ಗುರುಪೂರ್ಣಿಮೆ (ಗುರುಪೂರಬ್)ಯ ಸಂದರ್ಭದಲ್ಲಿ ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು. ಗುರುನಾನಕ್ದೇ ವ್ ಜಿ ಮತ್ತು ಶ್ರೇಷ್ಠ ಗುರುಪರಂಪರೆಯ ಆಶೀರ್ವಾದದಿಂದಾಗಿ ಬಹುಶಃ ನನ್ನಂತಹ ಸಾಮಾನ್ಯ ವ್ಯಕ್ತಿಗೆ ಕೆಲವು ಒಳ್ಳೆಯ ಮತ್ತು ಸತ್ಕಾರ್ಯಗಳನ್ನು ಮಾಡಲು ಅವಕಾಶ ದೊರೆತಿದೆ. ಹಾಗಾಗಿ, ಇಂದು ಏನೆಲ್ಲಾ ಒಳ್ಳೆಯ ಕೆಲಸಗಳಾಗಿವೆಯೋ ಅವುಗಳೆಲ್ಲ ಹಿರಿಯರ ಮತ್ತು ಸಂತ ಶ್ರೇಷ್ಠರ ಆಶೀರ್ವಾದದಿಂದಲೇ ಸಾಧ್ಯವಾಗಿದೆ. ಆದ್ದರಿಂದ ಇಂತಹ ಗೌರವ ನನಗೆ ಸೇರಬೇಕಾಗಿಲ್ಲ. ಶತಮಾನಗಳಿಂದ ಇರುವ ಇಂತಹ ಶ್ರೇಷ್ಠ ವ್ಯಕ್ತಿಗಳು ಮತ್ತು ನಮ್ಮ ಹಿರಿಯರು ಈ ರಾಷ್ಟ್ರವನ್ನು ಕಟ್ಟಿದ್ದಾರೆ ಮತ್ತು ಅವರು ತಮ್ಮ ಬಲಿದಾನ ಮತ್ತು ತಪಸ್ಸಿನಿಂದ ರಾಷ್ಟ್ರವನ್ನು ಉಳಿಸಿದ್ದಾರೆ ಹಾಗಾಗಿ ಎಲ್ಲ ಗೌರವವೂ ಅವರಿಗೆ ಸಲ್ಲಬೇಕು.
ಗುಜರಾತ್ ನಲ್ಲಿ ಭೀಕರ ಭೂಕಂಪ ಸಂಭವಿಸಿದಾಗ ಗುರುನಾನಕ್ ದೇವ್ ಜಿ ಅವರು ನೆಲೆಸಿದ್ದ ಜಾಗದಲ್ಲಿರುವ ಗುರುದ್ವಾರವಿರುವ ಲಕ್ ಪತ್ ಪ್ರಾಂತ್ಯದ ಕಛ್ ಪ್ರದೇಶವೂ ಸಹ ಹಾನಿಗೊಳಗಾಗಿತ್ತು. ಅಲ್ಲಿ ಅವರ ಮರದ ಪಾದುಕೆಗಳು ಈಗಲೂ ಇವೆ. ಭೂಕಂಪದಿಂದಾಗಿ ಗುರುದ್ವಾರ ನಾಶವಾಗಿತ್ತು. ನಾನು ಗುಜರಾತ್ ನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಕೈಗೆತ್ತಿಕೊಂಡ ಮೊದಲ ಕೆಲಸವೆಂದರೆ ಕಛ್ ಭೂಕಂಪದ ಸಂತ್ರಸ್ತರ ಪುನರ್ ನಿರ್ಮಾಣ ಕೆಲಸವನ್ನು ಆರಂಭಿಸಿದ್ದು, ಆಗ ನಾನು ತೀವ್ರ ಹಾನಿಗೊಳಗಾಗಿದ್ದ ಗುರುದ್ವಾರಕ್ಕೂ ಭೇಟಿ ನೀಡಿದ್ದೆ. ಪರಂಪರೆಯ ಆಶೀರ್ವಾದದೊಂದಿಗೆ ನಾನು ಅಲ್ಲಿ ಕೆಲಸ ಕೈಗೆತ್ತಿಕೊಳ್ಳಬೇಕೆಂದು ನಿರ್ಧರಿಸಿ, ಮರು ನಿರ್ಮಾಣದ ಕಾರ್ಯವನ್ನು ಕೈಗೆತ್ತಿಕೊಂಡೆ. ಆದರೂ ನನಗೆ ಒಂದು ಆತಂಕವಿತ್ತು. ಅದೆಂದರೆ ಹಿಂದೆ ಅದರ ನಿರ್ಮಾಣಕ್ಕೆ ಯಾವ ಬಗೆಯ ವಸ್ತುಗಳನ್ನು ಬಳಕೆ ಮಾಡಲಾಗಿತ್ತೋ ಮತ್ತು ಒಳ್ಳೆಯ ಜನರು ಅದನ್ನು ನಿರ್ಮಿಸಿದ್ದರೋ ಅದೇ ರೀತಿ ಅದನ್ನು ಮರು ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದೆ. ಇಂದು ಆ ಜಾಗ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ.
