Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆಗಳ ಕ್ಷೇತ್ರದಲ್ಲಿ ಭಾರತ ಮತ್ತು ಸಂಯುಕ್ತ ಸಂಸ್ಥಾನಗಳ (ಯುನೈಟೆಡ್ ಕಿಂಗ್ಡಂ) ನಡುವೆ ಒಡಂಬಡಿಕೆ (ತಿಳುವಳಿಕಾ ಒಪ್ಪಂದ)


ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆಗಳಿಗೆ ಸಂಬಂಧಿಸಿ ಸಹಕಾರಕ್ಕಾಗಿ ಸಂಯುಕ್ತ ಸಂಸ್ಥಾನಗಳು (ಯುನೈಟೆಡ್ ಕಿಂಗ್ಡಂ) ಮತ್ತು ಭಾರತದ ನಡುವೆ 2015ರ ನವೆಂಬರ್ ನಲ್ಲಿ ಸಹಿ ಹಾಕಲ್ಪಟ್ಟ ತಿಳುವಳಿಕಾ ಒಪ್ಪಂದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು ಪೂರ್ವಾನ್ವಯಗೊಂಡಂತೆ ಅನುಮೋದನೆ ನೀಡಿದೆ.

ಈ ತಿಳುವಳಿಕಾ ಒಪ್ಪಂದದ ಪ್ರಕಾರ ಸಾರ್ವಜನಿಕ ಆಡಳಿತದಲ್ಲಿ ಉತ್ತಮ ನಡವಳಿಕೆಗಳನ್ನು ಪರಸ್ಪರ ಹಂಚಿಕೊಳ್ಳುವಿಕೆ, ಬಳಕೆದಾರ ಸ್ನೇಹೀ ಸೇವಾ ವಿನ್ಯಾಸ, ಸೇವಾ ಪೂರೈಕೆಯಲ್ಲಿ ಅಧಿಕಾರ ಶಾಹಿಯನ್ನು ಕಡಿತಗೊಳಿಸುವುದು, ಸರಕಾರಿ ಪ್ರಕ್ರಿಯೆಯಲ್ಲಿ ಪುನರ್ವಿನ್ಯಾಸ,/ ಪುನಾರಚನೆ, ಸಿಬಂದಿಗಳ ಸಾಮರ್ಥ್ಯ ರೂಪಿಸುವಿಕೆ ಮತ್ತು ವೃದ್ಧಿ, ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ, ಸ್ಥಳೀಯಾಡಳಿತ ಸುಧಾರಣೆ, ಸಾಮಾಜಿಕ ಸುರಕ್ಷೆ ಬಲಪಡಿಸುವ ನಿಟ್ಟಿನಲ್ಲಿ ಸುಧಾರಣೆಗಳು, ಸರಕಾರದಲ್ಲಿ ನೈತಿಕತೆಯನ್ನು ಬೆಳೆಸಲು ವ್ಯೂಹಾತ್ಮಕ ಸಹಭಾಗಿತ್ವ, ಸಿಬಂದಿ ನಿರ್ವಹಣೆಗೆ ಸಂಬಂಧಿಸಿ ಸರಕಾರ ಮತ್ತು ಕೈಗಾರಿಕೋದ್ಯಮದ ನಡುವೆ ಸಹಯೋಗ, ಸಾರ್ವಜನಿಕ ಪಾಲುದಾರಿಕೆ, ಬಿಕ್ಕಟ್ಟುಗಳು ಮತ್ತು ವಿಪತ್ತುಗಳ ನಿರ್ವಹಣೆ, ಸರಕಾರದ ಡಿಜಿಟಲ್ ಪರಿವರ್ತನೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಏರ್ಪಡಲಿದೆ.

ಸಾರ್ವಜನಿಕ ಆಡಳಿತ ಮತ್ತು ಆಳ್ವಿಕೆಯ ಜಂಟಿ ಕಾರ್ಯ ತಂಡ ಈ ತಿಳುವಳಿಕಾ ಒಪ್ಪಂದದ ಅನುಷ್ಟಾನದ ಜವಾಬ್ದಾರಿ ಹೊರಲಿದೆ. ಯುನೈಟೆಡ್ ಕಿಂಗ್ಡಂನಲ್ಲಿ ಗ್ರಾಹಕ ಆಧಾರಿತ/ಕೇಂದ್ರಿತ ಸಾರ್ವಜನಿಕ ಸೇವೆಗಳ ವಿತರಣಾ ವ್ಯವಸ್ಥೆಯನ್ನು ಅರಿತುಕೊಳ್ಳಲು ಈ ಒಡಂಬದಿಕೆ ಸಹಾಯ ಮಾಡಲಿದೆ. ಸಾರ್ವಜನಿಕ ಸೇವಾ ಕ್ಷೇತ್ರದ ಪರಿಸರ ತ್ವರಿತಗತಿಯಿಂದ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಬದಲಾವಣೆ ತರಲು ಮತ್ತು ಅಲ್ಲಿಯ ಮಾದರಿಯನ್ನು ಇಲ್ಲಿ ಯಥಾವತ್ತಾಗಿ ಅಳವಡಿಸುವುದು, ಅನುಸರಿಸುವುದು ಹಾಗು ಭಾರತೀಯ ಸಾರ್ವಜನಿಕ ಸೇವಾ ವಿತರಣಾ ವ್ಯವಸ್ಥೆಯಲ್ಲಿಯ ಉತ್ತಮ ಅಂಶಗಳನ್ನು, ಪ್ರಕ್ರಿಯೆಗಳನ್ನು ಶೋಧಿಸಿ , ಆ ಮೂಲಕ ಭಾರತದಲ್ಲಿ ಸಾರ್ವಜನಿಕ ಸೇವಾ ವಿತರಣಾ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಈ ತಿಳುವಳಿಕಾ ಒಪ್ಪಂದ ನೆರವಾಗಲಿದೆ. ಈ ತಿಳುವಳಿಕಾ ಒಪ್ಪಂದದ ಅನ್ವಯ ಜಂಟಿ ಕಾರ್ಯ ತಂಡದ ಮೊದಲ ಸಭೆ ಈ ತಿಂಗಳಾಂತ್ಯದಲ್ಲಿ ಲಂಡನ್ನಿನಲ್ಲಿ ನಡೆಯಲಿದೆ.

