Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸುಜ್ಲಾನ್ ಎನರ್ಜಿಯ ಸಂಸ್ಥಾಪಕರಾದ ಶ್ರೀ ತುಳಸಿ ತಾಂತಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಿರಿಯ ಉದ್ಯಮಿ ಮತ್ತು ಸುಜ್ಲಾನ್ ಎನರ್ಜಿಯ ಸಂಸ್ಥಾಪಕರಾದ ಶ್ರೀ ತುಳಸಿ ತಾಂತಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್‌ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;

“ಶ್ರೀ ತುಳಸಿ ತಾಂತಿ ಅವರು ಭಾರತದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದ ಪ್ರವರ್ತಕ ವ್ಯಾಪಾರವಲಯದ ದಿಗ್ಗಜರಾಗಿದ್ದರು ಮತ್ತು ಸುಸ್ಥಿರ ಅಭಿವೃದ್ಧಿಗೆ ನಮ್ಮ ರಾಷ್ಟ್ರದ ಪ್ರಯತ್ನಗಳನ್ನು ಬಲಪಡಿಸಿದರು. ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ.”

****