಳ ಬಗ್ಗೆ ನೀವು ಸರಿಯಾಗಿ ಪ್ರಸ್ತಾಪಿಸಿರುವಿರಿ.
ವೈಮಾನಿಕ ಚಿತ್ರಗಳು ಮತ್ತು ವೀಡಿಯೊಗಳನ್ನು ಮೆಚ್ಚಿರುವೆ!”
*****
I am eagerly awaiting my visit to Sonmarg, Jammu and Kashmir for the tunnel inauguration. You rightly point out the benefits for tourism and the local economy.
— Narendra Modi (@narendramodi) January 11, 2025
Also, loved the aerial pictures and videos! https://t.co/JCBT8Ei175