Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ತಿನ ಉಭಯ ಸದನಗಳಲ್ಲಿ ಸಂವಿಧಾನದ 127ನೇ ತಿದ್ದುಪಡಿ ವಿಧೇಯಕ-2021 ಅಂಗೀಕಾರ; ಪ್ರಧಾನ ಮಂತ್ರಿ ಶ್ಲಾಘನೆ


ಸಂಸತ್ತಿನ ಉಭಯ ಸದನಗಳಲ್ಲಿ ಸಂವಿಧಾನದ 127ನೇ ತಿದ್ದುಪಡಿ ವಿಧೇಯಕ-2021 ಅಂಗೀಕಾರವಾಗಿರುವುದು ದೇಶದ ಪಾಲಿಗೆ ಐತಿಹಾಸಿಕ ಕ್ಷಣ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

ಕುರಿತು ಪ್ರಧಾನ ಮಂತ್ರಿ ಮಾಡಿರುವ ಟ್ವೀಟ್:

ಸಂಸತ್ತಿನ ಉಭಯ ಸದನಗಳಲ್ಲಿ ಸಂವಿಧಾನದ 127ನೇ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿರುವುದು ನಮ್ಮ ದೇಶದ ಪಾಲಿಗೆ ಐತಿಹಾಸಿಕ, ಹೆಮ್ಮೆಯ ಕ್ಷಣ. ಮಸೂದೆಯು ಸಾಮಾಜಿಕ ಸಬಲೀಕರಣವನ್ನು ಮತ್ತಷ್ಟು ಪ್ರಬಲಗೊಳಿಸಿದೆ. ದೇಶದ ಇತರೆ ಹಿಂದುಳಿದ ವರ್ಗ(ಒಬಿಸಿ)ಗಳ ಜನರಿಗೆ ಘನತೆ, ವಿಫುಲ ಅವಕಾಶ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರತಿಫಲಿಸುತ್ತಿದೆ.”

***