ಗೌರವಾನ್ವಿತ ಪೆಡ್ರೊ ಸ್ಯಾಂಚೆಜ್, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಜೀ, ಭಾರತದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜೀ, ವಿದೇಶಾಂಗ ಸಚಿವರಾದ ಶ್ರೀ ಎಸ್. ಜೈಶಂಕರ್ ಜೀ, ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಸ್ಪೇನ್ ಮತ್ತು ರಾಜ್ಯ ಸರ್ಕಾರದ ಸಚಿವರು, ಏರ್ ಬಸ್ ಮತ್ತು ಟಾಟಾ ತಂಡಗಳ ಎಲ್ಲಾ ಸದಸ್ಯರು, ಮಹಿಳೆಯರೇ ಮತ್ತು ಮಹನೀಯರೇ!
ನಮಸ್ಕಾರ!
ಶುಭೊದಯ!
ನನ್ನ ಸ್ನೇಹಿತ ಶ್ರೀ ಪೆಡ್ರೊ ಸ್ಯಾಂಚೆಜ್ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದಿನಿಂದ ನಾವು ಭಾರತ ಮತ್ತು ಸ್ಪೇನ್ ನಡುವಿನ ಪಾಲುದಾರಿಕೆಗೆ ಹೊಸ ದಿಕ್ಕು ತೋರಿಸುತ್ತಿದ್ದೇವೆ. ಸಿ-295 ಸಾರಿಗೆ ವಿಮಾನದ ಉತ್ಪಾದನೆಗಾಗಿ ನಾವು ಕಾರ್ಖಾನೆಯನ್ನು ಉದ್ಘಾಟಿಸುತ್ತಿದ್ದೇವೆ. ಈ ಕಾರ್ಖಾನೆಯು ಭಾರತ-ಸ್ಪೇನ್ ಸಂಬಂಧಗಳನ್ನು ಬಲಪಡಿಸುವುದಲ್ಲದೆ, ನಮ್ಮ ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಅಭಿಯಾನವನ್ನು ಸಶಕ್ತಗೊಳಿಸುತ್ತದೆ. ಇಡೀ ಏರ್ ಬಸ್ ಮತ್ತು ಟಾಟಾ ತಂಡಗಳಿಗೆ ನನ್ನ ಶುಭಾಶಯಗಳು. ಇತ್ತೀಚೆಗೆ, ನಾವು ರಾಷ್ಟ್ರದ ಮಹಾನ್ ಪುತ್ರ ರತನ್ ಟಾಟಾ ಜೀ ಅವರನ್ನು ಕಳೆದುಕೊಂಡಿದ್ದೇವೆ. ರತನ್ ಟಾಟಾ ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ, ಅವರು ನಮ್ಮ ನಡುವೆ ಅತ್ಯಂತ ಸಂತೋಷವಾಗಿರುತ್ತಿದ್ದರು. ಅವರ ಆತ್ಮ ಎಲ್ಲೇ ಇರಲಿ, ಅವರು ಇಂದು ಅಪಾರ ಸಂತೋಷವನ್ನು ಅನುಭವಿಸುತ್ತಾರೆ ಎಂದು ನನಗೆ ಖಾತ್ರಿಯಿದೆ.
