Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾರ್ವಜನಿಕ ವಲಯದ ಶಿಕ್ಷಣ ತಜ್ಞ, ಚಿಂತಕ ಪ್ರೊ. ನಿಕೋಲಸ್‌ ತಾಲೆಬ್‌ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ  

ಸಾರ್ವಜನಿಕ ವಲಯದ ಶಿಕ್ಷಣ ತಜ್ಞ, ಚಿಂತಕ ಪ್ರೊ. ನಿಕೋಲಸ್‌ ತಾಲೆಬ್‌ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ  


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕದ ಖ್ಯಾತ ಗಣಿತ ಸಂಖ್ಯಾಶಾಸ್ತ್ರಜ್ಞ, ಶಿಕ್ಷಣ ತಜ್ಞ, ಸಾರ್ವಜನಿಕ ವಲಯದ ಚಿಂತಕ ಮತ್ತು ಲೇಖಕ ಪ್ರೊ. ನಿಕೋಲಸ್‌ ತಾಲೆಬ್‌ ಅವರನ್ನು ಅಮೆರಿಕದ ನ್ಯೂಯಾರ್ಕ್‌ ನಲ್ಲಿಂದು ಭೇಟಿ ಮಾಡಿದರು.

ಸಾರ್ವಜನಿಕ ಚಿಂತಕರಾಗಿ ಪ್ರೊ. ತಾಲೆಬ್ ಅವರ ಅಪಾಯ ಕುರಿತ ಸಂಕಿರ್ಣದಾಯಕ ಆಲೋಚನೆಗಳು ಮತ್ತು ಸೂಕ್ಷ್ಮತೆ ವಲಯದಲ್ಲಿನ ಜನಪ್ರಿಯ ಸಂಭಾಷಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.  

ಪ್ರೊ. ತಾಲೆಬ್‌ ಅವರೊಂದಿಗಿನ ಸಂವಾದದಲ್ಲಿ, ಭಾರತದ ಯುವ ಉದ್ಯಮಿಗಳಲ್ಲಿ ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಭಾರತದಲ್ಲಿ ಬೆಳೆಯುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆ ಕುರಿತು ಪ್ರಧಾನಮಂತ್ರಿಯವರು ಬೆಳಕು ಚೆಲ್ಲಿದರು.

****