ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಗಾಪುರದಲ್ಲಿಂದು ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿ ಮಾಡಿದ್ದರು.
ಪ್ರಧಾನಮಂತ್ರಿ ಅವರು ಭಾರತ-ಸಿಂಗಾಪುರ ಪಾಲುದಾರಿಕೆಗೆ ಅಧ್ಯಕ್ಷ ಥರ್ಮನ್ ಅವರ ಆಸಕ್ತಿಕರ ಬೆಂಬಲವನ್ನು ಶ್ಲಾಘಿಸಿದರು. ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು. ಎರಡು ದೇಶಗಳ ನಡುವೆ ನಂಬಿಕೆ, ಪರಸ್ಪರ ಗೌರವ ಮತ್ತು ಪೂರಕ ಅಂಶಗಳನ್ನು ಆಧರಿಸಿದ ದೀರ್ಘಕಾಲದ ಸ್ನೇಹ ಮತ್ತು ಸಹಕಾರವನ್ನು ಅವರು ಅವರು ಪ್ರಮುಖವಾಗಿ ಪಸ್ತಾಪಿಸಿದರು. ಆ ನಿಟ್ಟಿನಲ್ಲಿ, ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಸಂಬಂಧಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜಂಟಿ ಸಹಯೋಗಕ್ಕಾಗಿ ಉತ್ಕೃಷ್ಟ ಮಾರ್ಗವನ್ನು ರೂಪಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಭಾರತ ಮತ್ತು ಸಿಂಗಾಪುರವು ಸುಧಾರಿತ ಉತ್ಪಾದನೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಂತಹ ಹೊಸ ಕ್ಷೇತ್ರಗಳಲ್ಲಿ ತಮ್ಮ ಸಹಕಾರವನ್ನು ಹೇಗೆ ವಿಸ್ತರಿಸಬಹುದು ಎಂಬುದರ ಕುರಿತು ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಭಾರತಕ್ಕೆ ಮುಂದಿನ ವರ್ಷ ಅಧ್ಯಕ್ಷ ಥರ್ಮನ್ ಅವರನ್ನು ಸ್ವಾಗತಿಸಲು ತಾವು ಎದುರು ನೋಡುತ್ತಿರುವುದಾಗಿ ಪ್ರಧಾನಮಂತ್ರಿ ತಿಳಿಸಿದರು.
*****
Had a very good meeting with Mr. Tharman Shanmugaratnam, the President of Singapore. Our talks focused on the full range of bilateral ties between our nations. We discussed the key focus sectors like skill development, sustainability, technology, innovation and connectivity.… pic.twitter.com/bdivx16hrv
— Narendra Modi (@narendramodi) September 5, 2024