ಸ್ನೇಹಿತರೇ,
ಸಿ -295 ವಿಮಾನ ಕಾರ್ಖಾನೆಯು ನವ ಭಾರತದ ಹೊಸ ಕೆಲಸದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕಲ್ಪನೆಯಿಂದ ಕಾರ್ಯಗತಗೊಳಿಸುವವರೆಗೆ, ಭಾರತವು ಇಂದು ಕಾರ್ಯನಿರ್ವಹಿಸುತ್ತಿರುವ ವೇಗವು ಇಲ್ಲಿಸ್ಪಷ್ಟವಾಗಿದೆ. ಈ ಕಾರ್ಖಾನೆಯ ನಿರ್ಮಾಣವು ಎರಡು ವರ್ಷಗಳ ಹಿಂದೆ ಅಕ್ಟೋಬರ್‌ನಲ್ಲಿ ಪ್ರಾರಂಭವಾಯಿತು. ಮತ್ತು ಈ ಕಾರ್ಖಾನೆ ಅಕ್ಟೋಬರ್‌ನಲ್ಲಿಯೇ ವಿಮಾನ ಉತ್ಪಾದನೆಗೆ ಸಿದ್ಧವಾಗಿದೆ. ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿಅನಗತ್ಯ ವಿಳಂಬವನ್ನು ತಪ್ಪಿಸಲು ನಾನು ಯಾವಾಗಲೂ ಗಮನ ಹರಿಸಿದ್ದೇನೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವಡೋದರಾದಲ್ಲಿ ಬೊಂಬಾರ್ಡಿಯರ್ ರೈಲು ಬೋಗಿಗಳನ್ನು ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಆ ಕಾರ್ಖಾನೆಯನ್ನು ದಾಖಲೆಯ ಸಮಯದೊಳಗೆ ಉತ್ಪಾದನೆಗಾಗಿ ಸ್ಥಾಪಿಸಲಾಯಿತು. ಇಂದು, ನಾವು ಆ ಕಾರ್ಖಾನೆಯಲ್ಲಿತಯಾರಿಸಿದ ಮೆಟ್ರೋ ಬೋಗಿಗಳನ್ನು ಇತರ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಈ ಕಾರ್ಖಾನೆಯಲ್ಲಿಉತ್ಪಾದಿಸಲಾದ ವಿಮಾನಗಳನ್ನು ಭವಿಷ್ಯದಲ್ಲಿ ವಿಶ್ವದ್ಯಂತ ರಫ್ತು ಮಾಡಲಾಗುವುದು ಎಂದು ನನಗೆ ವಿಶ್ವಾಸವಿದೆ.
ಸ್ನೇಹಿತರೇ,
ಪ್ರಸಿದ್ಧ ಸ್ಪ್ಯಾನಿಷ್ ಕವಿ ಆಂಟೋನಿಯೊ ಮಚಾಡೋ ಒಮ್ಮೆ ಬರೆದರು:
ಪ್ರಯಾಣಿಕರೇ, ಯಾವುದೇ ಮಾರ್ಗವಿಲ್ಲ… ನಡಿಗೆಯ ಮೂಲಕ ಮಾರ್ಗವನ್ನು ರೂಪಿಸಲಾಗುತ್ತದೆ.
ನಾವು ನಮ್ಮ ಗುರಿಯತ್ತ ಮೊದಲ ಹೆಜ್ಜೆ ಇಟ್ಟ ಕ್ಷ ಣ, ಮಾರ್ಗಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ ಎಂದು ಇದು ಸೂಚಿಸುತ್ತದೆ. ಇಂದು, ಭಾರತದ ರಕ್ಷ ಣಾ ಉತ್ಪಾದನಾ ಪರಿಸರ ವ್ಯವಸ್ಥೆಯು ಹೊಸ ಎತ್ತರವನ್ನು ತಲುಪುತ್ತಿದೆ. ಒಂದು ದಶಕದ ಹಿಂದೆ ನಾವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಇಂದು ಈ ಮೈಲಿಗಲ್ಲನ್ನು ತಲುಪುವುದು ಅಸಾಧ್ಯವಾಗಿತ್ತು. ಆ ಸಮಯದಲ್ಲಿ, ಭಾರತದಲ್ಲಿದೊಡ್ಡ ಪ್ರಮಾಣದ ರಕ್ಷ ಣಾ ಉತ್ಪಾದನೆಯನ್ನು ಯಾರೂ ಊಹಿಸಲು ಸಾಧ್ಯವಾಗಲಿಲ್ಲ. ಆಗ ಆದ್ಯತೆಗಳು ಮತ್ತು ಗುರುತು ಆಮದುಗಳ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ನಾವು ಹೊಸ ಹಾದಿಯನ್ನು ತುಳಿಯಲು ಆರಿಸಿಕೊಂಡೆವು, ಹೊಸ ಗುರಿಗಳನ್ನು ನಿಗದಿಪಡಿಸಿದೆವು ಮತ್ತು ಇಂದು ನಾವು ಫಲಿತಾಂಶಗಳನ್ನು ನೋಡಬಹುದು.
