ಸಾರ್ವಜನಿಕ ಕಟ್ಟಡಗಳು (ಅನಧಿಕೃತ ವಾಸದ ತೆರವುಗೊಳಿಸುವ ) ಅಧಿನಿಯಮ (ಪಿ.ಪಿ.ಇ. ಅಧಿನಿಯಮ) 1971ರ 2 ಮತ್ತು 3ನೇ ಪರಿಛೇದದಲ್ಲಿ ಮಾಡಿರುವ ತಿದ್ದುಪಡಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು. ಅಧಿನಿಯಮದ 3ನೇ ಪರಛೇದದ 3ಎ-ಯ ಕೆಳಗೆ 3ಬಿ-ಯಲ್ಲಿ ವಸತಿ ವ್ಯವಸ್ಥೆಯನ್ನು ಸವಿವರಣೆ ಜೊತೆ ಸೇರಿಲಾಗಿದೆ.
ಸರಕಾರಿ ಅಧಿಕಾರಿಗಳಿಗೆ ನಿಯಮಿತ ಅವಧಿಗೆ ಅಥವಾ ಯಾವುದೇ ಸಮಯ ತನಕ ಅವರ ಕೆಲಸ ಕಾರ್ಯಗಳ ನಿಮಿತ್ತ ನೀಡಲಾಗುವ ವಸತಿ ವ್ಯವಸ್ಥೆಗಳನ್ನು ಅವಧಿ ಪೂರ್ತಿಯಾದಾಗ ಹೊಸಬರಿಗೆ ನೀಡಲು ಹಾಗೂ ಅವುಗಳಲ್ಲಿ ಅನಧಿಕೃತ ವಾಸದ “ತ್ವರಿತ ತೆರವು ಕಾರ್ಯ” ಅನಿವಾರ್ಯ.
ಈಗ ಸರಕಾರಿ ಎಸ್ಟೇಟ್ – ವಸತಿ ಸಮುಚ್ಛಯಗಳ ಅಧಿಕಾರಿಗಳು ಪರಿಛೇದ 4,5, ಮತ್ತು 7 ಅಡಿಯಲ್ಲಿ ತೆರವುಗೊಳಿಸುವ ಕಾರ್ಯ ನಡೆಸಬೇಕಾಗಿಲ್ಲ, ಅತಿ ವಿಸ್ತಾರದ ನಿಯಮಾವಳಿಗಳ ಪಾಲನೆ, ಬಹಳ ದೀರ್ಘಾವಧಿಯ ತೆರವು ಕಾರ್ಯಯೋಜನೆ ಬೇಕಾಗಿಲ್ಲ. ತಿದ್ದುಪಡಿ ಮೂಲಕ ಸೇರಿಸಿದ ಹೊಸ ಪರಿಛೇದದಡಿಯಲ್ಲಿ ಸ್ವತಃ ಎಸ್ಟೇಟ್ ,ಅಧಿಕಾರಿ ಆದೇಶ ನೀಡಿ ಖಾಲಿಮಾಡಿಸಬಹುದು.
ತಿದ್ದುಪಡಿಯು ಸರಕಾರದ ವಸತಿ ಕಟ್ಟಡಗಳಲ್ಲಿ ಅನಧಿಕೃತ ವಾಸದ ತೆರವು ಕಾರ್ಯ ಸರಳ ಹಾಗೂ ಸುಲಭವಾಗಿಸುತ್ತದೆ.
ಈ ತಿದ್ದುಪಡಿಯನುಸಾರ ಭಾರತ ಸರಕಾರವೀಗ ಅನಧಿಕೃತ ವಾಸದ ತೆರವುಕಾರ್ಯ ಸುಲಭವಾಗಿ ಹಾಗೂ ಅತಿವೇಗದಲ್ಲಿ ಅನುಷ್ಠಾನಗೊಳಿಸಲಿದ್ದು, ಇದರಿಂದ ಮುಂಗಡ ಕಾದಿರಿಸಿದ ಹೊಸಬರಿಗೆ ವಸತಿ ವ್ಯವಸ್ಥೆ ನೀಡಲು ಅನುಕೂಲವಾಗಲಿದೆ.
ತಿದ್ದುಪಡಿಯು ಅನಧಿಕೃತ ವಾಸದ ತೆರವು ಕಾರ್ಯ ಸರಳ ಹಾಗೂ ಸುಲಭವಾಗಿಸಿ ಕಾದಿರುವ ಹೊಸಬರಿಗೆ ಇನ್ನೂ ಅಧಿಕ ಅವಕಾಶ ಮಾಡಿಕೊಡುತ್ತದೆ. .
ಜನರಲ್ ಪೂಲ್ ರೆಸಿಡೆಂನ್ಷಿಯಲ್ ಎಕೊಮೊಡೇಶನ್ ( ಜಿ.ಪಿ.ಆರ್.ಎ) ಗಳಿಗೆ ಅರ್ಹರಾಗಿರುವ ಮತ್ತು ಅವರ ಅವಧಿ ಪೂರ್ತಿಯಾಗಿರುವ ಕೇಂದ್ರ ಸರಕಾರದ ಕಚೇರಿಗಳ ಉದ್ಯೋಗಿಗಳು ಕೂಡಾ ಇದರ ಪ್ರಯೋಜನ ಪಡೆಯಲಿದ್ದಾರೆ.
ಹಿನ್ನಲೆ:
ಸರಕಾರಿ ವಸತಿ ಸಮುಚ್ಛಯಗಳಲ್ಲಿ ಅನಧಿಕೃತವಾಗಿ ವಾಸವಾಗಿರುವವರನ್ನು ಪಿ.ಪಿ.ಇ. ಅಧಿನಿಯಮ 1971ರ ಅಡಿಯಲ್ಲಿ ಕೇಂದ್ರ ಸರಕಾರ ತರವುಗೊಳಿಸಲಿದೆ. ಆದರೆ, ತೆರವು ಕಾರ್ಯ ಬಹಳ ದೀರ್ಘಕಾಲಾವಧಿ ಹಿಡಿಯುತ್ತಿದ್ದು, ಇದರಿಂದಾಗಿ ಹೊಸಬರಿಗೆ ಸರಕಾರ ವಸತಿ ವ್ಯವಸ್ಥೆಗಳ ಅವಕಾಶ ಸಿಗುತ್ತಿರಲಿಲ್ಲ.
*****
AKT/VB