23 ಸೆಪ್ಟೆಂಬರ್ 2019 ರಂದು ವಿಶ್ವಸಂಸ್ಥೆಯ ಮೊಟ್ಟಮೊದಲ ಸಾಮಾನ್ಯ ಅಧಿವೇಶನದ
ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಾರ್ವತ್ರಿಕ ಆರೋಗ್ಯ ರಕ್ಷಣೆ ಕುರಿತು ಮಾತನಾಡಿದರು.
ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಯೋಜನೆಯನ್ನು ಸಾಧಿಸಲು ಭಾರತ ಕೈಗೊಂಡ ದಿಟ್ಟ ಕ್ರಮಗಳನ್ನು ಪ್ರಧಾನ ಮಂತ್ರಿಯವರು ತಮ್ಮ ಹೇಳಿಕೆಯಲ್ಲಿ ಒತ್ತಿ ಹೇಳಿದ್ದಾರೆ. ಆರೋಗ್ಯ ಎಂದರೆ ಕೇವಲ ರೋಗಗಳಿಂದ ಮುಕ್ತವಾಗುವುದು ಎಂದಲ್ಲ, ಆರೋಗ್ಯಕರ ಜೀವನವು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು, ಇದನ್ನು ಖಚಿತ ಪಡಿಸಿಕೊಳ್ಳುವುದು ಸರ್ಕಾರಗಳ ಜವಾಬ್ದಾರಿ ಎಂದು ಹೇಳಿದರು.
ಭಾರತವು ಈ ವಿಷಯವನ್ನು ಸಮಗ್ರ ಮಾರ್ಗಗಳಿಂದ ನಿಭಾಯಿಸುತ್ತಿದೆ ಮತ್ತು ಆರೋಗ್ಯ ರಕ್ಷಣೆಯ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು :
– ಪ್ರಿವೆಂಟಿವ್ ಹೆಲ್ತ್ಕೇರ್ (ಮುಂಜಾಗ್ರತೆಯ ಆರೋಗ್ಯ ರಕ್ಷಣೆ)
– ಕೈಗೆಟುಕುವ ಆರೋಗ್ಯ ರಕ್ಷಣೆ
– ಪೂರೈಕೆ ಭಾಗದಲ್ಲಿ ಸುಧಾರಣೆಗಳು
– ವಿಶೇಷ ಯೋಜನೆಯಲ್ಲಿ (ಮಿಶನ್ ಮೋಡ್) ಅನುಷ್ಠಾನ
ಯೋಗ, ಆಯುರ್ವೇದ ಮತ್ತು ಸಧೃಡತೆಗೆ ವಿಶೇಷ ಒತ್ತು ನೀಡುವುದು ಮತ್ತು 125,000 ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿರುವುದರಿಂದ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಲು ಉತ್ತೇಜನ ನೀಡಲು ಇವು ಸಹಾಯ ಮಾಡಿವೆ ಹಾಗೂ ಮಧುಮೇಹ, ರಕ್ತದೊತ್ತಡ, ಖಿನ್ನತೆ ಮುಂತಾದ ಜೀವನ ಶೈಲಿಯಿಂದ ಬರುವ ಕಾಯಿಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಇ-ಸಿಗರೆಟ್ ನಿಷೇಧ, ಕ್ಲೀನ್ ಇಂಡಿಯಾ ಅಭಿಯಾನದ ಮೂಲಕ ಮೂಡಿಸಿದ ಹೆಚ್ಚಿನ ಜಾಗೃತಿ ಮತ್ತು ರೋಗನಿರೋಧಕ ಅಭಿಯಾನಗಳು ಆರೋಗ್ಯ ಉತ್ತೇಜನಕ್ಕೆ ಸಹಕಾರಿಯಾಗಿವೆ.
“ಕೈಗೆಟುಕುವ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಭಾರತವು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ- ಆಯುಷ್ಮಾನ್ ಭಾರತ್ ಅನ್ನು ರೂಪಿಸಿದೆ. ಈ ಯೋಜನೆಯಡಿಯಲ್ಲಿ, 500 ಮಿಲಿಯನ್ ಬಡವರಿಗೆ ವಾರ್ಷಿಕವಾಗಿ 500,000 ರೂಪಾಯಿಗಳವರೆಗೆ (ಡಾಲರ್ 7000 ಕ್ಕಿಂತ ಹೆಚ್ಚು) ಉಚಿತ ಚಿಕಿತ್ಸೆಯ ಸೌಲಭ್ಯವನ್ನು ನೀಡಲಾಗಿದೆ. 5000 ಕ್ಕೂ ಹೆಚ್ಚು ವಿಶೇಷ ಔಷಧಾಲಯಗಳಿವೆ, ಅವುಗಳಲ್ಲಿ 800 ಕ್ಕೂ ಹೆಚ್ಚು ಬಗೆಯ ಪ್ರಮುಖ ಔಷಧಿಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ”, ಎಂದು ಪ್ರಧಾನ ಮಂತ್ರಿಗಳು ಹೇಳಿದರು.