ಸ್ನೇಹಿತರೇ,
ಯಾವುದೇ ಸಾಧ್ಯತೆಯನ್ನು ಸಮೃದ್ಧಿಯಾಗಿ ಪರಿವರ್ತಿಸಲು, ಸರಿಯಾದ ಯೋಜನೆ ಮತ್ತು ಸರಿಯಾದ ಪಾಲುದಾರಿಕೆ ಅತ್ಯಗತ್ಯ. ಭಾರತದ ರಕ್ಷ ಣಾ ಕ್ಷೇತ್ರದ ಪರಿವರ್ತನೆಯು ಸರಿಯಾದ ಯೋಜನೆ ಮತ್ತು ಸರಿಯಾದ ಪಾಲುದಾರಿಕೆಗೆ ಉದಾಹರಣೆಯಾಗಿದೆ. ಕಳೆದ ದಶಕದಲ್ಲಿ, ದೇಶವು ಭಾರತದಲ್ಲಿ ರೋಮಾಂಚಕ ರಕ್ಷ ಣಾ ಉದ್ಯಮವನ್ನು ಬೆಳೆಸುವ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಾವು ರಕ್ಷ ಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ವಿಸ್ತರಿಸಿದ್ದೇವೆ, ಸಾರ್ವಜನಿಕ ವಲಯದ ಘಟಕಗಳನ್ನು ಸಮರ್ಥಗೊಳಿಸಿದ್ದೇವೆ, ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಏಳು ದೊಡ್ಡ ಕಂಪನಿಗಳಾಗಿ ಪರಿವರ್ತಿಸಿದ್ದೇವೆ, ಡಿಆರ್‌ಡಿಒ ಮತ್ತು ಎಚ್‌ಎಎಲ್‌ಗೆ ಅಧಿಕಾರ ನೀಡಿದ್ದೇವೆ ಮತ್ತು ಯುಪಿ ಮತ್ತು ತಮಿಳುನಾಡಿನಲ್ಲಿ ಎರಡು ಪ್ರಮುಖ ರಕ್ಷಣಾ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಉಪಕ್ರಮಗಳು ರಕ್ಷಣಾ ವಲಯಕ್ಕೆ ಹೊಸ ಶಕ್ತಿಯನ್ನು ತುಂಬಿವೆ. ಐಡೆಕ್ಸ್ (ಇನ್ನೋವೇಶನ್ ಫಾರ್ ಡಿಫೆನ್ಸ್ ಎಕ್ಸಲೆಲ್ಸ್) ನಂತಹ ಯೋಜನೆಗಳು ನವೋದ್ಯಮಗಳಿಗೆ ಉತ್ತೇಜನ ನೀಡಿವೆ ಮತ್ತು ಕಳೆದ 5-6 ವರ್ಷಗಳಲ್ಲಿ, ಭಾರತದಲ್ಲಿಸುಮಾರು 1,000 ಹೊಸ ರಕ್ಷ ಣಾ ನವೋದ್ಯಮಗಳು ಹೊರಹೊಮ್ಮಿವೆ. ಕಳೆದ 10 ವರ್ಷಗಳಲ್ಲಿಭಾರತದ ರಕ್ಷ ಣಾ ರಫ್ತು 30 ಪಟ್ಟು ಹೆಚ್ಚಾಗಿದೆ. ಇಂದು, ನಾವು ವಿಶ್ವದ 100ಕ್ಕೂ ಹೆಚ್ಚು ದೇಶಗಳಿಗೆ ರಕ್ಷ ಣಾ ಉಪಕರಣಗಳನ್ನು ರಫ್ತು ಮಾಡುತ್ತಿದ್ದೇವೆ.
