ಸಂಸತ್ತಿನ ಉಭಯ ಸದನಗಳಲ್ಲಿ ಸಂವಿಧಾನದ 127ನೇ ತಿದ್ದುಪಡಿ ವಿಧೇಯಕ-2021 ಅಂಗೀಕಾರವಾಗಿರುವುದು ದೇಶದ ಪಾಲಿಗೆ ಐತಿಹಾಸಿಕ ಕ್ಷಣ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಈ ಕುರಿತು ಪ್ರಧಾನ ಮಂತ್ರಿ ಮಾಡಿರುವ ಟ್ವೀಟ್:
“ಸಂಸತ್ತಿನ ಉಭಯ ಸದನಗಳಲ್ಲಿ ಸಂವಿಧಾನದ 127ನೇ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿರುವುದು ನಮ್ಮ ದೇಶದ ಪಾಲಿಗೆ ಐತಿಹಾಸಿಕ, ಹೆಮ್ಮೆಯ ಕ್ಷಣ. ಈ ಮಸೂದೆಯು ಸಾಮಾಜಿಕ ಸಬಲೀಕರಣವನ್ನು ಮತ್ತಷ್ಟು ಪ್ರಬಲಗೊಳಿಸಿದೆ. ದೇಶದ ಇತರೆ ಹಿಂದುಳಿದ ವರ್ಗ(ಒಬಿಸಿ)ಗಳ ಜನರಿಗೆ ಘನತೆ, ವಿಫುಲ ಅವಕಾಶ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರತಿಫಲಿಸುತ್ತಿದೆ.”
***
Passage of the Constitution (127th Amendment) Bill, 2021 in both Houses is a landmark moment for our nation. This Bill furthers social empowerment. It also reflects our Government’s commitment to ensuring dignity, opportunity and justice to the marginalised sections.
— Narendra Modi (@narendramodi) August 11, 2021