Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಿಂಗಾಪುರದ ಹಿರಿಯ ಸಚಿವ ಗೌರವಾನ್ವಿತ ಗೋ ಚೋಕ್ ಟಾಂಗ್ ಅವರೊಂದಿಗೆ ಪ್ರಧಾನಮಂತ್ರಿ ಸಭೆ

ಸಿಂಗಾಪುರದ ಹಿರಿಯ ಸಚಿವ ಗೌರವಾನ್ವಿತ ಗೋ ಚೋಕ್ ಟಾಂಗ್ ಅವರೊಂದಿಗೆ ಪ್ರಧಾನಮಂತ್ರಿ ಸಭೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಗಾಪುರದಲ್ಲಿಂದು ಹಿರಿಯ ಸಚಿವ ಗೌರವಾನ್ವಿತ ಗೋ ಚೋಕ್ ಟಾಂಗ್ ಅವರನ್ನು ಭೇಟಿ ಮಾಡಿದ್ದರು.

ಪ್ರಧಾನಮಂತ್ರಿ ಅವರು ಹಿರಿಯ ಸಚಿವರಾದ ಗೌರವಾನ್ವಿತ ಗೋಹ್ ಅವರು ಸಿಂಗಾಪುರದಲ್ಲಿ “ಇಂಡಿಯಾ ಫೀವರ್” ಎಂದು ಹೇಳಿದ್ದಾರೆ ಮತ್ತು ಅವರು ಸಿಂಗಾಪುರದ ಪ್ರಧಾನಿಯಾಗಿದ್ದಾಗ ಭಾರತ-ಸಿಂಗಾಪುರ ಸಂಬಂಧಗಳ ಬಗ್ಗೆ ವಿಶೇಷ ಗಮನ ಹರಿಸಿದರು ಎಂದು ಉಲ್ಲೇಖಿಸಿದರು. ಅವರ ಪ್ರಯತ್ನಗಳು ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವು. ಅವರು ಪ್ರಧಾನಮಂತ್ರಿಯಾಗಿದ್ದಾಗ ಮತ್ತು ನಂತರ ಭಾರತಕ್ಕೆ ಅವರ ಅಮೂಲ್ಯವಾದ ಬೆಂಬಲವನ್ನು ನೀಡಿದ್ದಾರೆ ಎಂದರು. ಭಾರತ-ಸಿಂಗಾಪುರ ಸಂಬಂಧಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮಾರ್ಗಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.

 

*****