ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 7 ಎಲ್.ಕೆ.ಎಂ.ನಲ್ಲಿ ಸಹಕಾರಿ ಕ್ಷೇತ್ರದ ಪ್ರಗತಿ ಪರಿಶೀಲನೆಗಾಗಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವಲಯದಲ್ಲಿತಾಂತ್ರಿಕ ಪ್ರಗತಿಯ ಮೂಲಕ ಪರಿವರ್ತನೆಯನ್ನು ತರುವ ಸಹಕಾರ ಸೆ ಸಮೃದ್ಧಿಯನ್ನು ಉತ್ತೇಜಿಸುವುದು, ಸಹಕಾರಿ ಸಂಸ್ಥೆಗಳಲ್ಲಿ ಯುವಕರು ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಯೋಜನೆಗಳು ಮತ್ತು ಸಹಕಾರ ಸಚಿವಾಲಯದ ವಿವಿಧ ಉಪಕ್ರಮಗಳ ಬಗ್ಗೆ ಚರ್ಚೆಗಳು ನಡೆದವು.
ಭಾರತೀಯ ಸಹಕಾರಿ ವಲಯವನ್ನು ವಿಸ್ತರಿಸಲು ಜಾಗತಿಕ ಸಹಕಾರಿ ಸಂಸ್ಥೆಗಳೊಂದಿಗೆ ಸಹಭಾಗಿತ್ವದ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ಒತ್ತು ನೀಡಿದರು. ರಫು ಮಾರುಕಟ್ಟೆಗಳತ್ತ ಗಮನ ಹರಿಸಲು ಮತ್ತು ಕೃಷಿ ಪದ್ಧತಿಗಳನ್ನು ಸುಧಾರಿಸಲು ಸಹಕಾರಿ ಸಂಸ್ಥೆಗಳ ಮೂಲಕ ಮಣ್ಣಿನ ಪರೀಕ್ಷಾ ಮಾದರಿಯನ್ನು ಅಭಿವೃದ್ಧಿಪಡಿಸಲು ಅವರು ಸಲಹೆ ನೀಡಿದರು. ಹಣಕಾಸು ವಹಿವಾಟಿಗೆ ಅನುಕೂಲವಾಗುವಂತೆ ಯುಪಿಐ ಅನ್ನು ರುಪೇ ಕೆಸಿಸಿ ಕಾರ್ಡ್‌ಗಳೊಂದಿಗೆ ಸಂಯೋಜಿಸುವ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಸಹಕಾರಿ ಸಂಸ್ಥೆಗಳ ನಡುವೆ ಆರೋಗ್ಯಕರ ಸ್ಪರ್ಧೆಯ ಅಗತ್ಯವನ್ನು ಒತ್ತಿ ಹೇಳಿದರು.
ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸಹಕಾರಿ ಸಂಸ್ಥೆಗಳ ಸ್ವತ್ತುಗಳನ್ನು ದಾಖಲಿಸುವ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸಹಕಾರಿ ಕೃಷಿಯನ್ನು ಹೆಚ್ಚು ಸುಸ್ಥಿರ ಕೃಷಿ ಮಾದರಿಯಾಗಿ ಉತ್ತೇಜಿಸಲು ಅವರು ಸಲಹೆ ನೀಡಿದರು. ಸಹಕಾರಿ ವಲಯದಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ವಿಸ್ತರಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಅಗ್ರಿಸ್ಟಾಕ್) ಬಳಸಲು ಅವರು ಶಿಫಾರಸು ಮಾಡಿದರು, ರೈತರಿಗೆ ಸೇವೆಗಳಿಗೆ ಉತ್ತಮ ಪ್ರವೇಶವನ್ನು ಒದಗಿಸಿದರು. ಶಿಕ್ಷ ಣದ ಹಿನ್ನೆಲೆಯಲ್ಲಿ, ಶಾಲೆಗಳು, ಕಾಲೇಜುಗಳು ಮತ್ತು ಐಐಎಂಗಳಲ್ಲಿಸಹಕಾರಿ ಕೋರ್ಸ್‌ಗಳನ್ನು ಪರಿಚಯಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸೂಧಿರ್ತಿ ನೀಡಲು ಯಶಸ್ವಿ ಸಹಕಾರಿ ಸಂಸ್ಥೆಗಳನ್ನು ಉತ್ತೇಜಿಸಲು ಪ್ರಧಾನಿ ಪ್ರಸ್ತಾಪಿಸಿದರು. ಯುವ ಪದವೀಧರರನ್ನು ಕೊಡುಗೆ ನೀಡಲು ಪ್ರೋತ್ಸಾಹಿಸಬೇಕು ಮತ್ತು ಸಹಕಾರಿ ಸಂಸ್ಥೆಗಳಿಗೆ ಅವರ ಕಾರ್ಯಕ್ಷ ಮತೆಯ ಆಧಾರದ ಮೇಲೆ ಶ್ರೇಯಾಂಕ ನೀಡಬೇಕು, ಇದರಿಂದ ಏಕಕಾಲದಲ್ಲಿ ಸ್ಪರ್ಧೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸಬಹುದು ಎಂದು ಅವರು ಹೇಳಿದರು.
