ನಮಸ್ಕಾರ ಗೆಳೆಯರೆ,
ಇಂದು ಚಳಿಗಾಲದ ಅಧಿವೇಶನದ ಮೊದಲ ದಿನ. ಈ ಅಧಿವೇಶನವು ಮಹತ್ವದ್ದಾಗಿದೆ.ಏಕೆಂದರೆ ಈ ಮೊದಲು ನಾವು ಆಗಸ್ಟ್ 15 ರ ಮೊದಲು ಭೇಟಿಯಾಗಿದ್ದೆವು.ಆಗಸ್ಟ್ 15 ರಂದು, ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಂಡಿದ್ದು, ಈಗ ನಾವು ಅಮೃತಕಾಲ ಪಯಣದಲ್ಲಿ ಮುನ್ನಡೆಯುತ್ತಿದ್ದೇವೆ. ನಮ್ಮ ಭಾರತ ದೇಶವು ಜಿ-20 ಅನ್ನು ಆಯೋಜಿಸುವ ಅವಕಾಶವನ್ನು ಪಡೆದಿರುವ ಸಮಯದಲ್ಲಿ ನಾವು ಇಂದು ಮತ್ತೆ ಭೇಟಿಯಾಗುತ್ತಿದ್ದೇವೆ. ವಿಶ್ವ ಸಮುದಾಯದಲ್ಲಿ ಭಾರತದ ಸ್ಥಾನವನ್ನು ಮೂಡಿಸಿದ ರೀತಿ, ಭಾರತದಿಂದ ನಿರೀಕ್ಷೆಗಳನ್ನು ಹೆಚ್ಚಿಸಿದ ರೀತಿ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತ ತನ್ನ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿರುವ ರೀತಿ, ಜಿ-20 ಅನ್ನು ಆಯೋಜಿಸುವುದು ಭಾರತದ ದೊಡ್ಡ ಸಾಧನೆಯಾಗಿದೆ.
ಈ ಜಿ-20 ಶೃಂಗಸಭೆ ಕೇವಲ ರಾಜತಾಂತ್ರಿಕ ಕಾರ್ಯಕ್ರಮವಲ್ಲ. ಈ ಜಿ-20 ಶೃಂಗಸಭೆಯು ಭಾರತದ ಸಾಮರ್ಥ್ಯವನ್ನು ಸಮಗ್ರ ರೀತಿಯಲ್ಲಿ ಜಗತ್ತಿಗೆ ಪ್ರಸ್ತುತಪಡಿಸುವ ಒಂದು ಅವಕಾಶವಾಗಿದೆ. ಪ್ರಜಾಪ್ರಭುತ್ವದ ತಾಯಿಯಾಗಿರುವ ಈ ನಮ್ಮ ದೇಶದ ಹಲವು ವೈವಿಧ್ಯಗಳು, ದೊಡ್ಡಮಟ್ಟದ ಸಾಮರ್ಥ್ಯ, ಇದು ಇಡೀ ಜಗತ್ತಿಗೆ ಭಾರತವನ್ನು ತಿಳಿದುಕೊಳ್ಳಲು ಒಂದು ದೊಡ್ಡ ಅವಕಾಶವಾಗಿದೆ.ಅಲ್ಲದೇ ಇಡೀ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ತೋರಿಸಲು ಭಾರತಕ್ಕೆ ದೊರೆತ ದೊಡ್ಡ ಅವಕಾಶವೂ ಆಗಿದೆ.