ಸ್ನೇಹಿತರೇ,
ಇಂದು, ನಾವು ಭಾರತದಲ್ಲಿಕೌಶಲ್ಯ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಹೆಚ್ಚು ಗಮನ ಹರಿಸಿದ್ದೇವೆ. ಏರ್‌ಬಸ್ ಮತ್ತು ಟಾಟಾದ ಈ ಕಾರ್ಖಾನೆಯು ಭಾರತದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಈ ಯೋಜನೆಯಿಂದಾಗಿ 18,000 ವಿಮಾನದ ಭಾಗಗಳ ದೇಶೀಯ ಉತ್ಪಾದನೆ ಪ್ರಾರಂಭವಾಗಲಿದೆ. ಒಂದು ಭಾಗವನ್ನು ದೇಶದ ಒಂದು ಭಾಗದಲ್ಲಿ ತಯಾರಿಸಬಹುದು, ಇನ್ನೊಂದು ಭಾಗವನ್ನು ಬೇರೆಡೆ ಉತ್ಪಾದಿಸಬಹುದು, ಮತ್ತು ಈ ಭಾಗಗಳನ್ನು ಯಾರು ತಯಾರಿಸುತ್ತಾರೆ? ನಮ್ಮ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು (ಎಂಎಸ್‌ಎಂಇಗಳು) ಈ ಕೆಲಸವನ್ನು ಮುನ್ನಡೆಸಲಿವೆ. ನಾವು ಈಗಾಗಲೇ ವಿಶ್ವಾದ್ಯಂತ ಪ್ರಮುಖ ವಿಮಾನ ಕಂಪನಿಗಳಿಗೆ ಭಾಗಗಳ ಅತಿದೊಡ್ಡ ಪೂರೈಕೆದಾರರಲ್ಲಿ ಒಬ್ಬರಾಗಿದ್ದೇವೆ. ಈ ಹೊಸ ವಿಮಾನ ಕಾರ್ಖಾನೆಯು ಭಾರತದಲ್ಲಿ ಹೊಸ ಕೌಶಲ್ಯ ಮತ್ತು ಹೊಸ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ.
ಸ್ನೇಹಿತರೇ,
ಈ ಘಟನೆಯನ್ನು ಕೇವಲ ಸಾರಿಗೆ ವಿಮಾನಗಳನ್ನು ತಯಾರಿಸುವುದಕ್ಕಿಂತಲೂ ಹೆಚ್ಚಿನದೆಂದು ನಾನು ನೋಡುತ್ತೇನೆ. ಕಳೆದ ದಶಕದಲ್ಲಿ, ಭಾರತದ ವಾಯುಯಾನ ಕ್ಷೇತ್ರದಲ್ಲಿಅಭೂತಪೂರ್ವ ಬೆಳವಣಿಗೆ ಮತ್ತು ಪರಿವರ್ತನೆಯನ್ನು ನೀವು ನೋಡಿದ್ದೀರಿ. ನಾವು ದೇಶಾದ್ಯಂತ ನೂರಾರು ಸಣ್ಣ ನಗರಗಳಿಗೆ ವಾಯು ಸಂಪರ್ಕವನ್ನು ವಿಸ್ತರಿಸುತ್ತಿದ್ದೇವೆ. ಭಾರತವನ್ನು ವಾಯುಯಾನ ಮತ್ತು ಎಂಆರ್‌ಒ (ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರಿಶೀಲನೆ) ಕೇಂದ್ರವನ್ನಾಗಿ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ಈ ಪರಿಸರ ವ್ಯವಸ್ಥೆಯು ಭವಿಷ್ಯದಲ್ಲಿ ‘ಮೇಡ್ ಇನ್ ಇಂಡಿಯಾ’ ನಾಗರಿಕ ವಿಮಾನಗಳಿಗೆ ದಾರಿ ಮಾಡಿಕೊಡುತ್ತದೆ. ವಿವಿಧ ಭಾರತೀಯ ವಿಮಾನಯಾನ ಸಂಸ್ಥೆಗಳು 1,200 ಹೊಸ ವಿಮಾನಗಳಿಗೆ ಆದೇಶ ನೀಡಿವೆ ಎಂದು ನಿಮಗೆ ತಿಳಿದಿರಬೇಕು. ಇದರರ್ಥ ಭವಿಷ್ಯದಲ್ಲಿ, ಈ ಕಾರ್ಖಾನೆಯು ಭಾರತ ಮತ್ತು ವಿಶ್ವದ ಅಗತ್ಯಗಳನ್ನು ಪೂರೈಸಲು ನಾಗರಿಕ ವಿಮಾನಗಳ ವಿನ್ಯಾಸ ಮತ್ತು ತಯಾರಿಕೆಯಲ್ಲಿನಿರ್ಣಾಯಕ ಪಾತ್ರ ವಹಿಸುತ್ತದೆ.
