Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಿಆರ್ ಪಿಎಫ್ ಸಿಬ್ಬಂದಿ ಸ್ಥಾಪನಾ ದಿನದ ಅಂಗವಾಗಿ ಸಿಬ್ಬಂದಿಗೆ ಶುಭ ಕೋರಿದ ಪ್ರಧಾನಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಿಆರ್ ಪಿಎಫ್ ಸ್ಥಾಪನಾ ದಿನದ ಅಂಗವಾಗಿ ಎಲ್ಲ ಸಿಆರ್ ಪಿಎಫ್ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಶುಭ ಕೋರಿದ್ದಾರೆ.

ಪ್ರಧಾನಿ ಅವರು ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಸಿಆರ್ ಪಿಎಫ್ ಸ್ಥಾಪನಾ ದಿನದ ಅಂಗವಾಗಿ ಎಲ್ಲಾ ಸಿಆರ್ ಪಿಎಫ್ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಶುಭಾಶಯಗಳು. ಈ ಪಡೆಯು ತನ್ನ ಅಚಲ ಧೈರ್ಯ ಮತ್ತು ವಿಶಿಷ್ಟ ಸೇವೆಗಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಭದ್ರತಾ ಸವಾಲು ಮತ್ತು ಮಾನವೀಯ ಸವಾಲುಗಳನ್ನು ಎದುರಿಸುವಲ್ಲಿ ಸಿಆರ್ ಪಿಎಫ್ ಪಾತ್ರವು ಶ್ಲಾಘನೀಯವಾಗಿದೆ’’

 

********