Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರ್ಕಾರದ ಅಡಿಯಲ್ಲಿ ಅಭಿವೃದ್ಧಿ ಪಯಣವನ್ನು ಪ್ರದರ್ಶಿಸುವ ಜಾಲತಾಣದ ಕೊಂಡಿಯನ್ನು (ವೆಬ್ ಸೈಟ್  ಲಿಂಕ್ ) ಹಂಚಿಕೊಂಡ ಪ್ರಧಾನ ಮಂತ್ರಿ


ಕಳೆದ 9 ವರ್ಷಗಳಲ್ಲಿ ಸರ್ಕಾರದ ಅಡಿಯಲ್ಲಿ ಅಭಿವೃದ್ಧಿ ಪಯಣವನ್ನು ಪ್ರದರ್ಶಿಸುವ ಜಾಲತಾಣದ ಕೊಂಡಿಯನ್ನು (ವೆಬ್ ಸೈಟ್ ಲಿಂಕ್ ) ಪ್ರಧಾನಿ ಹಂಚಿಕೊಂಡಿದ್ದಾರೆ. ವೆಬ್ ಸೈಟ್ ಗೆ ಭೇಟಿ ನೀಡಿ ಸರ್ಕಾರದ ವಿವಿಧ ಯೋಜನೆಗಳಿಂದ ಜನರು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ವೀಕ್ಷಿಸುವಂತೆ ಶ್ರೀ ಮೋದಿ ಅವರು ಎಲ್ಲರಿಗೂ ಆಹ್ವಾನ ನೀಡಿದ್ದಾರೆ.

ಈ ಬಗ್ಗೆ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:

“ರಾಷ್ಟ್ರದ ಅಭಿವೃದ್ಧಿಗೆ  9 ವರ್ಷಗಳ ಅಚಲ ಸಮರ್ಪಣೆ.

ನಮ್ಮ ಅಭಿವೃದ್ಧಿಯ ಪಯಣದ ಒಂದು ಇಣುಕುನೋಟವನ್ನು ಪಡೆಯಲು nm-4.com/9yrsofseva ಈ ಸೈಟ್ ಗೆ ಭೇಟಿ ನೀಡುವಂತೆ ನಾನು ಎಲ್ಲರನ್ನೂ ಆಹ್ವಾನಿಸುತ್ತೇನೆ. ಸರ್ಕಾರದ ವಿವಿಧ ಯೋಜನೆಗಳಿಂದ ಜನರು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಪ್ರಮುಖವಾಗಿ ತೋರಿಸಲು ಇದು ಅವಕಾಶವನ್ನು ನೀಡುತ್ತದೆ. #9YearsOfSeva ” ಎಂದು ಅದರಲ್ಲಿ ಹೇಳಿದ್ದಾರೆ.

*****