ಸಭೆಯಲ್ಲಿಪ್ರಧಾನಮಂತ್ರಿಯವರಿಗೆ ರಾಷ್ಟ್ರೀಯ ಸಹಕಾರ ನೀತಿ ಮತ್ತು ಕಳೆದ ಮೂರೂವರೆ ವರ್ಷಗಳಲ್ಲಿ ಸಹಕಾರ ಸಚಿವಾಲಯದ ಪ್ರಮುಖ ಸಾಧನೆಗಳ ಬಗ್ಗೆ ವಿವರಿಸಲಾಯಿತು. ‘ಸಹಕಾರ ಸೆ ಸಮೃದ್ಧಿ’ಯ ದೃಷ್ಟಿಕೋನವನ್ನು ಸಾಕಾರಗೊಳಿಸಿದ ಸಚಿವಾಲಯವು ವ್ಯಾಪಕ ಸಮಾಲೋಚನೆ ಪ್ರಕ್ರಿಯೆಯ ಮೂಲಕ ರಾಷ್ಟ್ರೀಯ ಸಹಕಾರ ನೀತಿ 2025ರ ಕರಡನ್ನು ರೂಪಿಸಿದೆ. ರಾಷ್ಟ್ರೀಯ ಸಹಕಾರ ನೀತಿ 2025 ನೀತಿಯ ಉದ್ದೇಶವು ಮಹಿಳೆಯರು ಮತ್ತು ಯುವಕರಿಗೆ ಆದ್ಯತೆ ನೀಡುವಾಗ ಗ್ರಾಮೀಣ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುವತ್ತ ಗಮನ ಹರಿಸಿ ಸಹಕಾರಿ ಕ್ಷೇತ್ರದ ವ್ಯವಸ್ಥಿತ ಮತ್ತು ಸಮಗ್ರ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವುದಾಗಿದೆ. ಇದು ಸಹಕಾರಿ ಆಧಾರಿತ ಆರ್ಥಿಕ ಮಾದರಿಯನ್ನು ಉತ್ತೇಜಿಸುವ ಮತ್ತು ದೃಢವಾದ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದಲ್ಲದೆ, ಈ ನೀತಿಯು ಸಹಕಾರಿಗಳ ತಳಮಟ್ಟದ ಪ್ರಭಾವವನ್ನು ಆಳಗೊಳಿಸಲು ಮತ್ತು ದೇಶದ ಒಟ್ಟಾರೆ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರದ ಕೊಡುಗೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಪ್ರಯತ್ನಿಸುತ್ತದೆ.
ಪ್ರಾರಂಭದಿಂದಲೂ, ಸಚಿವಾಲಯವು ಸಹಕಾರಿ ಚಳವಳಿಯನ್ನು ಉತ್ತೇಜಿಸಲು ಮತ್ತು ಬಲಪಡಿಸಲು ಏಳು ಪ್ರಮುಖ ಕ್ಷೇತ್ರಗಳಲ್ಲಿ60 ಉಪಕ್ರಮಗಳನ್ನು ಕೈಗೊಂಡಿದೆ. ಈ ಉಪಕ್ರಮಗಳಲ್ಲಿ ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ಮತ್ತು ಗಣಕೀಕರಣ ಯೋಜನೆಗಳ ಮೂಲಕ ಸಹಕಾರಿ ಸಂಸ್ಥೆಗಳ ಡಿಜಿಟಲೀಕರಣ ಮತ್ತು ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳನ್ನು (ಪಿಎಸಿಎಸ್) ಬಲಪಡಿಸುವುದು ಸೇರಿವೆ. ಹೆಚ್ಚುವರಿಯಾಗಿ, ಸಚಿವಾಲಯವು ಸಹಕಾರಿ ಸಕ್ಕರೆ ಕಾರ್ಖಾನೆಗಳ ದಕ್ಷ ತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವತ್ತ ಗಮನ ಹರಿಸಿದೆ.
