Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಮುದ್ರಯಾನಕ್ಕೆ ನೆರವಾಗಲು (ಎಟಿಓಎನ್.ಎಸ್.) ಭಾರತ- ಬಾಂಗ್ಲಾ ದೇಶಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಸರ್ಕಾರದ ಶಿಪ್ಪಿಂಗ್ ಸಚಿವಾಲಯದ ಲೈಟಹೌಸ್ ಗಳು ಮತ್ತು ಹಗುರ ಹಡಗುಗಳ ಮಹಾ ನಿರ್ದೇಶನಾಲಯ (ಡಿಜಿಎಲ್.ಎಲ್.) ಮತ್ತು ಬಾಂಗ್ಲಾದೇಶ ಸರ್ಕಾರದ ಶಿಪ್ಪಿಂಗ್ ಇಲಾಖೆಯ ನಡುವೆ ಸಮುದ್ರಯಾನಕ್ಕೆ ನೆರವು ನೀಡುವ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಸಹಕಾರಕ್ಕೆ ಆಸ್ಪದ ನೀಡುತ್ತದೆ:

a. ಲೈಟ್ ಹೌಸ್ ಗಳು ಮತ್ತು ಸಂಕೇತಗಳ ವಿಸ್ತರಣೆಯ ಸಲಹೆ ನೀಡಲು;

b. ಹಡಗು ಸಂಚಾರ ಸೇವೆ ಮತ್ತು ಸ್ವಯಂ ಗುರುತು ಪತ್ತೆ ವ್ಯವಸ್ಥೆಯ ಸರಪಳಿ (ಎ.ಐ.ಎಸ್.)ಗೆ ಸಲಹೆ ನೀಡಲು; ಮತ್ತು

c. ಬಾಂಗ್ಲಾದೇಶಕ್ಕಾಗಿ ಎ ಟು ಎನ್ ವ್ಯವಸ್ಥಾಪಕರು ಮತ್ತು ತಂತ್ರಜ್ಞರಿಗೆ ಸಾಗರ ನೆರವಿನಅಂತಾರಾಷ್ಟ್ರೀಯ ಸಂಘಟನೆಯ ರೀತ್ಯ ಸಾಗರಯಾನ ಮತ್ತು ಲೈಟ್ ಹೌಸ್ ಪ್ರಾಧಿಕಾರ (ಐ.ಎ.ಎಲ್.ಎ.) ತರಬೇತಿ ವಿಧಾನದ ತರಬೇತಿ ನೀಡಲು.

ಈ ತಿಳಿವಳಿಕೆ ಒಪ್ಪಂದವು ಎರಡೂ ರಾಷ್ಟ್ರಗಳಿಗೆ ಈ ಕೆಳಗಿನ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ಅವಕಾಶ ನೀಡುತ್ತದೆ:

a. ಎ ಟು ಎನ್ ಗಳಿಗೆ ಸಲಹೆ ನೀಡಲು;

b. ಎ ಟು ಎನ್ ಸಿಬ್ಬಂದಿಗೆ ತರಬೇಟಿಯ ಮೂಲಕ ಶೈಕ್ಷಣಿಕ ಸಂವಾದಕ್ಕೆ ಅವಕಾಶ; ಮತ್ತು

c. ಎ ಟು ಎನ್ ಕ್ಷೇತ್ರದಲ್ಲಿ ಕೌಶಲ ವರ್ಧನೆಗಾಗಿ ಶಿಬಿರಗಳು/ಸಮಾವೇಶ ಆಯೋಜಿಸಲು ಅಗತ್ಯ ಸಹಕಾರ ಒದಗಿಸುವುದು.

