ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಂಸತ್ತಿನಲ್ಲಿ ವ್ಯಾಪಾರಿ ಹಡಗು ಮಸೂದೆ 2016ರನ್ನು ಮಂಡಿಸಲು ತನ್ನ ಒಪ್ಪಿಗೆ ನೀಡಿದೆ.
ವ್ಯಾಪಾರಿ ಹಡಗು ಮಸೂದೆ 2016, ವ್ಯಾಪಾರಿ ಹಡಗು ಕಾಯಿದೆ 1958ರ ಪರಿಷ್ಕರಿಸಿದ ಆವೃತ್ತಿಯಾಗಿದೆ. ಈ ವಿಧೇಯಕವು ವ್ಯಾಪಾರಿ ಹಡಗು ಕಾಯಿದೆ 1958 ಹಾಗೂ ಕರಾವಳಿ ಹಡಗು ಕಾಯಿದೆ 1838ನ್ನು ಸಹ ಬದಲಾವಣೆ ಮಾಡಲು ಅವಕಾಶ ನೀಡುತ್ತದೆ.
ಕಾಲಕಾಲಕ್ಕೆ ಕಾಯಿದೆಗೆ ತರಲಾಗಿರುವ ತಿದ್ದುಪಡಿಗಳ ಫಲವಾಗಿವ್ಯಾಪಾರಿ ಹಡಗು ಕಾಯಿದೆ 1958 ಒಂದು ದೊಡ್ಡ ಗಾತ್ರದ ಶಾಸನವಾಗಿ ಪರಿಣಮಿಸಿದೆ. 1966ರಿಂದ 2014ರ ಅವಧಿಯಲ್ಲಿ ಕಾಯಿದೆ 17 ಬಾರಿ ತಿದ್ದುಪಡಿಯಾಗಿದ್ದು, ಇದರಲ್ಲಿನ ಸೆಕ್ಷನ್ ಗಳ ಸಂಖ್ಯೆ 560 ದಾಟಿದೆ. ಈ ಕಟ್ಟಳೆಗಳನ್ನು ಅತಿ ಸೂಕ್ಷ್ಮವಾಗಿ 280ಕ್ಕೆ ಇಳಿಸಲಾಗಿದೆ. ಮಸೂದೆಯ ಕಟ್ಟಳೆಗಳು ಭಾರತದಲ್ಲಿ ವ್ಯಾಪಾರಿ ಹಡಗಿನ ಕಾನೂನು ಸರಳೀಕರಿಸುತ್ತದೆ. ಜೊತೆಗೆ ಕೆಲವು ಹೆಚ್ಚುವರಿ ಕಟ್ಟಳೆಗಳನ್ನು ಸೇರಿಸಲಾಗುವುದು ಮತ್ತು ಉಳಿದ ಕಟ್ಟಳೆಗಳನ್ನು ಸಮಗ್ರೀಕರಿಸಿ ಮತ್ತು ಸರಳೀಕರಿಸಿ ಪಾರದರ್ಶಕವಾಗಿ ಮತ್ತು ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಿ, ವಾಣಿಜ್ಯ ನಡೆಸಲು ಉತ್ತೇಜನ ನೀಡುತ್ತದೆ.
ವಿಧೇಯಕ ಶಾಸನವಾಗಿ ಜಾರಿಯಾಗಲು ಪ್ರತೀಹಾರಿಯಾದ ಪ್ರಮುಖವಾದ ಸುಧಾರಣೆಗಳು ಇಂತಿವೆ:
ಎ. ಭಾರತೀಯ ಟನ್ನೇಜ್ ಉತ್ತೇಜನೆ/ಭಾರತದಲ್ಲಿ ಕರಾವಳಿ ಹಡಗು ಅಭಿವೃದ್ಧಿಯನ್ನು ಈ ಮೂಲಕ ತ್ವರಿತಗೊಳಿಸುವುದು:-
ಎ).ಗಣನೀಯವಾಗಿ –ಸ್ವಾಮ್ಯದ ಹಡಗುಗಳು ಮತ್ತು ಬೇರ್ ಬೋಟ್ – ಕಮ್ – ಡಿಮೈಸ್ (ಬಿಬಿಸಿಡಿ) ಮೇಲಿನ ಹಡಗುಗಳಿಗೆ ಅವಕಾಶ ನೀಡುವುದು; ಭಾರತೀಯರು ಗುತ್ತಿಗೆಗೆ ನೀಡುವ ಹಡಗುಗಳನ್ನು ಭಾರತೀಯ ಧ್ವಜದ ಹಡಗೆಂದು ನೋಂದಾಯಿಸುವುದು.
