Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಿಒಪಿ-28 ಅಧ್ಯಕ್ಷೀಯ ಅಧಿವೇಶನ ಕಲಾಪದಲ್ಲಿ “ಹವಾಮಾನ ಬದಲಾವಣೆಗೆ ಹಣಕಾಸು ಪರಿವರ್ತನೆ” ವಿಷಯ ಕುರಿತು ಪ್ರಧಾನ ಮಂತ್ರಿ ಭಾಷಣ

ಸಿಒಪಿ-28 ಅಧ್ಯಕ್ಷೀಯ ಅಧಿವೇಶನ ಕಲಾಪದಲ್ಲಿ “ಹವಾಮಾನ ಬದಲಾವಣೆಗೆ ಹಣಕಾಸು ಪರಿವರ್ತನೆ” ವಿಷಯ ಕುರಿತು ಪ್ರಧಾನ ಮಂತ್ರಿ ಭಾಷಣ


ಗೌರವಾನ್ವಿತ ಗಣ್ಯರೆ,

ಜಿ-20 ಅಧ್ಯಕ್ಷತೆ ಅಲಂಕರಿಸಿದ್ದ ಭಾರತವು ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯ ಪ್ರಮುಖ 2 ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.

ನಾವು ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ವನ್ನು ನಮ್ಮ ಅಧ್ಯಕ್ಷ ಸ್ಥಾನದಲ್ಲಿ ಆಧಾರಸ್ತಂಭವಾಗಿ ಮಾಡಿಕೊಂಡಿದ್ದೇವೆ.

ಜಂಟಿ ಪ್ರಯತ್ನಗಳ ಮೂಲಕ, ನಾವು ಅನೇಕ ವಿಷಯಗಳ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದೇವೆ.

ಸ್ನೇಹಿತರೆ,

ಹವಾಮಾನ ಬದಲಾವಣೆಯ ವಿಷಯದಲ್ಲಿ ಭಾರತ ಸೇರಿದಂತೆ ಜಾಗತಿಕ ದಕ್ಷಿಣ ಭಾಗದ ಎಲ್ಲಾ ದೇಶಗಳ ಪಾತ್ರವು ತುಂಬಾ ಕಡಿಮೆ ಎಂಬುದು ನಮಗೆಲ್ಲರಿಗೂ ತಿಳಿದಿದೆ.

ಆದರೆ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ನಮ್ಮೆಲ್ಲರ ಮೇಲೆ ಹೆಚ್ಚಿದೆ. ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ, ಈ ದೇಶಗಳು ಹವಾಮಾನ ಕ್ರಮಗಳಿಗೆ ಬದ್ಧವಾಗಿವೆ.

ಜಾಗತಿಕ ದಕ್ಷಿಣದ ಆಕಾಂಕ್ಷೆಗಳನ್ನು ಪೂರೈಸಲು ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನ ಅತ್ಯಗತ್ಯ. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಎದುರಿಸಲು ಅಭಿವೃದ್ಧಿ ಹೊಂದಿದ ದೇಶಗಳು ತಮಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ಜಾಗತಿಕ ದಕ್ಷಿಣದ ದೇಶಗಳು ನಿರೀಕ್ಷಿಸುತ್ತವೆ. ಇದು ಸಹಜ ಮತ್ತು ಸಮರ್ಥನೀಯಯಾಗಿದೆ.

ಸ್ನೇಹಿತರೆ,

2030ರ ವೇಳೆಗೆ ಹವಾಮಾನ ಬದಲಾವಣೆಯ ಕ್ರಿಯೆಗೆ ಹಲವು ಟ್ರಿಲಿಯನ್ ಡಾಲರ್‌ಗಳ ಹವಾಮಾನ ಹಣಕಾಸು ಅಗತ್ಯವಿದೆ ಎಂಬುದನ್ನು ಜಿ-20 ಶೃಂಗದಲ್ಲಿ ಒಪ್ಪಿಕೊಳ್ಳಲಾಗಿದೆ.