ಉನ್ನತ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಮೂಲಸೌಕರ್ಯದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಭಾರತ ಕೈಗೊಂಡ ಹಲವಾರು ಐತಿಹಾಸಿಕ ಕ್ರಮಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಮಿಷನ್ ಮೋಡ್ ಮಧ್ಯಸ್ಥಿಕೆಗಳ ಕುರಿತು, ತಾಯಿ ಮತ್ತು ಮಗುವಿನ ಪೌಷ್ಠಿಕಾಂಶದ ಸ್ಥಿತಿಯನ್ನು ಸುಧಾರಿಸುವಲ್ಲಿ ರಾಷ್ಟ್ರೀಯ ನ್ಯೂಟ್ರಿಷನ್ ಮಿಷನ್ನ ಪಾತ್ರದ ಬಗ್ಗೆ ಪ್ರಧಾನ ಮಂತ್ರಿಯವರು ಮಾತನಾಡಿದರು. 2030 ರ ಜಾಗತಿಕ ಗುರಿಗಿಂತ ಐದು ವರ್ಷ ಮೊದಲೇ ಅಂದರೆ 2025 ರ ವೇಳೆಗೆ ಕ್ಷಯರೋಗವನ್ನು ತೊಡೆದುಹಾಕಲು ಇರುವ ಭಾರತದ ಬದ್ಧತೆಯನ್ನು ಅವರು ಎತ್ತಿ ತೋರಿಸಿದರು, ವಾಯುಮಾಲಿನ್ಯದಿಂದ ಮತ್ತು ಪ್ರಾಣಿಗಳ ಮೂಲಕ ಹರಡುವ ರೋಗಗಳ ವಿರುದ್ಧದ ಅಭಿಯಾನದ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.
ಭಾರತದ ಕಾರ್ಯಗಳು ಕೇವಲ ತನ್ನ ಗಡಿಗಳಿಗಷ್ಠೇ ಸೀಮಿತವಾಗಿಲ್ಲ. ಹಲವಾರು ಇತರ ದೇಶಗಳಿಗೆ, ವಿಶೇಷವಾಗಿ ಆಫ್ರಿಕನ್ ದೇಶಗಳಿಗೆ ಟೆಲಿ-ಮೆಡಿಸಿನ್ ಸೇರಿದಂತೆ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸಲು ಭಾರತವು ಸಹಾಯ ಮಾಡಿದೆ.
“ಯುನಿವರ್ಸಲ್ ಹೆಲ್ತ್ ಕವರೇಜ್: ಆರೋಗ್ಯಕರ ಜಗತ್ತನ್ನು ನಿರ್ಮಿಸಲು ಒಂದಾಗಿ ನಡೆಯುವುದು” ಎಂಬ ವಿಷಯದ ಅಡಿಯಲ್ಲಿ ಈ ಸಭೆ ನಡೆಯಿತು, ಇದು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ- ಯುನಿವರ್ಸಲ್ ಹೆಲ್ತ್ ಕವರೇಜ್ (ಯುಹೆಚ್ ಸಿ) ಕಡೆಗೆ ಪ್ರಗತಿಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ. 2030 ರ ವೇಳೆಗೆ, ಇದು ಎಲ್ಲಾ ದೇಶದ ಮುಖ್ಯಸ್ಥರಿಂದ ರಾಜಕೀಯ ಬದ್ಧತೆಯನ್ನು ಪಡೆಯಲು ಜಾಗತಿಕ ಸಮುದಾಯವನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ .
ಈ ಸಭೆಯಲ್ಲಿ ವಿಶ್ವಸಂಸ್ಥೆಯ ಸುಮಾರು 160 ಸದಸ್ಯ ರಾಷ್ಟ್ರಗಳು ಮಾತನಾಡಲಿವೆ.
2015 ರಲ್ಲಿ, ದೇಶಗಳ ಮತ್ತು ಸರ್ಕಾರಗಳ ಮುಖ್ಯಸ್ಥರು 2030 ರ ವೇಳೆಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಯನ್ನು ಸಾಧಿಸಲು ಬಾಧ್ಯತೆ ವಹಿಸಿಕೊಂಡಿದ್ದರು, ಇದರಲ್ಲಿ ಆರ್ಥಿಕ ಅಪಾಯದಿಂದ ರಕ್ಷಣೆ, ಗುಣಮಟ್ಟದ ಅಗತ್ಯ ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಸರ್ವರಿಗೂ ಸುರಕ್ಷಿತವಾದ, ಪರಿಣಾಮಕಾರಿ, ಗುಣಮಟ್ಟದ ಮತ್ತು ಕೈಗೆಟುಕುವ ಬೆಲೆಯ ಅಗತ್ಯವಾದ ಔಷಧಿಗಳು ಮತ್ತು ಲಸಿಕೆಗಳು.
At the @UN, PM @narendramodi also addressed a session on Universal Health Coverage. pic.twitter.com/pn6iI4erjK
— PMO India (@PMOIndia) September 23, 2019
My remarks on health sector and ensuring good quality healthcare to all. https://t.co/KVF24n9rum
— Narendra Modi (@narendramodi) September 23, 2019