ದಕ್ಷಿಣ ಏಷ್ಯಾ ವಲಯದಲ್ಲಿ ಎ ಟು ಎನ್ ತರಬೇತಿ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆಯ ಸಹಕಾರಕ್ಕೂ ಈ ತಿಳಿವಳಿಕೆ ಒಪ್ಪಂದ ಹೆಚ್ಚಿನ ನೆರವು ಒದಗಿಸುತ್ತದೆ. ಇದು ಐ.ಎ.ಎಲ್.ಎ. ಮಾದರಿ ಕೋರ್ಸ್ ಇ -141/1ನಂತೆ ಸಾಗರ ನೆರವು ನಿರ್ವಹಣೆ ತರಬೇತಿ ಶ್ರುತಪಡಿಸಲು ವೇಗ ನೀಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಐ.ಎ.ಎಲ್.ಎ. ಮಾರ್ಗದರ್ಶನದಂತೆ ವೃತ್ತಿಪರ ತರಬೇತಿ ಕೋರ್ಸ್ ನೀಡುತ್ತದೆ.

ದಕ್ಷಿಣ ಏಷ್ಯಾ ವಲಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಎರಡೂ ಮಹತ್ವದ ಅಭಿವೃದ್ಧಿಶೀಲ ರಾಷ್ಟ್ರಗಳಾಗಿವೆ. ಎರಡೂ ರಾಷ್ಟ್ರಗಳು ದೀರ್ಘಕಾಲೀನ ಸಾಂಪ್ರದಾಯಿಕ ಸ್ನೇಹ ಮತ್ತು ಸೌಹಾರ್ದ ಸಂಬಂಧವನ್ನು ಹೊಂದಿವೆ, ಇದು ಇತ್ತೀಚಿನ ವರ್ಷಗಳಲ್ಲಿ ಎರಡೂ ಕಡೆಗಳ ಗಣ್ಯರ ಹಲವು ದ್ವಿಪಕ್ಷೀಯ ಭೇಟಿಯಿಂದ ಹೊರಹೊಮ್ಮಿದ್ದಾಗಿದೆ.

ಹಿನ್ನೆಲೆ:

ಅಂತಾರಾಷ್ಟ್ರೀಯ ಸಾಗರ ಸಂಘಟನೆ (ಐಎಂಓ ಗಳು) ಅಗತ್ಯದ ರೀತ್ಯ, ವಿವಿಧ ರಾಷ್ಟ್ರಗಳ ಪ್ರಾಧಿಕಾರಗಳು, ತಮ್ಮ ಜಲದಲ್ಲಿ ಸಾಗರಯಾನಕ್ಕೆ ಅಂತಾರಾಷ್ಟ್ರೀಯ ಶಿಫಾರಸುಗಳು ಮತ್ತು ಮಾರ್ಗದರ್ಶನದಂತೆ ಸೂಕ್ತ ನೆರವು ಒದಗಿಸಬೇಕು. ಸಾಗರ ನೆರವು ಅಂದರೆ, ಲೈಟ್ ಹೌಸ್, ಸಂಕೇತ, ಡಿಜಿಪಿಎಸ್, ಪಥದರ್ಶಕ ಮತ್ತು ಮೂರಿಂಗ್ ಗುರುತುಗಳನ್ನು ಸುರಕ್ಷಿತ ಮತ್ತು ಸಮರ್ಥ ಸಾಗರಯಾನಕ್ಕೆ ಭಾರತದ ಜಲದಲ್ಲಿ ಒದಗಿಸಬೇಕು. ಡಿಜಿಎಲ್.ಎಲ್. ಲೈಟ್ ಹೌಸ್ ಎಂಜಿನಿಯರಿಂಗ್ ನಲ್ಲಿ ಪ್ರಾವಿಣ್ಯತೆಯನ್ನು ಪಡೆದಿದ್ದು, ದೊಡ್ಡ ದಾಸ್ತಾನು ಸಂಚರಣೆಗೆ ನೆರವು ನೀಡುತ್ತದೆ, ಇದರಲ್ಲಿ 193 ಲೈಟ್ ಹೌಸ್ಗಳು, 64 ರೆಕಾನ್ಸ್, 22 ಆಳ ಸಮುದ್ರದ ಪ್ರಕಾಶ ಬೆಳಕಿನ ಸಂಕೇತ, 23 ಡಿಜಿಪಿಎಸ್ ನಿಲ್ದಾಣಗಳು, 01 ಹಗುರ ಹಡಗು, 04 ಟೆಂಡರ್ ಹಡಗು, ರಾಷ್ಟ್ರೀಯ ಎಐಎಸ್ ಜಾಲ, ಗಲ್ಫ್ ಆಫ್ ಕಚ್ ನಲ್ಲಿ ಹಡಗು ಸಂಚಾರ ಸೇವೆ ಸೇರಿರುತ್ತದೆ.

