Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂವಿಧಾನದ (ಒಂದು ನೂರ ಇಪ್ಪತ್ತ ಮೂರನೇ ತಿದ್ದುಪಡಿ) ವಿಧೇಯಕ 2017 ಮತ್ತು (ii)ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ (ರದ್ದುಗೊಳಿಸುವಿಕೆ) ಮಸೂದೆ, 2017ನ್ನು ಸಂಸತ್ತಿನಲ್ಲಿ ಮಂಡಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,(I) (i) ಸಂವಿಧಾನದ (ಒಂದು ನೂರ ಇಪ್ಪತ್ತ ಮೂರನೇ ತಿದ್ದುಪಡಿ) ವಿಧೇಯಕ 2017 ಮತ್ತು (ii) ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ(ರದ್ದುಗೊಳಿಸುವಿಕೆ) ಮಸೂದೆ, 2017ನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ, ಮತ್ತು (II) ಹಿಂದುಳಿದ ವರ್ಗಗಳಿಗಾಗಿ ಪ್ರಸ್ತಾಪಿತ ಹೊಸ ರಾಷ್ಟ್ರೀಯ ಆಯೋಗಕ್ಕಾಗಿ ಹಾಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಹೊಂದಿರುವ ಕಚೇರಿಯ ಸಮುಚ್ಚಯ ಮತ್ತು ಹುದ್ದೆ/ನೌಕರರನ್ನು ಹಾಗೆಯೇ ಉಳಿಸಿಕೊಳ್ಳಲೂ ತನ್ನ ಅನುಮೋದನೆ ನೀಡಿದೆ.

ಈ ಅನುಮೋದನೆಯು ಸಾಂವಿಧಾನಿಕ ತಿದ್ದುಪಡಿಯನ್ನು ತರಲು ಅಂದರೆ ಸಂವಿಧಾನದ (ಒಂದು ನೂರ ಇಪ್ಪತ್ತ ಮೂರನೇ ತಿದ್ದುಪಡಿ) ಮಸೂದೆ 2017ನ್ನು

ಅ. 338 ಬಿ ವಿಧಿಯಡಿಯಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಆಯೋಗವೊಂದನ್ನು ಅಂದರೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಎಂಬ ಹೆಸರಿನಲ್ಲಿ ಸ್ಥಾಪಿಸಲು; ಮತ್ತು

ಬಿ. (ಬಿ) 366ನೇ ವಿಧಿಯಡಿಯಲ್ಲಿ ಪರಿಷ್ಕೃತ ವ್ಯಾಖ್ಯಾನದೊಂದಿಗೆ ಉಪ ನಿಯಮ (26C)ರ ಸೇರ್ಪಡೆ, “ಸಾಮಾಜಿಕ ಮತ್ತು ಶೈಕ್ಷಮಿಕ ಹಿಂದುಳಿದ ವರ್ಗಗಳು’ ಅಂದರೆ, ಅಂಥ ಹಿಂದುಳಿದ ವರ್ಗಗಳನ್ನು ವಿಧಿ 342 ಎ ಅಡಿಯಲ್ಲಿ ಈ ಉದ್ದೇಶಕ್ಕೆ ಮಾತ್ರ ಸಂವಿಧಾನದಲ್ಲಿ ತರಲಾಗುವುದು ಮತ್ತು

2. ಮಸೂದೆಯನ್ನು ಈ ಕೆಳಗಿನ ಉದ್ದೇಶಕ್ಕೆ ಮಂಡಿಸುವುದು:

a. ಉಳಿಸಿಕೊಳ್ಳುವ ಉಪ ನಿಯಮದೊಂದಿಗೆ ಅಂದರೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ(ರದ್ದುಪಡಿಸುವ)ಮಸೂದೆ 2017ರೊಂದಿಗೆಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಕಾಯಿದೆ 1993ರನ್ನು ರದ್ದುಪಡಿಸುವುದು; ಮತ್ತು

b. ಕೇಂದ್ರ ಸರ್ಕಾರ ಅದರ ಪರವಾಗಿ ನೇಮಕಾತಿ ಮಾಡುವ ದಿನಾಂಕದಿಂದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವನ್ನು ಬರಖಾಸ್ತು ಮಾಡುವುದು ಮತ್ತು ಈ ಕಾಯಿದೆಯ ಸೆಕ್ಷನ್ 3ರ ಉಪ ನಿಯಮ (1)ರ ಅಡಿಯಲ್ಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಸ್ಥಾಪನೆ ಮಾಡಿದ ದಿನದಿಂದ ಇದು ವಿಸರ್ಜನೆಯಾಗುವುದು.

3. (a) ಹಾಲಿ ಇರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದಲ್ಲಿ ಮಂಜೂರಾಗಿರುವ 52 ಹುದ್ದೆಗಳನ್ನು ಮತ್ತು ಭರ್ತಿಯಾಗಿರುವ ಸಿಬ್ಬಂದಿಯನ್ನು ವಿಧಿ 338 ಬಿ ಅಡಿ ಸ್ಥಾಪನೆಯಾಗುವ ಪ್ರಸ್ತಾಪಿತ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದಲ್ಲಿ ಸೇರಿಸಿಕೊಳ್ಳಲು; ಮತ್ತು

(b) ಹಾಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಹೊಂದಿರುವ ತ್ರೀಕೂಟ್ -1, ಭಿಕೈಜಿ ಕಾಮಾ ಪ್ಲೇಸ್, ನವದೆಹಲಿ -110066ರಲ್ಲಿ ಹೊಂದಿರುವ ಕಚೇರಿ ಕಟ್ಟಡವನ್ನು ಉಳಿಸಿಕೊಳ್ಳಲು ವಿಧಿ 338ಬಿ ಅಡಿಯಲ್ಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವನ್ನು ರಚಿಸಲಾಗುತ್ತಿದೆ.
ಈ ಮೇಲಿನ ನಿರ್ಧಾರಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಒಟ್ಟಾರೆ ಕಲ್ಯಾಣಕ್ಕೆ ಇಂಬು ನೀಡುತ್ತವೆ.

ಪ್ರಸ್ತಾಪಿತ ಕಾಯಿದೆಯ ರದ್ದತಿಯು ಸಂವಿಧಾನದ ವಿಧಿ 338 ಬಿ ಸೇರ್ಪಡೆಯೊಂದಿಗೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ರಚನೆಗಾಗಿ ಅಗತ್ಯವಾಗಿತ್ತು.

ಈ ನಿರ್ಧಾರವು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ವಿಧಿ 338ಬಿ ಅಡಿಯಲ್ಲಿ ಕಾರ್ಯನಿರ್ವಹಣೆಯನ್ನು ಮುಂದುವರಿಸಲು ಅವಕಾಶ ನೀಡುತ್ತದೆ.

****

AKT/VBA/SH