Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಂಪ್ರದಾಯಿಕ ವೈದ್ಯ ಪದ್ಧತಿಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಈಕ್ವಟೋರಿಯಲ್ ಗುನಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಈಕ್ವಟೋರಿಯಲ್ ಗುನಿಯಾ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ2018ರ ಏಪ್ರಿಲ್ 8ರಂದು ಅಂಕಿತ ಹಾಕಲಾಗಿತ್ತು.

ಈ ತಿಳಿವಳಿಕೆ ಒಪ್ಪಂದವು ಸಾಂಪ್ರದಾಯಿಕ ವೈದ್ಯ ಪದ್ಧತಿಯ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲಿದೆ.

ಸಂಶೋಧನೆ, ತರಬೇತಿ ಕೋರ್ಸ್ ಗಳು, ಸಮಾವೇಶಗಳು/ಸಭೆಗಳು ಮತ್ತು ಪರಿಣತರ ನಿಯುಕ್ತಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಆಯುಷ್ ಸಚಿವಾಲಯದ ಹಾಲಿ ಯೋಜನೆಗಳು ಮತ್ತು ಮಂಜೂರಾಗಿರುವ ಆಯವ್ಯಯದಿಂದಲೇ ಭರಿಸಲಾಗುವುದು.

ಹಿನ್ನೆಲೆ:

ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ, ಯುನಾನಿ, ಸಿದ್ಧ, ಸೋವಾ ರಿಗ್ಪಾ ಮತ್ತು ಹೋಮಿಯೋಪಥಿಯನ್ನು ಒಳಗೊಂಡಿರುವ ಸಾಂಪ್ರದಾಯಿಕ ವೈದ್ಯ ಪದ್ಧತಿಗಳು ಭಾರತದಲ್ಲಿ ಉತ್ತಮವಾಗಿ ಸಂಘಟಿತ ಸ್ವರೂಪದಲ್ಲಿವೆ. ಈ ಪದ್ಧತಿಗಳು ಜಾಗತಿಕ ಆರೋಗ್ಯ ಸನ್ನಿವೇಶದಲ್ಲಿ ಅದ್ಭುತ ಸಾಮರ್ಥ್ಯವನ್ನು ಹೊಂದಿವೆ. ಆಯುಷ್ ಸಚಿವಾಲಯವು ಸಾಂಪ್ರದಾಯಿಕ ವೈದ್ಯ ಪದ್ಧತಿಗಳನ್ನು ಉತ್ತೇಜಿಸುವ, ಜಾಗತೀಕರಣಗೊಳಿಸುವ ಮತ್ತು ಪ್ರಚಾರ ಮಾಡಲೇಬೇಕಾಗಿದ್ದು, ಮಲೇಷಿಯಾ, ಟ್ರಿನಿಡ್ಯಾಡ್ ಮತ್ತು ಟೊಬ್ಯಾಗೋ, ಹಂಗೇರಿ, ಬಾಂಗ್ಲಾದೇಶ, ನೇಪಾಳ, ಮಾರಿಷಸ್, ಮಂಗೋಲಿಯಾ, ಇರಾನ್ ಮತ್ತು ಸವೋ ತೋಮೆ ಹಾಗೂ ಪ್ರಿನ್ಸಿಪೆಯೊಂದಿಗೆ ಸಾಂಪ್ರದಾಯಿಕ ವೈದ್ಯಪದ್ಧತಿಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಪರಿಣಾಮಕಾರಿ ಕ್ರಮ ಕೈಗೊಂಡಿದೆ.

****