ನಾವು ಸಾಮಾನ್ಯ ಜನರೂ ಸಹ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕೆಂಬ ಉದ್ದೇಶದಿಂದ ಉಡಾನ್ಯೋ ಜನೆಯನ್ನು ಆರಂಭಿಸಿದಾಗ ಅದರ ವ್ಯಾಪ್ತಿಗೆ ಸೇರ್ಪಟ್ಟ ಎರಡು ಪ್ರದೇಶಗಳಲ್ಲಿ ನಾಂದೇಡ್ ಸಾಹೀಬ್ ಕೂಡ ಒಂದು. ನಾಂದೇಡ್ ಸಾಹೀಬ್ ಅವರ ಆಶೀರ್ವಾದ ಇಂದಿಗೂ ನನ್ನ ಮೇಲೆ ಇದೆ ಎಂದು ನಾನು ಭರವಸೆ ಇಟ್ಟುಕೊಂಡಿದ್ದೇನೆ. ಪಂಜಾಬ್ ನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡುವ ಅದೃಷ್ಟ ನನಗೆ ದೊರಕಿತ್ತು ಮತ್ತು ಕ್ರಮೇಣ ನಾನು ನಿಮ್ಮೆಲ್ಲರ ಸಹಾಯದಿಂದ ಪಂಜಾಬ್ ಅನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡೆ. ಬಾದಲ್ ಜಿ ಅವರ ಕುಟುಂಬದೊಂದಿಗ ಸ್ನೇಹದಿಂದಾಗಿ ಹೆಚ್ಚು ತಿಳಿಯಲು ಅನುಕೂಲವಾಯಿತು. ಅವರ ಸ್ನೇಹವಿಲ್ಲದಿದ್ದರೆ ನಾನು ಗುಜರಾತ್ ನಲ್ಲಿ ಇದ್ದಂತೆ ಇಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಗುಜರಾತ್ ಮತ್ತು ಪಂಜಾಬ್ ನಡುವೆ ವಿಶೇಷ ಬಾಂಧವ್ಯವಿದೆ ಎಂದು ನಾನು ಸದಾ ನಂಬಿದ್ದೇನೆ. ಏಕೆಂದರೆ ‘ಪೂಂಜ್ – ಪ್ಯಾರೆ’ ಗುಜರಾತ್ ನ ದ್ವಾರಕಕ್ಕೆ ಸೇರಿದ್ದು, ಹಾಗಾಗಿ ನಾವು ಜಾಮ್ ನಗರ ಜಿಲ್ಲೆಯ ದ್ವಾರಿಕಾ ಜಲಪಾತದ ಬಳಿ ಗುರುಗೋವಿಂದ್ ಸಿಂಗ್ ಜಿ ಅವರ ಹೆಸರಿನಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದೇವೆ. ದೇಶದ ನಾನಾ ಭಾಗಗಳ ಇಂತಹ ಶ್ರೇಷ್ಠ ವ್ಯಕ್ತಿಗಳಿಂದಾಗಿ ನಮ್ಮ ದೇಶದಲ್ಲಿ ಏಕತೆಯ ಮಂತ್ರ ಮೊಳಗಿದೆ. ಗುರುನಾನಕ್ ದೇವ್ ಜಿ ಅವರ ಬೋಧನೆಗಳಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯ ಸಾರ ಅಡಗಿದೆ, ನಾವು ಅದನ್ನು ಅವರ “ಗುರ್ಬಾನಿ”ಗಳಲ್ಲಿ ಕಾಣಬಹುದಾಗಿದೆ. ನಾವು ಎಲ್ಲರೂ ಒಂದೇ ಎಂಬ ಭಾವನೆಯನ್ನು ನೋಡಬಹುದಾಗಿದೆ. ಪ್ರತಿಯೊಂದು ಪದವೂ ನಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಬೆಳಕು