Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ತಿನಲ್ಲಿಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಧಾನಿ ಹೇಳಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉಪ ರಾಷ್ಟ್ರಪತಿ ಶ್ರೀ ಹಮೀದ್ ಅನ್ಸಾರಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲ ಸನ್ನಿವೇಶದಲ್ಲೂ ಶಾಂತವಾಗಿಯೇ 10 ವರ್ಷಗಳ ಕಾಲ ರಾಜ್ಯಸಭೆಯ ಸಭಾಪತಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅವರ ಕೌಶಲ, ತಾಳ್ಮೆ ಮತ್ತು ವಿವೇಕವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿಂದು ಶ್ರೀ ಹಮೀದ್ ಅನ್ಸಾರಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಶ್ರೀ ಅನ್ಸಾರಿ ಅವರ ದೀರ್ಘಕಾಲೀನ ಸಾರ್ವಜನಿಕ ಜೀವನದಲ್ಲಿ ಯಾವುದೇ ವಿವಾದಗಳು ಇರಲಿಲ್ಲ ಎಂದರು.

ಶ್ರೀ ಅನ್ಸಾರಿ ಅವರ ಕುಟುಂಬ ಪೀಳಿಗೆಗಳಿಂದ ಸಾರ್ವಜನಿಕ ಜೀವನದಲ್ಲಿದೆ ಎಂದೂ ಪ್ರಧಾನಿ ಹೇಳಿದರು. ವಿಶೇಷವಾಗಿ1948 ರಲ್ಲಿ ದೇಶವನ್ನು ಕಾಪಾಡಲು ಹುತಾತ್ಮರಾದ ಬ್ರಿಗೇಡಿಯರ್ ಉಸ್ಮಾನ್ ಅವರನ್ನು ಪ್ರಧಾನಿ ಸ್ಮರಿಸಿದರು.

10 ವರ್ಷಗಳ ಕಾಲ ಸುದೀರ್ಘವಾಗಿ ರಾಜ್ಯಸಭೆಯನ್ನು ನಡೆಸಿರುವ ಅನುಭವ ಇರುವ ಶ್ರೀ ಅನ್ಸಾರಿ ಅವರು ಮೇಲ್ಮನೆ ಹೇಗೆ ಹೆಚ್ಚು ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ತಮ್ಮ ಚಿಂತನೆಗಳನ್ನು ಬರವಣೆಗೆಯಲ್ಲಿ ದಾಖಲಿಸಬೇಕು ಎಂದು ಪ್ರಧಾನಿ ಸಲಹೆ ಮಾಡಿದರು.

****

AKT/SH