ಭಾರತ ಸರ್ಕಾರವು ಪಿಎಸಿಎಸ್ ಮಟ್ಟದಲ್ಲಿ10 ಕ್ಕೂ ಹೆಚ್ಚು ಸಚಿವಾಲಯಗಳಿಂದ 15ಕ್ಕೂ ಹೆಚ್ಚು ಯೋಜನೆಗಳನ್ನು ಸಂಯೋಜಿಸುವ ಸಂಪೂರ್ಣ ಸರ್ಕಾರದ ವಿಧಾನದ ಮೂಲಕ ಸಹಕಾರಿ ಸಂಘಗಳಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಪರಿಣಾಮವಾಗಿ, ಸಹಕಾರಿ ವ್ಯವಹಾರಗಳಲ್ಲಿ ವೈವಿಧ್ಯೀಕರಣ, ಹೆಚ್ಚುವರಿ ಆದಾಯ ಉತ್ಪಾದನೆ, ಸಹಕಾರಿ ಸಂಸ್ಥೆಗಳಿಗೆ ಹೆಚ್ಚಿನ ಅವಕಾಶಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಸರ್ಕಾರಿ ಯೋಜನೆಗಳ ಸುಧಾರಿತ ಪ್ರವೇಶ ಅವಕಾಶ ಲಭಿಸಿದೆ. ಈ ಸಹಕಾರಿ ಸಂಘಗಳ ರಚನೆಗೆ ವಾರ್ಷಿಕ ಗುರಿಗಳನ್ನು ಸಹ ನಿಗದಿಪಡಿಸಲಾಗಿದೆ. ಸಹಕಾರಿ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಮತ್ತು ನುರಿತ ವೃತ್ತಿಪರರನ್ನು ಒದಗಿಸಲು, ಐಆರ್‍ಎಂಎ ಆನಂದ್ ಅನ್ನು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ವನ್ನಾಗಿ ಪರಿವರ್ತಿಸುವ ಮತ್ತು ಅದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯನ್ನಾಗಿ ಮಾಡುವ ಮಸೂದೆಯನ್ನು ಸಂಸತ್ತಿನಲ್ಲಿ ಪರಿಚಯಿಸಲಾಗಿದೆ.
ಸಹಕಾರಿ ಸಂಸ್ಥೆಗಳ ಬೆಳವಣಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿಅವುಗಳ ಪ್ರಮುಖ ಪಾತ್ರದ ಬಗ್ಗೆ ಪ್ರಧಾನಮಂತ್ರಿ ಅವರಿಗೆ ವಿವರಿಸಲಾಯಿತು. ಭಾರತದ ಆರ್ಥಿಕತೆಗೆ, ವಿಶೇಷವಾಗಿ ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಆರ್ಥಿಕ ಸೇರ್ಪಡೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆಯನ್ನು ಬಿಂಬಿಸಲಾಯಿತು. ಪ್ರಸ್ತುತ, ದೇಶದ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಜನರು ಸಹಕಾರಿ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದಾರೆ, ಇದರಲ್ಲಿ30 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವ್ಯಾಪಿಸಿರುವ 8.2 ಲಕ್ಷ ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು ಸೇರಿವೆ, 30 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದು ಸಭೆಯಲ್ಲಿ ಎತ್ತಿ ತೋರಿಸಲಾಯಿತು. ಆರ್ಥಿಕತೆಯ ಹಲವಾರು ಕ್ಷೇತ್ರಗಳಲ್ಲಿಸಹಕಾರಿ ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.
ಸಭೆಯಲ್ಲಿ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ; ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ; ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ, ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ-2 ಶ್ರೀ ಶಕ್ತಿಕಾಂತ ದಾಸ್; ಪ್ರಧಾನಮಂತ್ರಿ ಅವರ ಸಲಹೆಗಾರ ಶ್ರೀ ಅಮಿತ್ ಖರೆ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
*****