ಐಎಎಲ್ಎ ಸಾಗರಯಾನದ ಎಲ್ಲ ನೆರವಿನ ಬಳಕೆಯನ್ನು ಸೌಹಾರ್ದ ಮತ್ತು ಸಹಯೋಗಗೊಳಿಸುವ ಅಂತಾರಾಷ್ಟ್ರೀಯ ಕಾಯವಾಗಿದೆ. ಭಾರತವು ಐಎಎಲ್ಎ ಮಂಡಳಿಯ ಸದಸ್ಯನಾದ ಡಿಜಿಎಲ್ಎಲ್ ಮೂಲಕ ಇದನ್ನು ಪ್ರತಿನಿಧಿಸುತ್ತದೆ. ಪ್ರಾದೇಶಿಕ ಸಹಕಾರದ ಹೆಜ್ಜೆಯಾಗಿ ಭಾರತ ಮತ್ತು ಬಾಂಗ್ಲಾದೇಶಗಳು ಎ ಟು ಎನ್ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಈ ತಿಳಿವಳಿಕೆ ಒಪ್ಪಂದದ ಪ್ರಕಾರ, ಡಿಜಿಎಲ್ಎಲ್ ಭಾರತ ಸರ್ಕಾರದ ಶಿಪ್ಪಿಂಗ್ ಸಚಿವಾಲಯದ ಪರವಾಗಿ ತನ್ನ ಬಾಂಗ್ಲಾ ಸಹವರ್ತಿಯಾದ ಬಾಂಗ್ಲಾದೇಶದ ಶಿಪ್ಪಿಂಗ್ ಸಚಿವಾಲಯದ, ಶಿಪ್ಪಿಂಗ್ ಇಲಾಖೆಗೆ ಎ ಟು ಎನ್ ಸೇರಿದಂತೆ ಹಡಗು ಸಂಚಾರ ಸೇವೆ, ಸ್ವಯಂ ಪತ್ತೆ ವ್ಯವಸ್ಥೆಯ ಸರಪಳಿ ಸೇರಿದಂತೆ ಸಲಹೆ ನೀಡುತ್ತದೆ. ಬಾಂಗ್ಲಾದೇಶದ ಎ ಟು ಎನ್ ಸಿಬ್ಬಂದಿಯನ್ನು ತರಬೇತುಗೊಳಿಸುವ ಸಲುವಾಗಿ, ಡಿಜಿಎಲ್ಎಲ್ ಐಎಎಲ್ಎ ತರಬೇತಿ ಮಾದರಿಯಲ್ಲಿ ಎ ಟು ಎನ್ ವ್ಯವಸ್ಥಾಪಕರು ಮತ್ತು ತಂತ್ರಜ್ಞರಿಗೆ ಶಿಬಿರ/ಸಮಾವೇಶ ಆಯೋಜಿಸುತ್ತದೆ. ಇದು ಬಾಂಗ್ಲಾದೇಶದ ಎ ಟು ಎನ್ ಸಿಬ್ಬಂದಿಯ ಸಾಮರ್ಥ್ಯ ವರ್ಧನೆಗೆ ನೆರವಾಗುತ್ತದೆ.

*****

AKT/VBA/SH