ತೋರುತ್ತದೆ. ಅವುಗಳಲ್ಲಿ ವರ್ಗ ಮತ್ತು ಜಾತಿಯ ತಾರತಮ್ಯಗಳನ್ನು ತೊಡೆದುಹಾಕುವ ಪ್ರಯತ್ನವಿದೆ ಮತ್ತು ಐಕ್ಯತೆಯನ್ನು ಉತ್ತೇಜಿಸಿ ದೇವರಿಗೆ ಭಕ್ತಿಯಿಂದ ಸಮರ್ಪಿಸಿಕೊಳ್ಳಬೇಕೆಂಬ ಭಾವನೆಯನ್ನು ಬೆಳೆಸುತ್ತದೆ. ಅಂತಹ ಶ್ರೇಷ್ಠ ಪರಂಪರೆಗಳು ಪ್ರತಿಯೊಬ್ಬರಿಗೂ ಸದಾ ಸ್ಫೂರ್ತಿ ನೀಡುತ್ತವೆ. ಗುರುನಾನಕ್ ಜಿ ಅವರ ಗುರ್ಬಾನಿಯ ಮಾರ್ಗದರ್ಶನಗಳಿಗಿಂತಹ ಶ್ರೇಷ್ಠವಾದುದು ಬೇರೊಂದಿಲ್ಲ. ಅವರ ಚಿಂತನೆಗಳಲ್ಲಿ ಏಕತೆ ಮತ್ತು ಸಮಗ್ರತೆ ಸಂದೇಶಗಳಿವೆ. ದೇಶದ ಏಕತೆ ಮತ್ತು ಸಮಗ್ರತೆಯ ಕಠಿಣ ಸಂದೇಶಗಳನ್ನು ನಾವು ಕಾಣಬಹುದಾಗಿದೆ.
1947ರಲ್ಲಿ ಕರ್ತಾರಪುರದಲ್ಲಿ ಏನಾಗಬೇಕಿತ್ತೋ ಅದು ಆಗಿಹೋಗಿದೆ. ಸರ್ಕಾರಗಳು ಮತ್ತು ಮಿಲಿಟರಿ ಮಧ್ಯೆ ಕೆಲವು ಸಂಗತಿಗಳು ನಡೆದಿವೆ. ಅವು ಹಾಗೇ ಇರಲಿ ಬಿಡಿ. ಅವುಗಳಿಂದ ಹೊರಬರುವ ಮಾರ್ಗದ ಬಗ್ಗೆ ನಾವು ಮಾತನಾಡೋಣ. ಆದರೂ, ಜನರ ನಡುವಿನ ಸಂಪರ್ಕ ಒಂದು ಬಲಿಷ್ಠ ಸಾಮರ್ಥ್ಯವಾಗಿದೆ. ಬರ್ಲಿನ್ ಗೋಡೆ ಬೀಳುತ್ತದೆ ಎಂದು ಯಾರು ಯೋಚಿಸಿದ್ದರು ? ಯಾರಿಗೆ ಗೊತ್ತು ಬಹುಶಃ ಗುರುನಾನಕ್ ಜಿ ಅವರ ಆಶೀರ್ವಾದದಿಂದಾಗಿ ಕರ್ತಾರಪುರ ಕಾರಿಡಾರ್ಕೇ ವಲ ಕಾರಿಡಾರ್ ಆಗೇ ಉಳಿಯದೇ, ಅದು ಜನರ ನಡುವಿನ ಸಂಪರ್ಕ ಸೇತುವೆಯಾಗಿ ಬದಲಾಗಬಹುದು. ಗುರ್ಬಾನಿಯ ಪ್ರತಿಯೊಂದು ಪದವೂ ನಮಗೆ ಬಲ ತಂದುಕೊಡುತ್ತದೆ. ನಾವು ‘ವಸುದೈವ ಕುಟುಂಬಕಂ’ ಅಂದರೆ ಇಡೀ ವಿಶ್ವವೇ ಒಂದು ಕುಟುಂಬವಿದ್ದಂತೆ ಎಂಬ ತತ್ವ ಆದರ್ಶಗಳನ್ನು ನೋಡಿಕೊಂಡು, ಪಾಲಿಸಿಕೊಂಡು ಬೆಳೆದವರು. ನಾವು ಸದಾ ಬೇರೆಯವರಿಗೆ ಕೆಟ್ಟದಾಗಬಾರದು ಎಂಬ ಮನೋಭಾವ ಹೊಂದಿರುವವರು. ಒಮ್ಮೆ ಸುಮ್ಮನೆ ಊಹಿಸಿಕೊಳ್ಳಿ ಸುಮಾರು 550 ವರ್ಷಗಳ ಹಿಂದೆ ಯಾವುದೇ ಬಗೆಯ ಸಾರಿಗೆ ವ್ಯವಸ್ಥೆಗಳು ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ಗುರುನಾನಕ್ ದೇವ್ ಜಿ ಅವರು