ಇತ್ತೀಚೆಗಷ್ಟೇ ಎಲ್ಲ ಪಕ್ಷದ ಮುಖಂಡರ ಜತೆ ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆ ನಡೆಸಿದ್ದೆ. ಅದರ ಪ್ರತಿಬಿಂಬ ಸದನಗಳಲ್ಲಿ ಖಂಡಿತ ಕಾಣಿಸುತ್ತದೆ. ಅದೇ ಧ್ವನಿ ಸದನದಿಂದ ಪ್ರತಿಧ್ವನಿಸಿ ಇದು ವಿಶ್ವದಲ್ಲಿ ಭಾರತದ ಸಾಮರ್ಥ್ಯವನ್ನು ಪ್ರಸ್ತುತಪಡಿಸಲು ಉಪಯುಕ್ತವಾಗಿದೆ. ಈ ಅಧಿವೇಶನದಲ್ಲಿ, ದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರಸ್ತುತ ಜಾಗತಿಕ ಪರಿಸ್ಥಿತಿಗಳಲ್ಲಿ ಭಾರತವನ್ನು ಮುನ್ನಡೆಸುವ ಹೊಸ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಈ ಅಧಿವೇಶನದಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು. ಎಲ್ಲ ರಾಜಕೀಯ ಪಕ್ಷಗಳು ಚರ್ಚೆಗೆ ಹೆಚ್ಚಿನ ಮೌಲ್ಯವನ್ನು ನೀಡಿ, ತಮ್ಮ ಅಭಿಪ್ರಾಯಗಳೊಂದಿಗೆ ನಿರ್ಧಾರಗಳಿಗೆ ಹೊಸ ಬಲವನ್ನು ನೀಡುತ್ತವೆ.ಈ ಮೂಲಕ ದೇಶದ ಅಭಿವೃದ್ಧಿಯ ದಿಕ್ಕನ್ನು ಹೆಚ್ಚು ಸ್ಪಷ್ಟವಾಗಿ ಎತ್ತಿ ಹಿಡಿಯಲು ಸಹಾಯ ಮಾಡುತ್ತವೆ ಎಂದು ನನಗೆ ಖಾತ್ರಿಯಿದೆ. ಸಂಸತ್ತಿನ ಈ ಅವಧಿಯ ಉಳಿದ ಸಮಯ, ನಾನು ಮೊದಲ ಬಾರಿಗೆ ಸದನಕ್ಕೆ ಬಂದವರು, ಹೊಸ ಸಂಸದರು, ಯುವ ಸಂಸದರು, ಇವರ ಭವಿಷ್ಯಕ್ಕಾಗಿ ಅವಕಾಶ ನೀಡುವಂತೆ ಎಲ್ಲ ಪಕ್ಷದ ನಾಯಕರಗೆ ಮನವಿ ಮಾಡುತ್ತೇನೆ.ಪ್ರಜಾಪ್ರಭುತ್ವದ ಭವಿಷ್ಯಕ್ಕಾಗಿ ಮುಂದಿನ ಪೀಳಿಗೆಗಳಿಗಾಗಿ ಅವರೆಲ್ಲರಿಗೂ ಗರಿಷ್ಠ ಅವಕಾಶಗಳನ್ನು ನೀಡಬೇಕು, ಚರ್ಚೆಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತೇನೆ.
ಈ ಹಿಂದೆ ಬಹುತೇಕ ಎಲ್ಲ ಪಕ್ಷಗಳ ಒಂದಿಬ್ಬರು ಸಂಸದರ ಜತೆ ಅನೌಪಚಾರಿಕ ಸಭೆ ನಡೆಸಿದಾಗಲೂ ಸದನದಲ್ಲಿ ಗದ್ದಲ ಉಂಟಾಗಿ ಸದನ ಮುಂದೂಡಿಕೆಯಾದಾಗ ಇದರಿಂದ ನಾವು ಸಂಸದರು ತುಂಬಾ ತೊಂದರೆ ಅನುಭವಿಸಿದ್ದೆವು. ಅಧಿವೇಶನ ನಡೆಯದ ಕಾರಣ, ಅಂತಹ ಸಂದರ್ಭದಲ್ಲಿ ಚರ್ಚೆಯ ಕೊರತೆಯಿಂದಾಗಿ, ನಾವು ಇಲ್ಲಿ ಏನು ಕಲಿಯಲು ಬಯಸುತ್ತೇವೆ, ನಾವು ಏನನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇವೆ ಎನ್ನುವುದೇ ಹೊಸಬರಿಗೆ ಯುವಕರಿಗೆ ತಿಳಿಯದಂತಾಗುತ್ತದೆ. ಏಕೆಂದರೆ ಇದು ಪ್ರಜಾಪ್ರಭುತ್ವದ ದೊಡ್ಡ ವಿಶ್ವವಿದ್ಯಾಲಯವಾಗಿದೆ ಎಂದು ಯುವ ಸಂಸದರು ಭಾವಿಸಿದ್ದಾರೆ. ಅದಕ್ಕೆ ನಾವೆಲ್ಲ ಅವಕಾಶ ನೀಡಬೇಕು. ಯುವಕರಿಗೆ ಕಲಿಸುವ ನಮಗೆ ಆ ಭಾಗ್ಯ ಸಿಗಬೇಕು. ಸದನದ ಕಾರ್ಯವೈಖರಿ ಬಹಳ ಮುಖ್ಯ. ಈ ಧ್ವನಿ ವಿಶೇಷವಾಗಿ ಎಲ್ಲ ಪಕ್ಷಗಳ ಯುವ ಸಂಸದರಿಂದಲೂ ಹೊರಹೊಮ್ಮುತ್ತದೆ.
