Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಹಿರಿಯ ಸಲಹೆಗಾರ ಶ್ರೀ ಒಸಾಮು ಸುಜುಕಿ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಹಿರಿಯ ಸಲಹೆಗಾರ ಶ್ರೀ ಒಸಾಮು ಸುಜುಕಿ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಮೇ 2022 ರಂದು ಟೋಕಿಯೊದಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಹಿರಿಯ ಸಲಹೆಗಾರ ಶ್ರೀ ಒಸಾಮು ಸುಜುಕಿ ಅವರನ್ನು ಭೇಟಿಯಾದರು. ಸಭೆಯಲ್ಲಿ, ಪ್ರಧಾನಮಂತ್ರಿಯವರು ಶ್ರೀ. ಸುಜುಕಿಯವರ ಸಹಯೋಗ ಮತ್ತು ಭಾರತದಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದರು ಮತ್ತು ಭಾರತದ ವಾಹನ ಉದ್ಯಮದಲ್ಲಿ ಸುಜುಕಿ ಮೋಟಾರ್ಸ್‌ ನ  ಪರಿವರ್ತನೆಯ ಪಾತ್ರವನ್ನು ಶ್ಲಾಘಿಸಿದರು. ಸುಜುಕಿ ಮೋಟಾರ್ ಗುಜರಾತ್ ಪ್ರೈವೇಟ್‌ ಲಿಮಿಟೆಡ್ ಮತ್ತು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಂಸ್ಥೆಗಳು  ವಾಹನ ಮತ್ತು ವಾಹನ ಬಿಡಿಭಾಗಗಳ ವಲಯದಲ್ಲಿ ಉತ್ಪಾದಕತೆ ಸಂಬಂಧಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ಅನುಮೋದಿಸಲಾದ ಅರ್ಜಿದಾರರಲ್ಲಿ ಸೇರಿರುವುದನ್ನು ಶ್ಲಾಘಿಸಿದರು.

ಸುಸ್ಥಿರ ಬೆಳವಣಿಗೆಯ ಗುರಿಯನ್ನು ಸಾಧಿಸಲು ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳು ಮತ್ತು ಮರುಬಳಕೆ ಕೇಂದ್ರಗಳ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸುವುದು ಸೇರಿದಂತೆ ಭಾರತದಲ್ಲಿ ಮತ್ತಷ್ಟು ಹೂಡಿಕೆ ಅವಕಾಶಗಳ ಕುರಿತು ಅವರು ಚರ್ಚಿಸಿದರು. ಜಪಾನ್-ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನುಫ್ಯಾಕ್ಚರಿಂಗ್ (ಜೆಐಎಂ) ಮತ್ತು ಜಪಾನೀಸ್ ಎಂಡೋವ್ಡ್ ಕೋರ್ಸ್‌ಗಳ (ಜೆಇಸಿ) ಮೂಲಕ ಕೌಶಲ್ಯ ಅಭಿವೃದ್ಧಿ ಸೇರಿದಂತೆ ಭಾರತದಲ್ಲಿ ಸ್ಥಳೀಯ ನಾವೀನ್ಯತೆ ವ್ಯವಸ್ಥೆಯನ್ನು ನಿರ್ಮಿಸುವ ಕಾರ್ಯತಂತ್ರಗಳ ಕುರಿತು ಅವರು ಚರ್ಚಿಸಿದರು.

***