ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸಣ್ಣ ಉದ್ಯಮಗಳನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಇ-ಕಾಮರ್ಸ್ ನಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಲ್ಲಿ ಡಿಜಿಟಲ್ ಕಾಮರ್ಸ್ ಗಾಗಿ ಓಪನ್ ನೆಟ್ ವರ್ಕ್ ನ ಕೊಡುಗೆಯನ್ನು ಎತ್ತಿ ತೋರಿಸಿ, ಬೆಳವಣಿಗೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
Xನಲ್ಲಿ ಶ್ರೀ ಪಿಯೂಷ್ ಗೋಯಲ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು:
“ಒ ಎನ್ ಡಿ ಸಿ ಸಣ್ಣ ವ್ಯವಹಾರಗಳನ್ನು ಸಬಲೀಕರಣಗೊಳಿಸಲು ಮತ್ತು ಇ-ಕಾಮರ್ಸ್ ನಲ್ಲಿ ಕ್ರಾಂತಿಯನ್ನುಂಟುಮಾಡಲು ಕೊಡುಗೆ ನೀಡಿದೆ, ಇದರಿಂದಾಗಿ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
*****
ONDC has contributed to empowering small businesses and revolutionising e-commerce, thus playing a vital role in furthering growth and prosperity. https://t.co/foXY99jw3X
— Narendra Modi (@narendramodi) January 2, 2025