Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರ್ ಅನಿರೂದ್ ಜಗನ್ನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಲು ಮಾರಿಷಸ್ ಪ್ರಧಾನ ಮಂತ್ರಿ ಶ್ರೀ ಪ್ರವೀಂದ್ ಕುಮಾರ್ ಜಗನ್ನಾಥ್ ಅವರಿಗೆ ಪ್ರಧಾನಿ ದೂರವಾಣಿ ಕರೆ


ಮಾರಿಷಸ್ ಪ್ರಧಾನ ಮಂತ್ರಿ ಶ್ರೀ ಪ್ರವೀಂದ್ ಕುಮಾರ್ ಜಗನ್ನಾಥ್ ಅವರ ತಂದೆ ಸರ್ ಅನಿರೂದ್ ಜಗನ್ನಾಥ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾರಿಷಸ್ ಪ್ರಧಾನಿಯವರಿಗೆ ದೂರವಾಣಿ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ.

ಮಾರಿಷಸ್ ಪ್ರಧಾನ ಮಂತ್ರಿ ಮತ್ತು ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸರ್ ಅನಿರೂದ್ ಅವರ ಸುದೀರ್ಘ ಸಾರ್ವಜನಿಕ ಜೀವನವನ್ನು ಪ್ರಧಾನ ಮಂತ್ರಿಯವರು ಸಂದರ್ಭದಲ್ಲಿ ಸ್ಮರಿಸಿದರು.

ಎಲ್ಲಾ ರಾಜಕೀಯ ಪಕ್ಷಗಲೂ ಸೇರಿದಂತೆ ಭಾರತದಲ್ಲಿ ಸರ್ ಅನಿರೂದ್ ಜಗನ್ನಾಥ್ ಅವರ ಬಗ್ಗೆ ಇರುವ ಗೌರವದ ಬಗ್ಗೆ ತಿಳಿಸಿದ ಪ್ರಧಾನಿ, ಮಾರಿಷಸ್ ನೊಂದಿಗಿನ ಭಾರತದ ವಿಶೇಷ ಸ್ನೇಹ ವಿಕಸನದಲ್ಲಿ ಅವರು ವಹಿಸಿದ ಪ್ರಮುಖ ಪಾತ್ರವನ್ನು ಶ್ಲಾಘಿಸಿದರು.

ಅವರನ್ನು ಹೆಮ್ಮೆಯ ಪ್ರವಾಸಿ ಭಾರತೀಯಎಂದು ಕರೆದ ಪ್ರಧಾನಿ, ಸರ್ ಅನಿರೂದ್ ಅವರನ್ನು ಪ್ರವಾಸಿ ಭಾರತೀಯ ಸಮ್ಮಾನ್ ಮತ್ತು ಪದ್ಮವಿಭೂಷಣ ಗೌರವಗಳೊಂದಿಗೆ ಅವರನ್ನು ಗೌರವಿಸುವ ಭಾಗ್ಯವನ್ನು ಭಾರತ ಪಡೆಯಿತು ಎಂದು ಹೇಳಿದರು.

ಸರ್ ಅನಿರೂದ್ ಅವರ ಪರಂಪರೆಯ ನೆನಪಿಗಾಗಿ ವಿಶೇಷ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮತ್ತು ಗಾಢವಾಗಿಸಲು ಇಬ್ಬರೂ ನಾಯಕರು ಬದ್ಧವಿರುವುದಾಗಿ ತಿಳಿಸಿದರು.

***