ಬಿ). ಭಾರತೀಯ ನಿಯಂತ್ರಿತ ಟನ್ನೇಜ್ ಅನ್ನು ಪ್ರತ್ಯೇಕ ವಿಭಾಗವಾಗಿ ಪರಿಗಣಿಸಲಾಗಿದೆ;
ಸಿ). ಕಸ್ಟಂಸ್ ಪ್ರಾಧಿಕಾರಗಳ ಬಂದರು ಕ್ಲಿಯರೆನ್ಸ್ ಮತ್ತು ಕರಾವಳಿ ಕಾರ್ಯಾಚರಣೆಗೆ ಭಾರತೀಯ ಧ್ವಜದ ಹಡಗುಗಳಿಗೆ ಪರವಾನಗಿ ನೀಡಿಕೆಗೆ ಸಂಬಂಧಿಸಿದಂತೆ ಅವಶ್ಯಕತೆ ಪೂರೈಸುವುದು; ಮತ್ತು
ಡಿ).ಕರಾವಳಿ ಹಡಗುರವಾನೆ ಉತ್ತೇಜಿಸಲು ಮತ್ತು ಅಭಿವೃದ್ಧಿ ಪಡಿಸಲು ಕರಾವಳಿ ಹಡಗುಗಳಿಗೆ ಪ್ರತ್ಯೇಕ ನಿಯಮ ರೂಪಿಸುವುದು.
ಬಿ. ನಾವಿಕರ ಕಲ್ಯಾಣಕ್ಕೆ ಕ್ರಮಗಳನ್ನು ಪರಿಚಯಿಸುವುದು, ಅಂದರೆ:-
ಎ) ಕಡಲುಗಳ್ಳರ ವಶದಲ್ಲಿ ಒತ್ತೆಯಾಳುಗಳಾಗುವ ನಾವಿಕರು ಅವರು ಬಿಡುಗಡೆಯಾಗಿ ಮತ್ತು ಸುರಕ್ಷಿತವಾಗಿ ಮನೆಗೆ ಮರಳುವ ತನಕ ವೇತನ ಪಡೆಯಲಿದ್ದಾರೆ.
ಬಿ) ಯಾರ ನಿವ್ವಳ ಟನ್ನೇಜ್ 15ಕ್ಕಿಂತ ಕಡಿಮೆ ಇದೆಯೋ ಮತ್ತು ಯಾಂತ್ರಿಕವಲ್ಲದ ರೀತಿಯಲ್ಲಿ ತೇಲುವ, ಮೀನುಗಾರಿಕೆಯ ಹಡಗುಗಳು ಸೇರಿದಂತೆ ನೌಕೆಗಳ ಮಾಲೀಕರು ಕಡ್ಡಾಯವಾಗಿ ತಮ್ಮ ಹಡಗು ಸಿಬ್ಬಂದಿಗೆ ವಿಮೆ ಮಾಡಿಸಬೇಕು., ಮತ್ತು
ಸಿ) ನೌಕೆಯ ಮಾಲೀಕನ ಮುಂದೆ ಸಿಬ್ಬಂದಿಯಿಂದ ಒಪ್ಪಂದದ ಪರಿಚ್ಛೇದಗಳಿಗೆ ಅಂಕಿತ ಹಾಕುವ ಅಗತ್ಯ ಇನ್ನು ಮುಂದೆ ಇರುವುದಿಲ್ಲ.
ಸಿ. ಕೆಲವು ಉಳಿದ ವರ್ಗದ ನೌಕೆಗಳ ನೋಂದಣಿಯು ಯಾವುದೇ ಶಾಸನದ ವ್ಯಾಪ್ತಿಗೆ ಒಳಪಡುವುದಿಲ್ಲ ಮತ್ತು ಭದ್ರತೆ ಸಂಬಂಧಿತ ಅಂಶಗಳ ನಿಬಂಧನೆ ರೂಪಿಸುವುದು.