ಹಿನ್ನೆಲೆ:

ನಾಗರಿಕ ಕೇಂದ್ರಿತ ಆನ್ ಲೈನ್ ಸೇವೆಗಳು ದಕ್ಷ ಸಾರ್ವಜನಿಕ ಆಡಳಿತ ವ್ಯವಸ್ಥೆಯ ಅಡಿಪಾಯ. ಇದು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರುತ್ತದೆ ಮತ್ತು ಸಮಾನ ಅಭಿವೃದ್ಧಿಗೆ ಪೂರಕವಾಗಿರುತ್ತದೆ..ಭಾರತ ಸರಕಾರವು ದೇಶಾದ್ಯಂತ ಸರಕಾರಿ ಸೇವೆಗಳನ್ನು ಆನ್ ಲೈನ್ ಮೂಲಕ ವಿತರಿಸುವ ನಿಟ್ಟಿನಲ್ಲಿ ಗುರಿ ಸಾಧನೆಗಾಗಿ ವ್ಯಾಪಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಾರ್ವಜನಿಕ ಆಡಳಿತವನ್ನು ಪುನರ್ಸಜ್ಜುಗೊಳಿಸುವುದು, ಸಾರ್ವಜನಿಕ ಕುಂದು ಕೊರತೆಗಳ ಪರಿಹಾರ ವ್ಯವಸ್ಥೆಯನ್ನು ಪುನಃಶ್ಚೇತನಗೊಳಿಸುವುದು, ಇ-ಆಡಳಿತ, ಡಿಜಿಟಲ್ ಇಂಡಿಯಾ ಇತ್ಯಾದಿಗಳ ಅನುಷ್ಟಾನ ಸರಕಾರದ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ’ಕನಿಷ್ಟ ಸರಕಾರ ಗರಿಷ್ಟ ಆಡಳಿತ” ಎಂಬ ಗುರಿಯನ್ನು ಆರಂಭದಿಂದ ಕೊನೆ ಹಂತದವರೆಗೂ ನಾಗರಿಕ ಕೇಂದ್ರಿತ ಆನ್ ಲೈನ್ ಸೇವೆಗಳನ್ನು ಆಧರಿಸಿ ಇ-ಆಡಳಿತದ ಮೂಲಕ ಸಾಧಿಸಲು ಉದ್ದೇಶಿಸಲಾಗಿದೆ.

ಉತ್ತಮ ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗಾಗಿ ಅಂತಾರಾಷ್ಟ್ರೀಯ ಸಹಯೋಗ ಕೋರುವ ಪ್ರಯತ್ನಗಳ ಅಂಗವಾಗಿ ಡಿ.ಎ.ಆರ್.ಪಿ.ಜಿ.ಯು ಇದುವರೆಗೆ ಚೀನಾ, ಮಲೇಶಿಯಾ, ಸಿಂಗಾಪುರಗಳ ಜತೆ ದ್ವಿಪಕ್ಷೀಯ ತಿಳುವಳಿಕಾ ಒಪ್ಪಂದಗಳನ್ನು ಹಾಗು ಬ್ರೆಜಿಲ್. ಮತ್ತು ದಕ್ಷಿಣ ಆಫ್ರಿಕಾ ಜತೆ ತ್ರಿಪಕ್ಷೀಯ ತಿಳುವಳಿಕಾ ಒಪ್ಪಂದಗಳನ್ನು ಮಾಡಿಕೊಂಡಿದೆ. ಯುನೈಟೆಡ್ ಕಿಂಗ್ಡಂ ಜತೆ ಇತ್ತೀಚಿಗಿನ ತಿಳುವಳಿಕಾ ಒಪ್ಪಂದ ಯುನೈಟೆಡ್ ಕಿಂಗ್ಡಂ ವಿಶ್ವಸಂಸ್ಥೆ ಇ-ಆಡಳಿತ ಸರ್ವೇಕ್ಷಣೆಯಲ್ಲಿ ಉನ್ನತ ಶ್ರೇಣಿ ಪಡೆದಿರುವ ಹಿನ್ನೆಲೆಯಲ್ಲಿ ಮಾಡಿಕೊಂಡ ಒಪ್ಪಂದವಾಗಿದೆ.