ಹವಾಮಾನ ಹಣಕಾಸು ಲಭ್ಯವಿರುವ, ಪ್ರವೇಶಿಸಬಹುದಾದ ಮತ್ತು ಎಲ್ಲರಿಗೂ ಕೈಗೆಟುಕುವಂತಿರಬೇಕು.

ಸಂಯುಕ್ತ ಅರಬ್ ಎಮಿರೇಟ್ಸ್(ಯುಎಇ)ನ ಹವಮಾನಾ ಬದಲಾವಣೆಯ ಹಣಕಾಸು ಮಾರ್ಗಸೂಚಿ ಉಪಕ್ರಮವು ಈ ದಿಕ್ಕಿನಲ್ಲಿ ಉತ್ತೇಜನ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.

ನಷ್ಟ ಮತ್ತು ಹಾನಿ ನಿಧಿಯನ್ನು ಕಾರ್ಯಗತಗೊಳಿಸಲು ನಿನ್ನೆ ತೆಗೆದುಕೊಂಡ ಐತಿಹಾಸಿಕ ನಿರ್ಧಾರವನ್ನು ಭಾರತ ಸ್ವಾಗತಿಸುತ್ತದೆ. ಇದು ಸಿಒಪಿ 28  ಶೃಂಗಸಭೆಯಲ್ಲಿ ಹೊಸ ಭರವಸೆ ಮೂಡಿಸಿದೆ. ಸಿಒಪಿ ಶೃಂಗಸಭೆಯು ಹವಾಮಾನ ಬದಲಾವಣೆಯ ಹಣಕಾಸಿಗೆ ಸಂಬಂಧಿಸಿದ ಇತರ ವಿಷಯಗಳ ಮೇಲೆ ಸಂಯೋಜಿತ ಅಥವಾ ಸಂಕೀರ್ಣ ಫಲಿತಾಂಶಗಳನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.

 

ಮೊದಲನೆಯದಾಗಿ, ಸಿಒಪಿ-28 ಶೃಂಗವು ಹವಾಮಾನ ಹಣಕಾಸು ಕುರಿತ ಹೊಸ ಸಾಮೂಹಿಕ ಪರಿಮಾಣಾತ್ಮಕ ಗುರಿಯ ಮೇಲೆ ನಿಜವಾದ ಪ್ರಗತಿಯನ್ನು ನೋಡುತ್ತದೆ. ಎರಡನೆಯದಾಗಿ, ಗ್ರೀನ್ ಕ್ಲೈಮೇಟ್ ಫಂಡ್ ಮತ್ತು ಅಡಾಪ್ಟೇಶನ್ ಫಂಡ್‌ನಲ್ಲಿ ಯಾವುದೇ ಕಡಿತ ಇರುವುದಿಲ್ಲ, ಈ ನಿಧಿಯನ್ನು ತಕ್ಷಣವೇ ಮರುಪೂರಣಗೊಳಿಸಲಾಗುತ್ತದೆ.

ಮೂರನೆಯದಾಗಿ, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳು ಅಭಿವೃದ್ಧಿ ಮತ್ತು ಹವಾಮಾನ ಕ್ರಿಯೆಗೆ ಕೈಗೆಟುಕುವ ಹಣಕಾಸು ಒದಗಿಸುತ್ತವೆ. ನಾಲ್ಕನೆಯದಾಗಿ, ಅಭಿವೃದ್ಧಿ ಹೊಂದಿದ ದೇಶಗಳು 2050ರ ಮೊದಲು ತಮ್ಮ ಇಂಗಾಲ ಹೊರಸೂಸುವಿಕೆಯ ಹೆಜ್ಜೆಗುರುತನ್ನು ಖಂಡಿತವಾಗಿಯೂ ತೆಗೆದುಹಾಕುತ್ತವೆ.

ಹವಾಮಾನ ಹೂಡಿಕೆ ನಿಧಿ ಸ್ಥಾಪಿಸುವ ಯುಎಇಯ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ.

 

ತುಂಬು ಧನ್ಯವಾದಗಳು.

 

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

***