ಸ್ನೇಹಿತರೇ,
ಭಾರತದ ಈ ಪ್ರಯತ್ನಗಳಲ್ಲಿ ವಡೋದರಾ ನಗರವು ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ. ಈ ನಗರವು ಈಗಾಗಲೇ ಎಂಎಸ್‌ಎಂಇಗಳಿಗೆ ಬಲವಾದ ಕೇಂದ್ರವಾಗಿದೆ ಮತ್ತು ನಾವು ಇಲ್ಲಿಗತಿ ಶಕ್ತಿ ವಿಶ್ವವಿದ್ಯಾಲಯವನ್ನು ಸಹ ಹೊಂದಿದ್ದೇವೆ. ಈ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಿಗೆ ವೃತ್ತಿಪರರನ್ನು ಸಿದ್ಧಪಡಿಸುತ್ತಿದೆ. ವಡೋದರಾವು ಫಾರ್ಮಾ(ಔಷಧಾಲಯ) ವಲಯ, ಎಂಜಿನಿಯರಿಂಗ್ ಮತ್ತು ಭಾರಿ ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಮತ್ತು ವಿದ್ಯುತ್ ಮತ್ತು ಇಂಧನ ಉಪಕರಣಗಳಿಗೆ ಸಂಬಂಧಿಸಿದ ಹಲವಾರು ಕಂಪನಿಗಳನ್ನು ಹೊಂದಿದೆ. ಈಗ, ಈ ಇಡೀ ಪ್ರದೇಶವು ಭಾರತದಲ್ಲಿ ವಾಯುಯಾನ ಉತ್ಪಾದನೆಯ ಪ್ರಮುಖ ಕೇಂದ್ರವಾಗಲು ಸಜ್ಜಾಗಿದೆ. ಗುಜರಾತ್ ಸರ್ಕಾರ, ಮುಖ್ಯಮಂತ್ರಿ ಭೂಪೇಂದ್ರ ಭಾಯ್ ಮತ್ತು ಅವರ ಇಡೀ ತಂಡವನ್ನು ಅವರ ಆಧುನಿಕ ಕೈಗಾರಿಕಾ ನೀತಿಗಳು ಮತ್ತು ನಿರ್ಧಾರಗಳಿಗಾಗಿ ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ವಡೋದರಾ ಮತ್ತೊಂದು ವಿಶೇಷ ಗುಣಲಕ್ಷ ಣವನ್ನು ಹೊಂದಿದೆ. ಇದು ಪರಂಪರೆಯ ನಗರವಾದ ಭಾರತದ ಪ್ರಮುಖ ಸಾಂಸ್ಕೃತಿಕ ನಗರವಾಗಿದೆ. ಆದ್ದರಿಂದ, ಸ್ಪೇನ್ ನಿಂದ ನಿಮ್ಮೆಲ್ಲರನ್ನೂ ಇಲ್ಲಿಗೆ ಸ್ವಾಗತಿಸಲು ನಾನು ವಿಶೇಷವಾಗಿ ಸಂತೋಷಪಡುತ್ತೇನೆ. ಭಾರತ ಮತ್ತು ಸ್ಪೇನ್ ನಡುವೆ ಸಾಂಸ್ಕೃತಿಕ ಸಂಪರ್ಕಗಳು ವಿಶೇಷ ಮಹತ್ವವನ್ನು ಹೊಂದಿವೆ. ಸ್ಪೇನ್ ನಿಂದ ಬಂದು ಗುಜರಾತ್ ನಲ್ಲಿನೆಲೆಸಿದ ಫಾದರ್ ಕಾರ್ಲೋಸ್ ವಾಲೆಸ್ ಅವರು ತಮ್ಮ ಜೀವನದ ಐವತ್ತು ವರ್ಷಗಳನ್ನು ಇಲ್ಲಿ ಮುಡಿಪಾಗಿಟ್ಟರು ಮತ್ತು ಅವರ ಆಲೋಚನೆಗಳು ಮತ್ತು ಬರಹಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದರು. ಅವರನ್ನು ಹಲವಾರು ಬಾರಿ ಭೇಟಿಯಾಗುವ ಅದೃಷ್ಟ ನನ್ನದಾಗಿತ್ತು. ಅವರ ಗಮನಾರ್ಹ ಕೊಡುಗೆಗಳಿಗಾಗಿ ನಾವು ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿದ್ದೇವೆ. ಗುಜರಾತಿನಲ್ಲಿ ನಾವು ಅವರನ್ನು ಪ್ರೀತಿಯಿಂದ ಫಾದರ್ ವಾಲೆಸ್ ಎಂದು ಕರೆಯುತ್ತಿದ್ದೆವು ಮತ್ತು ಅವರು ಗುಜರಾತಿ ಭಾಷೆಯಲ್ಲಿಬರೆಯುತ್ತಿದ್ದರು. ಅವರ ಪುಸ್ತಕಗಳು ಗುಜರಾತಿ ಸಾಹಿತ್ಯ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿವೆ.
ಸ್ನೇಹಿತರೇ,
ಸ್ಪೇನ್‌ನಲ್ಲಿ ಯೋಗ ಬಹಳ ಜನಪ್ರಿಯವಾಗಿದೆ ಎಂದು ನಾನು ಕೇಳಿದ್ದೇನೆ. ಭಾರತೀಯ ಅಭಿಮಾನಿಗಳು ಸ್ಪೇನ್ ಫುಟ್ಬಾಲ್ ಅನ್ನು ಮೆಚ್ಚುತ್ತಾರೆ. ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ನಡುವಿನ ನಿನ್ನೆಯ ಪಂದ್ಯವು ಭಾರತದಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಟ್ಟಿತು ಮತ್ತು ಬಾರ್ಸಿಲೋನಾದ ಅದ್ಭುತ ಗೆಲುವು ಇಲ್ಲಿಯೂ ಚರ್ಚೆಯ ವಿಷಯವಾಯಿತು. ಭಾರತದ ಎರಡೂ ಕ್ಲಬ್‌ಗಳ ಅಭಿಮಾನಿಗಳು ಸ್ಪೇನ್ ನಂತೆಯೇ ಭಾವೋದ್ರಿಕ್ತವಾಗಿ ತಮಾಷೆಯಲ್ಲಿ ತೊಡಗುತ್ತಾರೆ ಎಂದು ನಾನು ಭರವಸೆ ನೀಡುತ್ತೇನೆ.
ಸ್ನೇಹಿತರೇ,
ಆಹಾರ, ಚಲನಚಿತ್ರಗಳು ಮತ್ತು ಫುಟ್ಬಾಲ್-ಈ ಎಲ್ಲಾ ಅಂಶಗಳು ನಮ್ಮ ರಾಷ್ಟ್ರಗಳ ನಡುವಿನ ಜನರ ನಡುವಿನ ಬಲವಾದ ಸಂಪರ್ಕದ ಭಾಗವಾಗಿದೆ. ಭಾರತ ಮತ್ತು ಸ್ಪೇನ್ 2026ನೇ ವರ್ಷವನ್ನು ಭಾರತ-ಸ್ಪೇನ್ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಕೃತಕ ಬುದ್ಧಿಮತ್ತೆ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿರುವುದು ನನಗೆ ಸಂತಸ ತಂದಿದೆ.