ಪ್ರತಿಪಕ್ಷದ ಇತರ ಸಂಸದರೂ ಚರ್ಚೆಗಳಲ್ಲಿ ಮಾತನಾಡಲು ನಮಗೆ ಅವಕಾಶ ಸಿಗುವುದಿಲ್ಲ ಎಂದು ಹೇಳುತ್ತಿದ್ದಾರೆಂಬುದನ್ನು ನಾನು ಅರ್ಥೈಸಿಕೊಂಡಿದ್ದೇನೆ. ಎಲ ನೆಲದ ಎಲ್ಲ ನಾಯಕರು, ಎಲ್ಲ ಪಕ್ಷದ ನಾಯಕರು ಈ ಹೊಸ ಸಂಸದರ ನೋವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ದೇಶದ ಅಭಿವೃದ್ಧಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಅವರ ಉತ್ಸಾಹ ಮತ್ತು ಅನುಭವವು ಪ್ರಜಾಪ್ರಭುತ್ವಕ್ಕೆ ಬಹಳ ಮುಖ್ಯವಾಗಿದೆ. ಈ ಅಧಿವೇಶನವನ್ನು ಹೆಚ್ಚು ಉಪಯುಕ್ತವಾಗಿಸುವ ನಿಟ್ಟಿನಲ್ಲಿ ಎಲ್ಲ ಪಕ್ಷಗಳು, ಎಲ್ಲ ಸಂಸದರು ಸಾಮೂಹಿಕ ಪ್ರಯತ್ನವನ್ನು ಮಾಡಬೇಕೆಂದು ನಾನು ಬಲವಾಗಿ ಒತ್ತಾಯಿಸುತ್ತೇನೆ.
ಈ ಅಧಿವೇಶನದಲ್ಲಿ ಮತ್ತೊಂದು ಅದೃಷ್ಟವಿದೆ, ಇಂದು ಮೊದಲ ಬಾರಿಗೆ ನಮ್ಮ ಉಪರಾಷ್ಟ್ರಪತಿಯವರು ರಾಜ್ಯಸಭೆಯ ಸಭಾಪತಿಗಳಾಗಿ ತಮ್ಮ ಅವಧಿಯನ್ನು ಪ್ರಾರಂಭಿಸುತ್ತಾರೆ, ಇದು ಅವರ ಮೊದಲ ಅಧಿವೇಶನ ಮತ್ತು ಮೊದಲ ದಿನವಾಗಿದೆ. ನಮ್ಮ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಜೀ ಅವರು ಭಾರತದ ಶ್ರೇಷ್ಠ ಪರಂಪರೆ, ನಮ್ಮ ಬುಡಕಟ್ಟು ಸಂಪ್ರದಾಯಗಳ ಜೊತೆಗೆ ದೇಶದ ಹೆಮ್ಮೆಯನ್ನು ಹೆಚ್ಚಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಿದ್ದಾರೆ, ಅದೇ ರೀತಿಯಲ್ಲಿ ರೈತನ ಮಗನಾಗಿ ದೇಶದ ಹೆಮ್ಮೆಯನ್ನು ಉಪರಾಷ್ಟ್ರಪತಿಗಳ ಸ್ಥಾನಕ್ಕೆ ಗೌರವ ತಂದಿದ್ದಾರೆ. ಇಂದು ರಾಜ್ಯಸಭೆಯ ಸಭಾಪತಿಯವರಿಗೆ ಹೊಸ ಸಂಸದರಿಗೆ ಪ್ರೇರೇಪಿಸುತ್ತೇನೆ ಮತ್ತು ಪ್ರೋತ್ಸಾಹಿಸುತ್ತೇನೆ. ನಾನು ಅವರಿಗೆ ಶುಭ ಹಾರೈಸುತ್ತೇನೆ.
ತುಂಬಾ ಧನ್ಯವಾದಗಳು, ಸ್ನೇಹಿತರೇ.
ನಮಸ್ಕಾರ.
******
May the Winter Session of Parliament be a productive one. https://t.co/uYJvkP5nCj
— Narendra Modi (@narendramodi) December 7, 2022