ಸಿಂಗಾಪೂರದ ಉಪ ಪ್ರಧಾನಮಂತ್ರಿ ಶ್ರೀ ಥರ್ಮನ್ ಷಣ್ಮುಖರತ್ನಮ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಸಿಂಗಾಪೂರದ ಮಾಜಿ ಅಧ್ಯಕ್ಷ ಎಸ್.ಆರ್. ನಾಥನ್ ಅವರ ಅಗಲಿಕೆಗೆ ಪ್ರಧಾನಮಂತ್ರಿಯವರು ಸಿಂಗಾಪೂರದ ಜನತೆಗೆ ತಮ್ಮ ಹೃದಯಾಂತರಾಳದ ಸಂತಾಪವನ್ನು ಸೂಚಿಸಿದರು. ಸಿಂಗಾಪೂರ ತನ್ನ ಒಬ್ಬ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ ಎಂದು ಪ್ರಧಾನಿ ಹೇಳಿದರು.
ಶ್ರೀ ಷಣ್ಮುಖರತ್ನಂ ಅವರು ಪ್ರಧಾನಮಂತ್ರಿಯವರಿಗೆ ಹಲವು ದ್ವಿಪಕ್ಷೀಯ ಸಹಕಾರ ಉಪಕ್ರಮಗಳ ಅದರಲ್ಲೂ ಕೌಶಲ ವರ್ಧನೆ ಮತ್ತು ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ವಾಸ್ತವ ಸ್ಥಿತಿಯ ಬಗ್ಗೆ ವಿವರಿಸಿದರು.
ಪ್ರಧಾನಮಂತ್ರಿಯವರು 2015ರ ನವೆಂಬರ್ ನಲ್ಲಿ ತಾವು ಸಿಂಗಾಪೂರಕ್ಕೆ ನೀಡಿದ್ದ ಯಶಸ್ವೀ ಭೇಟಿಯನ್ನು ಸ್ಮರಿಸಿದರು. ಆ ಸಂದರ್ಭದಲ್ಲಿ ದ್ವಿಪಕ್ಷೀಯ ಬಾಂಧವ್ಯವು “ಕಾರ್ಯ ತಂತ್ರಾತ್ಮಕ ಪಾಲುದಾರಿಕೆ’’ಯಾಗಿ ಮೇಲ್ದರ್ಜೆಗೇರಿತ್ತು ಎಂದರು. ಮತ್ತು ತಾವು ಹತ್ತಿರದ ಭವಿಷ್ಯದಲ್ಲಿ ಪ್ರಧಾನಮಂತ್ರಿ ಲೀ ಹಸೀನ್ ಲೂಂಗ್ ಅವರು ಭಾರತಕ್ಕೆ ಭೇಟಿ ನೀಡುವುದನ್ನು ತಾವು ಕಾತರದಿಂದ ಎದಿರು ನೋಡುತ್ತಿರುವುದಾಗಿ ತಿಳಿಸಿದರು.
Mr. Tharman Shanmugaratnam, Deputy Prime Minister of Singapore calls on PM @narendramodi.
— PMO India (@PMOIndia) August 26, 2016
via NMApp pic.twitter.com/8sZIYlRpWH