Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರಿಯಾಗಿ ಊಟ ಮಾಡಿದರೆ ಉತ್ತಮವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ!: ಪ್ರಧಾನಮಂತ್ರಿ 


ಸರಿಯಾಗಿ ತಿನ್ನುವುದು ಮತ್ತು ಚೆನ್ನಾಗಿ ನಿದ್ದೆ ಮಾಡುವುದು ಪರೀಕ್ಷೆಯನ್ನು ಉತ್ತಮವಾಗಿ ಬರೆಯಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಪರೀಕ್ಷಾ ಪೇ ಚರ್ಚಾದ 4 ನೇ ಸಂಚಿಕೆಯನ್ನು ವೀಕ್ಷಿಸುವಂತೆ ವಿದ್ಯಾರ್ಥಿಗಳಿಗೆ ಒತ್ತಾಯಿಸಿದರು. 

ಕೇಂದ್ರ ಶಿಕ್ಷಣ ಸಚಿವಾಲಯದ ಎಕ್ಸ್‌ ತಾಣದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

“ನೀವು ಸರಿಯಾಗಿ ತಿನ್ನುತ್ತಿದ್ದರೆ, ನಿಮ್ಮ ಪರೀಕ್ಷೆಗಳನ್ನು ನೀವು ಉತ್ತಮವಾಗಿ ಬರೆಯಲು ಸಾಧ್ಯವಾಗುತ್ತದೆ!  ‘ಪರೀಕ್ಷಾ ಪೇ ಚರ್ಚಾ’ದ 4ನೇ ಸಂಚಿಕೆಯು ಪರೀಕ್ಷೆಯ ಪೂರ್ವ ತಯಾರಿಯ ಸಂದರ್ಭದಲ್ಲಿ ಚೆನ್ನಾಗಿ ತಿನ್ನಬೇಕು ಮತ್ತು ನಿದ್ದೆ ಮಾಡಬೇಕು.ಈ ವಿಷಯದ ಕುರಿತು ನಾಳೆ ಫೆಬ್ರವರಿ 14, 2025 ರಂದು ಶೋನಾಲಿ ಸಬೆರ್ವಾಲ್, ರುಜುತಾ ದಿವೇಕರ್ ಮತ್ತು ರೇವಂತ್ ಹಿಮತ್ಸಿಂಕಾ ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಆಲಿಸಿ. #PPC2025 #ExamWarriors

@foodpharmer2 ”

 

 

*****