ಅಸ್ಸಾಂನಿಂದ ಕಛ್ ವರೆಗೆ ಇಡೀ ದೇಶವನ್ನು ಬರಿಗಾಲಿನಲ್ಲಿ ಸುತ್ತಿದ್ದರು ಎಂಬುದನ್ನು, ಅವರು ಪಾದಯಾತ್ರೆ ಮೂಲಕ ಇಡೀ ಭಾರತವನ್ನು ಸುತ್ತಿದ್ದಾರೆ. ಅವರಿಗೆ ಅಂತಹ ಧ್ಯಾನ ಮತ್ತು ಬದ್ಧತೆ ಇತ್ತು. ಇಂದು ಗುರುಪೂರಬ್ ಸಂದರ್ಭದಲ್ಲಿ ನಿಮಗೆಲ್ಲಾ ಹೊಸ ಉತ್ಸಾಹ, ಸ್ಫೂರ್ತಿ ಮತ್ತು ಪ್ರೇರಣೆ ಸಿಗಲಿ, ಆ ಮೂಲಕ ದೇಶದ ಐಕ್ಯತೆ ಮತ್ತು ಸಮಗ್ರತೆ ಬಲವರ್ಧನೆಯಾಗಲಿ ಎಂದು ಬಯಸುತ್ತೇನೆ. ನಾವೆಲ್ಲ ಒಟ್ಟಾಗಿರುವುದರಿಂದ ಹೆಚ್ಚಿನ ಬಲವಿದೆ. ಲಂಗರ್ ಶ್ರೇಷ್ಠ ಪರಂಪರೆ ಕೇವಲ ಆಹಾರವನ್ನು ನೀಡುವ ವ್ಯವಸ್ಥೆಯಲ್ಲ ಅದು ನಮ್ಮ ಮೌಲ್ಯ ಮತ್ತು ಪರಂಪರೆಯ ಅಂಶವಾಗಿದೆ. ಇದರಲ್ಲಿ ಯಾವುದೇ ತಾರತಮ್ಯ ಅಥವಾ ಬೇಧ-ಭಾವವಿಲ್ಲ. ಅಂತಹ ಶ್ರೇಷ್ಠ ಕೊಡುಗೆಯನ್ನು ಒಂದು ಸರಳ ರೀತಿಯಲ್ಲಿ ಪಾಲಿಸಲಾಗುತ್ತಿದೆ. ಇಂದಿನ ಈ ಪವಿತ್ರ ಸಂದರ್ಭದಲ್ಲಿ ಗುರುಗ್ರಂಥ ಸಾಹೀಬ್ ಅವರ ಸಮಕ್ಷಮದಲ್ಲಿ ಇಂತಹ ಶ್ರೇಷ್ಠ ಪರಂಪರಗೆ ನನ್ನ ಪ್ರಣಾಮಗಳು. ಗುರುಗಳ ತ್ಯಾಗ ಮತ್ತು ತಪಸ್ಸಿಗೆ ನನ್ನ ವಂದನೆಗಳು. ಇಂದು ನನಗೆ ತೋರಿರುವ ಗೌರವ ನನಗೆ ಸಲ್ಲಬೇಕಾಗಿಲ್ಲ. ಈ ಗೌರವ ಶ್ರೇಷ್ಠ ಪರಂಪರೆಗೆ ಸಲ್ಲಬೇಕಾದದ್ದು, ನಾವು ಎಷ್ಟೇ ಕೊಡುಗೆ ನೀಡಿದರೂ ಅದು ಕಡಿಮೆಯೇ. ಒಳ್ಳೆಯ ಕೆಲಸ ಮಾಡಲು ನಮಗೆ
ಇನ್ನಷ್ಟು ಬಲ ತಂದುಕೊಡುತ್ತದೆ. ಮತ್ತೊಮ್ಮೆ ಎಲ್ಲರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.
Today, on the auspicious occasion of Shri Guru Nanak Dev Ji’ Jayanti, attended a programme at my colleague, Smt. @HarsimratBadal_ Ji’s residence.
— Narendra Modi (@narendramodi) November 23, 2018
Over Kirtans, we all remembered the noble ideals and message of Shri Guru Nanak Dev Ji. pic.twitter.com/Qm9vd7eQLz