ಡಿ. ಎಲ್ಲ ಅಂತಾರಾಷ್ಟ್ರೀಯ ಸಾಗರ ಸಂಸ್ಥೆಗಳ (ಐ.ಎಂ.ಓ) ಸ್ಥಾಪನೆ ಒಪ್ಪಂದಗಳು/ಪ್ರೋಟೋಕಾಲ್ ಗಳು ಭಾರತೀಯ ಕಾನೂನಿನಲ್ಲಿ ಈ ವರೆಗೆ ಸೇರಿದವುಗಳಾಗಿದ್ದು (ಐ.ಎಂ.ಓ. ಸದಸ್ಯ ರಾಷ್ಟ್ರಗಳ ಆಡಿಟ್ ಯೋಜನೆಯ ಅವಶ್ಯಕ ಪೂರ್ವಾಪೇಕ್ಷಿತಗಳ ಅನುಸರಣೆ 1/1/2016ರಿಂದ ಕಡ್ಡಾಯವಾಗಿದೆ) ಅದರಲ್ಲಿ ವಿವಿಧ ಏಳು ಸಭೆಗಳಿಗೆ ಸಂಬಂಧಿಸಿದ ನಿಯಮ ಅಳವಡಿಸುವುದಾಗಿದೆ, ಅವುಗಳೆಂದರೆ
ಎ) 1969ರ ಮಧ್ಯಸ್ಥಿಕೆ ಸಭೆ,
ಬಿ) 1979ರ ಶೋಧ ಮತ್ತು ರಕ್ಷಣೆ ಸಭೆ,
ಸಿ) ನೌಕೆಗಳಿಂದ ಮಾಲಿನ್ಯ ತಡೆಗಾಗಿ ಪ್ರೋಟೋಕಾಲ್ ಅನೆಕ್ಸ್ VI ಕ್ಕೆ ಸಾಗರ ಮಾಲಿನ್ಯ ಸಮಾವೇಶ,
ಡಿ) 2004ರ ನೀಲುಭಾರ ಜಲದ ಮತ್ತು ಸೆಡಿಮೆಂಟ್ ನೌಕೆಗಳ ನಿರ್ವಹಣೆ ಮತ್ತು ನಿಯಂತ್ರಣ ಸಭೆ,
ಇ) 2007ರ ನೈರೋಬಿ ರೆಕ್ ತೆಗೆಯುವ ಸಭೆ,
ಎಫ್.) 1989ರ ನೌಕಾ ಸಂರಕ್ಷಮೆ ಸಭೆ,
ಜಿ) 2001ರ ಬಂಕರುಗಳ ತೈಲ ಮಾಲಿನ್ಯ ಹಾನಿ ಕುರಿತ ಅಂತಾರಾಷ್ಟ್ರೀಯ ಸಮಾವೇಶ.
ಇದಲ್ಲದೆ, ಭಾರತೀಯ ಹಡಗು ಕೈಗಾರಿಕೆಯ ಅನುಕೂಲತೆಗಾಗಿ ಸರಳೀಕೃತ ಆಡಳಿತ ಒದಗಿಸಲು ಹಾಲಿ ಇರುವ ಕಾಯಿದೆಯಲ್ಲಿ ವಿವಿಧ ಭಾಗದಲ್ಲಿ ಹಂಚಿಹೋಗಿರುವ ನೌಕೆಗಳ ಸಮೀಕ್ಷೆ, ಪರಿಶೀಲನೆ ಮತ್ತು ಪ್ರಮಾಣೀಕರಣವನ್ನು ಒಂದೆಡೆಗೆ ತರಲು ಅವಕಾಶ ನೀಡುತ್ತದೆ. ಕರಾವಳಿ ಹಡಗು ಕಾಯಿದೆ 1838, ಬ್ರಿಟಿಷರ ಕಾಲದ ಹಳೆಯ ಶಾಸನವಾಗಿದ್ದು, ಇದು ಸೌರಾಷ್ಟ್ರ ಮತ್ತು ಕಚ್ ನ ಸೀಮಿತ ಪ್ರದೇಶ ವ್ಯಾಪ್ತಿಯಲ್ಲಿ ಯಾಂತ್ರಿಕವಲ್ಲದ ಹಡಗುಗಳ ನೋಂದಣಿಗೆ ಅವಕಾಶ ನೀಡುತ್ತದೆ, ಇದನ್ನು ಬದಲಾಯಿಸಿ, ಇಡೀ ಭಾರತದ ಎಲ್ಲ ಹಡಗುಗಳನ್ನೂ ವ್ಯಾಪಾರಿ ಹಡಗು ಮಸೂದೆ 2016ರ ನಿಯಮಗಳಲ್ಲಿ ನೋಂದಣಿಗೆ ಸೇರಿಸಲು ಉದ್ದೇಶಿಸಲಾಗಿದೆ.
AKT/VB/SH