ಮಾರಿಷಸ್ ದೇಶದ ಪ್ಯಾಂಪ್ಲೆಮಸ್ನಲ್ಲಿರುವ ಸರ್ ಸೀವೂಸಗೂರ್ ರಾಮಗೂಲಂ ಸಸ್ಯೋದ್ಯಾನದಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ ಸೀವೂಸಗೂರ್ ರಾಮಗೂಲಂ ಮತ್ತು ಸರ್ ಅನೆರೂದ್ ಜುಗ್ನಾಥ್ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮಗೂಲಂ ಅವರು ಪ್ರಧಾನಮಂತ್ರಿಯವರೊಂದಿಗೆ ಪುಷ್ಪ ನಮನ ಸಲ್ಲಿಸಿದರು. ಮಾರಿಷಸ್ ನ ಪ್ರಗತಿಯಲ್ಲಿ ಹಾಗೂ ಭಾರತ-ಮಾರಿಷಸ್ ಬಾಂಧವ್ಯಕ್ಕೆ ಸದೃಢ ಬುನಾದಿ ಹಾಕಿಕೊಡುವಲ್ಲಿ ಈ ಇಬ್ಬರು ಮಹಾನ್ ನಾಯಕರ ಪರಿಶ್ರಮದ ಬಗ್ಗೆ ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಸ್ಮರಿಸಿದರು.
ಪುಷ್ಪ ನಮನದ ಬಳಿಕ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮಗೂಲಂ ಅವರು ಆ ಐತಿಹಾಸಿಕ ಉದ್ಯಾನವನದಲ್ಲಿ “ಒಂದು ಗಿಡ ತಾಯಿಯ ಹೆಸರಿನಲ್ಲಿ (ಏಕ್ ಪೆಡ್ ಮಾ ಕೆ ನಾಮ್)” ಉಪಕ್ರಮದ ಅಡಿಯಲ್ಲಿ ಸಸಿಯನ್ನು ನೆಟ್ಟರು.
*****