Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಸುಬ್ರಮಣಿಯ ಭಾರತಿಯವರನ್ನು ಸ್ಮರಿಸಿದ ಪ್ರಧಾನಮಂತ್ರಿ


ಶ್ರೀ ಸುಬ್ರಮಣಿಯ ಭಾರತಿಯವರನ್ನು ಅವರ ಜನ್ಮದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದರು.

ಮಹಾನ್‌ ವ್ಯಕ್ತಿ ಶ್ರೀ ಸುಬ್ರಮಣಿಯ ಭಾರತಿಯವರ ಜಯಂತಿಯಂದು ಸ್ಮರಿಸುತ್ತಿದ್ದೇನೆ. “ಮಹಾಕವಿ ಭಾರತಿಯರ್” ಅವರು, ದೇಶಭಕ್ತಿ , ಸಾಮಾಜಿಕ ಸುಧಾರಕ, ಅದ್ಬುತ ಕವಿ ಮತ್ತು ಅದಮ್ಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ನಿರ್ಭಯತೆಗಳಿಗೆ ಸದಾ ಹೆಸರುವಾಸಿಯಾಗಿದ್ದ ಇವರ ಚಿಂತನೆಗಳು ಮತ್ತು ಕೃತಿಗಳು ನಮಗೆಲ್ಲಾ ನಿರಂತರವಾಗಿ ಪ್ರೇರಣೆಯಾಗಿವೆ.

ನ್ಯಾಯ ಮತ್ತು ಸಮಾನತೆಯನ್ನು ಎಲ್ಲಕ್ಕಿಂತ ಮಿಗಿಲು ಎಂದು ಶ್ರೀ ಸುಬ್ರಮಣಿಯನ್‌ ಭಾರತಿಯವರು ಭಾವಿಸಿದ್ದರು. “ಹಸಿವಿನಿಂದ ಕೇವಲ ಒಬ್ಬನೇ ಒಬ್ಬ ವ್ಯಕ್ತಿ ಸಂಕಷ್ಟದಲ್ಲಿದ್ದಾನೆ ಎಂದಾದರೆ, ನಾವು ಸಂಪೂರ್ಣ ಪ್ರಪಂಚವನ್ನೇ ನಾವು ನಾಶ ಮಾಡುತ್ತೇವೆ” ಎಂದು ಅವರೊಮ್ಮೆ ಹೇಳಿದ್ದರು. ಇವುಗಳೆಲ್ಲಾ ಮಾನವರನ್ನು ಸಂಕಷ್ಟಗಳಿಂದ ಮೇಲೆತ್ತುವ ಹಾಗೂ ಇನ್ನೂ ಸಬಲೀಕರಣವಾಗಿಸುವತ್ತ ಅವರು ಹೊಂದಿದ್ದ ದೃಷ್ಠಕೋನಗಳಾಗಿವೆ” ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.