ಸ್ನೇಹಿತರೇ,
ಭಾರತ ಮತ್ತು ಸ್ಪೇನ್ ನಡುವಿನ ಸಹಭಾಗಿತ್ವವು ಬಹು ಆಯಾಮದ, ರೋಮಾಂಚಕ ಮತ್ತು ಸದಾ ವಿಕಸನಗೊಳ್ಳುತ್ತಿರುವ ಒಂದು ಪ್ರಿಸ್ಮ್ ಇದ್ದಂತೆ. ಇಂದಿನ ಕಾರ್ಯಕ್ರಮವು ಭಾರತ ಮತ್ತು ಸ್ಪೇನ್ ನಡುವಿನ ಹಲವು ಹೊಸ ಜಂಟಿ ಸಹಯೋಗ ಯೋಜನೆಗಳಿಗೆ ಸ್ಫೂರ್ತಿ ನೀಡುತ್ತದೆ ಎಂಬ ವಿಶ್ವಾಸ ನನಗಿದೆ. ನಾನು ಸ್ಪ್ಯಾನಿಷ್ ಉದ್ಯಮ ಮತ್ತು ಆವಿಷ್ಕಾರಕರನ್ನು ಭಾರತಕ್ಕೆ ಬರಲು ಮತ್ತು ನಮ್ಮ ಅಭಿವೃದ್ಧಿಯ ಪ್ರಯಾಣದ ಭಾಗವಾಗಲು ಆಹ್ವಾನಿಸುತ್ತೇನೆ. ಮತ್ತೊಮ್ಮೆ, ಈ ಯೋಜನೆಗಾಗಿ ಏರ್‌ಬಸ್ ಮತ್ತು ಟಾಟಾ ತಂಡಗಳಿಗೆ ನನ್ನ ಶುಭ ಹಾರೈಕೆಗಳು.
ಧನ್ಯವಾದಗಳು.
*****
Speaking at the inauguration of the C-295 Aircraft facility in Vadodara. It reinforces India's position as a trusted partner in global aerospace manufacturing.https://t.co/VvuC5izfPM
— Narendra Modi (@narendramodi) October 28, 2024
Make in India, Make for the World. pic.twitter.com/xTFkpX1wFh
— PMO India (@PMOIndia) October 28, 2024
The C-295 aircraft factory reflects the new work culture of a New India. pic.twitter.com/hJi0nCMyaF
— PMO India (@PMOIndia) October 28, 2024
India's defence manufacturing ecosystem is reaching new heights. pic.twitter.com/CIRLEQiiP0
— PMO India (@PMOIndia) October 28, 2024
Glimpses from the inauguration of the aircraft complex in Vadodara inaugurated by PM @narendramodi and the President of the Government of Spain, Mr. Pedro Sánchez. #C295MadeInIndia@sanchezcastejon pic.twitter.com/XptYktXUff
— PMO India (@PMOIndia) October 28, 2024
The aircraft complex in Vadodara is indicative of the prevailing work culture in our Government, where proper planning and timely execution ensure transformative outcomes. #C295MadeInIndia pic.twitter.com/f287Ww607X
— Narendra Modi (@narendramodi) October 28, 2024
India is attaching topmost priority to defence manufacturing and this is being noted globally. #C295MadeInIndia pic.twitter.com/2H8Z12RWzV
— Narendra Modi (@narendramodi) October 28, 2024
The aircraft complex in Vadodara will ensure job opportunities for several of India’s talented youth. #C295MadeInIndia pic.twitter.com/bfdo6YoZJG
— Narendra Modi (@narendramodi) October 28, 2024